ಬೆಳಗಾವಿ: ಕಾರಂಜಿಮಠದ ಗುರುಸಿದ್ಧ ಸ್ವಾಮೀಜಿ ಮಾತನಾಡಿ, ದೇಶದಲ್ಲಿ ಪ್ರಸ್ತುತ ವಿದ್ಯುತ್ ನ ಅಭಾವವಿದೆ. ಸರಕಾರ ಎತ್ತರದ ಕಟ್ಟಡಗಳ ಮೇಲೆ ಸೌರಶಕ್ತಿ ಬಳಕೆಗೆ ಸರಕಾರ ಅನುದಾನ ನೀಡುತ್ತಿರುವುದು ಶ್ಲಾಘನೀಯ. ನಗರದಲ್ಲಿ ಈ ಪ್ರಕ್ರಿಯೆ ಚಾಲ್ತಿಯಲ್ಲಿದೆ. ಸೌರಶಕ್ತಿಯ ಉಪಯೋಗವನ್ನು ಪಡೆಯಬೇಕು. ಸೌರಶಕ್ತಿಯಿಂದ ವಿದ್ಯುತ್ ಉತ್ಪಾದನೆ ಜಾಸ್ತಿಯಾಗಲಿ ಎಂದು ಹಾರೈಯಿಸುತ್ತೇನೆ ಎಂದರು.
ಸಾಹಿತಿ ಡಾ.ಸರಜೂ ಕಾರಟ್ಕರ ಮಾತನಾಡಿ, ಸೂರ್ಯನಿಂದ ದೊರೆಯುವ ನೈಸರ್ಗಿಕ ಶಕ್ತಿಯನ್ನು ಬಳಸಿಕೊಂಡು ವಿದ್ಯುತ್ ಪರಿವರ್ತನೆ ಮಾಡುವುದು ಮಾದರಿ ಕೆಲಸ. ಇಂತಹ ಯೋಜನೆಗಳು ಜಾರಿಗೆ ಬಂದು 20, 25 ವರ್ಷಗಳಾಗಿವೆ. ಇವುಗಳು ವಿದ್ಯುತ್ ಪೂರೈಕೆಯ ಸಂಸ್ಥೆಯ ಮೇಲಿನ ಅವಲಂಬನೆಯನ್ನು ತಪ್ಪಿಸುತ್ತದೆ ಎಂದರು .ಬಸವರಾಜ ನಿಂಬಾಳ, ನಿಲೇಶ ಪಾಟೀಲ, ಶೆಟ್ಟಿ ನಾಗರಾಜ್ ಉಪಸ್ಥಿತರಿದ್ದರು.