ಬೆಳಗಾವಿ: ಜಿಲ್ಲೆಯಲ್ಲಿ ಉದಯೋನ್ಮುಖ ಸಾಹಿತಿಗಳು ಹೆಚ್ಚಾಗಿ ಕಂಡುಬರುತ್ತಿರುವುದು ಸಂತಸ. ಸಾಹಿತ್ಯ ಕ್ಷೇತ್ರದಲ್ಲಿ ಅರಳುತ್ತಿರುವ ಪ್ರತಿಭೆಗಳನ್ನು ಗುರುತಿಸಿ, ಪ್ರೋತ್ಸಾಹ ನೀಡುತ್ತಿರುವ ಜಿಲ್ಲಾ ಲೇಖಕಿಯರ ಸಂಘದ ಕಾರ್ಯ ಶ್ಲಾಘನೀಯ ಲಿಂಗರಾಜ ಮಹಾವಿದ್ಯಾಲಯ ಕನ್ನಡ ಪ್ರಾಧ್ಯಾಪಕಿ ಡಾ.ರೇಣುಕಾ ಕಠಾರಿ ಹೇಳಿದರು.
ಇತ್ತಿಚೇಗೆ ಕನ್ನಡ ಸಾಹಿತ್ಯ ಭವನದಲ್ಲಿ ಜಿಲ್ಲಾ ಲೇಖಕಿಯರ ಸಂಘದ ವತಿಯಿಂದ ಆಯೋಜಿಸಲಾದ ದತ್ತಿ ನಿಧಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಬೆಳಗಾವಿಯೂ ಸಾಹಿತ್ಯ, ಕಲೆ ವಿಷಯದಲ್ಲಿ ಶ್ರೀಮಂತವಾಗಿದೆ. ಸಾಹಿತ್ಯಕ್ಕೆ ಹಿರಿಯ ಸಾಹಿತಿಗಳ ಕೊಡುಗೆ ಅಪಾರವಾಗಿದೆ. ಉದಯೋನ್ಮುಖ ಸಾಹಿತಿಗಳು ಹೆಚ್ಚೆಚ್ಚು ಬರಬೇಕು ಎಂದರು.
ಅಧ್ಯಕ್ಷತೆ ವಹಿಸಿದ ಜಯಶೀಲಾ ಬ್ಯಾಕೋಡ ಅವರು ಭುವನೇಶ್ವರಿ ಉತ್ಸವದ ಕಾರ್ಯಕ್ರಮ ಯಶಸ್ವಿಯಾಗಲು ಎಲ್ಲ ರೀತಿಯ ಸಹಾಯ ಸಹಕಾರ ನೀಡಿರುವ ರತ್ನಾ ಬೆಲ್ಲದ , ಶೈಲಜಾ ಬಿಂಗೆ, ಆಶಾ ಕಡಪಟ್ಟಿ , ಜ್ಯೋತಿ ಬದಾಮಿ ಡಾ, ಹೇಮಾ ಸೋನೊಳ್ಳಿ ಇನ್ನೂ ಅನೇಕರನ್ನು ಅವರ ಸೇವೆ ಸ್ಮರಿಸುತ್ತಾ ಅವರಿಗೆ ಗೌರವ ಸನ್ಮಾನ ,ಕಿರು ಕಾಣಿಕೆಗಳನ್ನು ನೀಡಿದರು.
ಈ ವೇಳೆ ಭುವನೇಶ್ವರಿ ಉತ್ಸವದ ಉರ್ಮಿಳಾ ನಾಟಕ ಮಾಡಿದ ಪಾತ್ರಧಾರಿಗಳಿಗೆ ವಿಶೇಷ ಗೌರವ ಸನ್ಮಾನಿಸಲಾಯಿತು.
ದತ್ತಿ ದಾನಿಗಳಾದ: ದಿ. ವಿಶಾಲ ಶಿವಾನಂದ ಹೆರೇಕರ ಸ್ಮರಣಾರ್ಥ ದತ್ತಿ ದಾನಿಗಳು ಸರಳಾ ಹೆರೇಕರ, ಯಶೋದಾಬಾಯಿ ಕಾಗತಿ ದತ್ತಿ ದತ್ತಿ ದಾನಿಗಳು ರಾಜನಂದಾ ಘಾರ್ಗಿ, ದಿ. ಶಂಕರ ಸಂಗಪ್ಪಾ ಪಾನಶೆಟ್ಟಿ ದತ್ತಿ ದತ್ತಿ ದಾನಿಗಳು ಪ್ರೇಮಾ ಪಾನಶೆಟ್ಟಿ, ದಿ. ಮೃಣಾಲಿನಿ ಅಂಗಡಿ ದತ್ತಿ ದತ್ತಿ ದಾನಿಗಳು.
ಈ ಸಂದರ್ಭದಲ್ಲಿ ಡಾ. ವಿಜಯಲಕ್ಷ್ಮಿ ಪುಟ್ಟಿ, ಪ್ರತಿಭಾ ಕಳ್ಳಿಮಠ , ವಿಜಯಲಕ್ಷ್ಮಿ ಯರಝರ್ವಿಮಠ ಪ್ರಾರ್ಥಿಸಿದರು, ಡಾ. ಭಾರತಿ ಮಠದ ಸ್ವಾಗತಿಸಿದರು, ಪ್ರಭಾ ಪಾಟೀಲ ಮತ್ತುಅನಿತಾ ಮಾಲಗತ್ತಿ ದತ್ತಿಧಾನಿಗಳ ಪರಿಚಯಿಸಿದರು . ಲೀಲಾ ಚೌಗಲೆ, ಡಾ ಅನ್ನಪೂರ್ಣ ಹಿರೇಮಠ ನಿರೂಪಿಸಿ, ವಂಧಿಸಿದರು.