ಧಾರವಾಡ, ಡಿ.27: ಇಂದು(ಡಿ.27) ಬೆಳಿಗ್ಗೆ ಧಾರವಾಡ ಉದ್ದಿಮೆದಾರ ಲಕ್ಷ್ಮೇಶ್ವರ ಅವರ ಮನೆಗೆ ಆಗಮಿಸಿದ್ದ ಶ್ರೀಮದ್ ಶ್ರೀಶೈಲ ಗಿರಿರಾಜ ಸೂರ್ಯಸಿಂಹಾಸನಾಧೀಶ್ವರ ಶ್ರೀ ಶ್ರೀ ಶ್ರೀ ೧೦೦೮ ಜಗದ್ಗುರು ಡಾ. ಚನ್ನಸಿದ್ಧರಾಮ ಪಂಡಿತಾರಾಧ್ಯ ಶಿವಾಚಾರ್ಯ ಭಗವತ್ಪಾದಂಗಳವರು ಆಗಮಿಸಿ, ಭಕ್ತರಿಗೆ ದರ್ಶನ ಆಶೀರ್ವಾದ ನೀಡಿದರು.
ಧಾರವಾಡ ವೀರಶೈವ ಜಂಗಮ ಸಂಸ್ಥೆಯ ಸಂಸ್ಥೆಯ ಕಟ್ಟಡ ಕಾಮಗಾರಿಗೆ ಒಂದು ಲಕ್ಷ ರೂ.ಗಳ ದೇಣಿಗೆ ನೀಡಿ, ಆಶಿರ್ವದಿಸಿದ್ದ ಪೂಜ್ಯ ಜಗದ್ಗುರು ಮಹಾಸನ್ನಿಧಿಯವರಿಗೆ ಧಾರವಾಡ ವೀರಶೈವ ಜಂಗಮ ಸಂಸ್ಥೆಯ ಪದಾಧಿಕಾರಿಗಳು ಗೌರವ ಸಮರ್ಪಣೆ ಮಾಡಿದರು.
ಈ ಸಂದರ್ಭದಲ್ಲಿ ಸಂಸ್ಥೆಯ ಹಿರಿಯರಾದ ಶ್ರೀ ಜಿ.ಆರ್.ಹಿರೇಮಠ, ಡಾ.ಎಸ್.ಜಿ.ಮಠದ, ಪ್ರೊ.ಜಗದೀಶ ಕಾಡದೇವರಮಠ, ಶ್ರೀ ಪಂಚಾಕ್ಷರಯ್ಯ ಹಿರೇಮಠ, ಶ್ರೀ ಪ್ರಭು ಹಿರೇಮಠ, ಡಾ.ಸುರೇಶ ಹಿರೇಮಠ, ಬಿಜೆಪಿ ಯುವ ಮುಖಂಡ,ನ್ಯಾಯವಾದಿ ಶಕ್ತಿ ಹಿರೇಮಠ ಮತ್ತು ಜಗದ್ಗುರುಗಳ ಆಪ್ತ ಸಹಾಯಕರಾದ ಮುತ್ತಯ್ಯ ಹಿರೇಮಠ ಇದ್ದರು.





























