ದೆಹಲಿ(ಸಂಸತ ಭವನ): ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಸಂಸತ್ನಲ್ಲಿ 2024ನೇ ಸಾಲಿನ ಬಜೆಟ್ ಮಂಡಿಸುತ್ತಿದ್ದಾರೆ. 7 ಲಕ್ಷ ರೂ. ಆದಾಯ ಇರೋರಿಗೆ ತೆರಿಗೆ ಇಲ್ಲ ಎಂದು ನಿರ್ಮಲಾ ಸೀತಾರಾಮನ್ ಅವರು ಘೋಷಣೆ ಮಾಡಿದ್ದಾರೆ.
ಸೀತಾರಾಮನ್ ಅವರ ಸತತ ಆರನೇ ಬಾರಿಗೆ ಬಜೆಟ್ ಮಂಡನೆ ಮಾಡ್ತಿದ್ದು ನಿರೀಕ್ಷೆಗಳು ಹೆಚ್ಚಾಗಿವೆ. ಯಾಕಂದರೆ ಚುನಾವಣೆ ವರ್ಷ ಹಿನ್ನೆಲೆಯಲ್ಲಿ ಮೋದಿ ನೇತೃತ್ವದ ಎನ್ಡಿಎ ಒಕ್ಕೂಟ ಹ್ಯಾಟ್ರಿಕ್ ಗೆಲುವಿನ ತಂತ್ರದಲ್ಲಿದೆ. ಹೀಗಾಗಿ ಬಂಪರ್ ಯೋಜನೆಗಳನ್ನು ಬಜೆಟ್ನಲ್ಲಿ ಘೋಷಣೆ ಮಾಡಲಿದ್ದಾರೆ.
ಬಜೆಟ್ ಹೈಲೈಟ್ಸ್
ಜನಸಂಖ್ಯೆ ಏರಿಕೆ ನಿಯಂತ್ರಣಕ್ಕೆ ಸಮಿತಿ ರಚನೆ
ಹೊಸ ಹೆದ್ದಾರಿಗಳ ನಿರ್ಮಾಣಕ್ಕೆ ನೀಲನಕ್ಷೆ
ಪ್ರವಾಸೋದ್ಯಮ 75 ಸಾವಿರ ಕೋಟಿ ಹಣ ಮೀಸಲು
ಟೂರಿಸಂ ಅಭಿವೃದ್ಧಿಗೆ ಬಡ್ಡಿ ರಹಿತ ಸಾಲ
ರಾಜ್ಯದ ಟೂರಿಸಂ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಲಾಗುತ್ತದೆ
ಅಮೃತ ಕಾಲ, ಕರ್ತವ್ಯ ಕಾಲ ಆರ್ಥಿಕತೆಗೆ ಉತ್ತಮ ರೀತಿಯಲ್ಲಿ ಬೂಸ್ಟ್
ಪ್ರವಾಸೋದ್ಯಮ ಕೇತ್ರದಲ್ಲಿ ಇದೀಗ ಭಾರೀ ಬದಲಾವಣೆ ಆಗಿದೆ
ಪ್ರವಾಸೋದ್ಯಮ ಅಭಿವೃದ್ಧಿಗೆ ಕೇಂದ್ರ ಸರ್ಕಾರ ಗಮನ ಹರಿಸಿದೆ
ಎಲೆಕ್ಟ್ರಿಕಲ್ ಬಸ್, ವಾಹನಗಳ ಉತ್ಪಾದನೆಗೆ ಹೆಚ್ಚಿನ ಒತ್ತು ನೀಡಲಾಗುತ್ತಿದೆ
40 ಸಾವಿರ ರೈಲ್ವೆ ಕೋಚ್ಗಳ ಬದಲಾವಣೆಗೆ ಕ್ರಮ ಕೈಗೊಂಡಿದ್ದೇವೆ
ಸಣ್ಣಪುಟ್ಟ ನಗರಗಳಿಗೂ ,ಮೆಟ್ರೋ ಯೋಜನೆ ವಿಸ್ತರಣೆ ಮಾಡಲಾಗುವುದು
ಮೆಟ್ರೋ ಮತ್ತು ನಮೋ ಭಾರತ್ ರೈಲ್ವೆಗೆ ಹೆಚ್ಚಿನ ಹೊತ್ತು
ವಿಮಾನಯಾನ ಕ್ಷೇತ್ರಕ್ಕೆ ಅಭಿವೃದ್ಧಿಗೆ ಹೆಚ್ಚಿನ ಹೊತ್ತು ನೀಡಲಾಗುತ್ತಿದೆ
ಸಂಶೋಧನೆ, ತಂತ್ರಜ್ಞಾನಕ್ಕೆ ಹೆಚ್ಚಿನ ಹೊತ್ತು
2024ರ ಲೋಕಸಭೆ ಚುನಾವಣೆಗೆ ಮುನ್ನ ಮಧ್ಯಂತರ ಬಜೆಟ್
ಮಧ್ಯಂತರ ಬಜೆಟ್ 2024-25ನ್ನ ಮಂಡಿಸುತ್ತಿದ್ದೇನೆ- ನಿರ್ಮಲಾ ಸೀತಾರಾಮನ್
ಆದಾಯ ತೆರಿಗೆ ನೀತಿಯಲ್ಲಿ ಯಾವುದೇ ಬದಲಾವಣೆ ಇಲ್ಲ
ಕಳೆದ 10 ವರ್ಷಗಳಲ್ಲಿ ತೆರಿಗೆ ಸಂಗ್ರಹ ದುಪ್ಪಟ್ಟು ಆಗಿದೆ
₹7 ಲಕ್ಷದವರೆಗೆ ತೆರಿಗೆ ವಿನಾಯಿತಿ ನೀಡಿದ ಕೇಂದ್ರ ಸರ್ಕಾರ
₹7 ಲಕ್ಷ ಆದಾಯ ಇರೋರಿಗೆ ತೆರಿಗೆ (ಟ್ಯಾಕ್ಸ್) ಇಲ್ಲ
ಜೈ ಜವಾನ್, ಜೈ ಕಿಸಾನ್, ಜೈ ವಿಜ್ಞಾನ್, ಜೈ ಅನುಸಂಧಾನ್
ದೆಶದಲ್ಲಿ ತಂತ್ರಜ್ಞಾನ ಕ್ಷೇತ್ರದಲ್ಲಿ ಹೆಚ್ಚಿನ ಬದಲಾವಣೆ ಆಗಿದೆ
ಲಕ್ಷ ದ್ವೀಪ ಸೇರಿ ಪ್ರವಾಸೋದ್ಯಮಕ್ಕೆ ಹೆಚ್ಚಿನ ಒತ್ತು ನೀಡಲು ಸರ್ಕಾರ ನಿರ್ಧಾರ
ಮತ್ಸ್ಯ ಯೋಜನೆಯಿಂದ 55 ಲಕ್ಷ ಹೊಸ ಉದ್ಯೋಗಗಳು ಸೃಷ್ಟಿಸುವ ಗುರಿ
ಮತ್ಸ್ಯ ಸಂಪದ ಯೋಜನೆಯಿಂದ ಮೀನುಗಾರಿಕೆ ಲಾಭ
ಕಿಸಾನ್ ಸಂಪದದಿಂದ 38 ಲಕ್ಷ ರೈತರಿಗೆ ಲಾಭ
ಎಣ್ಣೆ ಕಾಳು ಉತ್ಪಾದನೆಯಲ್ಲಿ ಆತ್ಮನಿರ್ಭರ ಯೋಜನೆ ಗುರಿ
43 ಕೋಟಿ ಸಾಲವನ್ನು ಮಂಜೂರು ಮಾಡಲಾಗಿದೆ
ಪ್ರಧಾನ ಮಂತ್ರಿ ಮುದ್ರಾಯೋಜನೆಯಡಿ ಸಾಲ ಮಂಜೂರು
ಲಕ್ಷಾಧಿಪತಿ ದೀದಿ ಯೋಜನೆ ಘೋಷಣೆ ಮಾಡಿದ ವಿತ್ತ ಸಚಿವೆ
3 ಕೋಟಿ ಮಹಿಳೆಯರನ್ನು ಲಕ್ಷಾಧಿಪತಿಗಳನ್ನಾಗಿ ಮಾಡಲು ಗುರಿ
1 ಕೋಟಿ ಮಹಿಳೆಯರು ಈಗ ಲಕ್ಷಾಧಿಪತಿಗಳು ಆಗಿದ್ದಾರೆ
ದೇಶದಲ್ಲಿ ಮಹಿಳಾ ಉದ್ಯಮಿಗಳ ಸಂಖ್ಯೆ ಗಣನೀಯವಾಗಿ ಹೆಚ್ಚಾಗಿದೆ
9 ರಿಂದ 14 ವರ್ಷದ ಬಾಲಕಿಯರಿಗೆ ಲಸಿಕೆ ನೀಡಲು ಒತ್ತು
ಅಂಗನವಾಡಿ ಹಾಗೂ ಆಶಾ ಕಾರ್ಯಕರ್ತೆಯರಿಗೆ ಈ ಯೋಜನೆ ಲಾಭ
ಆಶಾ ಕಾರ್ಯಕರ್ತೆಯರಿಗೆ ಆಯುಷ್ಮಾನ್ ಭಾರತ್ ಯೋಜನೆ
300 ಯುನಿಟ್ ವಿದ್ಯುತ್ ಉತ್ದಾದನೆಯ ಸೌಲಭ್ಯ ಒದಗಿಸಲಾಗುವುದು
1 ಕೋಟಿ ಮನೆಗಳ ಮೇಲೆ ಸೋಲಾರ್ ಪ್ಯಾನಲ್ ಅಳವಡಿಕೆ
ಪಿಎಂ ಆವಾಸ್ ಯೋಜನೆಯಲ್ಲಿ ಶೇ.70 ರಷ್ಟು ಮನೆ ನಿರ್ಮಾಣ ಮಾಡಲಾಗುವುದು
ಮುಂದಿನ 5 ವರ್ಷಗಳಲ್ಲಿ ಬಡವರಿಗಾಗಿ ಒಟ್ಟು 3 ಕೋಟಿ ಮನೆಗಳು ನಿರ್ಮಾಣ
ಉನ್ನತ ಶಿಕ್ಷಣ ಪಡೆಯುತ್ತಿರುವ ಮಹಿಳೆಯರ ಸಂಖ್ಯೆ ದೇಶದಲ್ಲಿ ಹೆಚ್ಚಾಗಿದೆ
NEP ಮೂಲಕ ಯುವಕರ ಅಭಿವೃದ್ಧಿಗೆ ಹೆಚ್ಚಿನ ಹೊತ್ತು
ಭಾರತದ ಆರ್ಥಿಕತೆ ಹಲವು ಸಕಾರಾತ್ಮಕ ಬದಲಾವಣೆ ಕಂಡಿದೆ
ಭಾರತೀಯರು ಭವಿಷ್ಯವನ್ನ ಭರವಸೆಯೊಂದಿಗೆ ಎದುರು ನೋಡ್ತಿದ್ದಾರೆ
ನರೇಂದ್ರ ಮೋದಿ ನಾಯಕತ್ವ ವಹಿಸಿದಾಗ ಸಾಕಷ್ಟು ಸವಾಲುಗಳಿದ್ದವು
ಸಬ್ ಕಾ ಸಾಥ್, ಸಬ್ ಕಾ ವಿಕಾಸ್ ಮಂತ್ರದಿಂದ ಮುನ್ನಡೆಯುತ್ತಿದ್ದೇವೆ
ನಮ್ಮ ಆರ್ಥಿಕತೆ ಈಗ ಹೊಸ ಮಜಲುಗಳನ್ನ ಕಂಡುಕೊಳ್ಳುತ್ತಿದ್ದೇವೆ