This is the title of the web page
This is the title of the web page

ನೋಂದಣಿ ಕಚೇರಿಗಳಲ್ಲಿನ ದಲ್ಲಾಳಿಗಳ ಹಾವಳಿಗೆ ಕಡಿವಾಣ ಮಾಡಿ  :    ಭೀಮಪ್ಪ ಗಡಾದ  ಒತ್ತಾಯ

ನೋಂದಣಿ ಕಚೇರಿಗಳಲ್ಲಿನ ದಲ್ಲಾಳಿಗಳ ಹಾವಳಿಗೆ ಕಡಿವಾಣ ಮಾಡಿ  :    ಭೀಮಪ್ಪ ಗಡಾದ  ಒತ್ತಾಯ

 

ಬೆಳಗಾವಿ :ಸುಮಾರು 4 ವರ್ಷಗಳಿಂದ ನೊಂದಣಿ ಹಾಗೂ ಮುದ್ರಾಂಕ ಶುಲ್ಕಗಳ ದರ ಹೆಚ್ಚುಕಳೆದ 5 ವರ್ಷಗಳಲ್ಲಿ ನೊಂದಣಿ ಮತ್ತು ಮುದ್ರಾಂಕ ಶುಲ್ಕಗಳ ಆದಾಯ 65,121 ಕೋಟಿ ರೂ.

ಆದಾಯವಿದ್ದರೂ ತುಕ್ಕು ಹಿಡಿದಿರುವ ಕಂದಾಯ ಇಲಾಖೆ ಚುರುಕು ಮುಟ್ಟಿಸುವ ಕಾರ್ಯ ಹಾಗೂ ಉಪ ನೋಂದಣಿ ಕಚೇರಿಗಳಲ್ಲಿ ಹೆಚ್ಚಾಗಿರುವ ದಲ್ಲಾಳಿಗಳ ಹಾವಳಿಗೆ ಕಡಿವಾಣ ಹಾಕಲು ಸರಕಾರ ಕ್ರಮ ವಹಿಸುವಂತೆ ಮೂಡಲಗಿಯ‌ ಮಾಹಿತಿ ಹಕ್ಕು ಹೋರಾಟಗಾರ ಭೀಮಪ್ಪ ಗಡಾದ ಅವರು ಒತ್ತಾಯಿಸಿದ್ದಾರೆ.

ಈ‌ ಕುರಿತು ಮಾಧ್ಯಮ ಹೇಳಿಕೆ ನೀಡಿರುವ ಅವರು, ಕಳೆದ 2018-19ರಿಂದ 2022-23ರ ವರೆಗಿನ 5 ವರ್ಷಗಳ ಅವಧಿಯಲ್ಲಿ ಕಂದಾಯ ಇಲಾಖೆಯ ನೊಂದಣಿ ಹಾಗೂ ಮುದ್ರಾಂಕ ಶುಲ್ಕಗಳಿಂದ ಒಟ್ಟು 65,121 ಕೋಟಿ 24 ಲಕ್ಷ ರೂ.ಗಳು ಸರ್ಕಾರದ ಖಜಾನೆಗೆ ಸಂದಾಯವಾಗಿರುವ ಅಂಶವು ಮಾಹಿತಿ ಹಕ್ಕಿನಿಂದ ಬೆಳಕಿಗೆ ಬಂದಿದೆ

ಸರ್ಕಾರಕ್ಕೆ ಈಗ 5 ಗ್ಯಾರಂಟಿ ಯೋಜನೆಗಳ ಸಲುವಾಗಿ ಅಗತ್ಯವಿರುವ ಹಣವನ್ನು ಕ್ರೂಢಿಕರಿಸಲು ಇವುಗಳ ದರ ಹೆಚ್ಚಿಸುವುದು ಅನಿವಾರ್ಯವಾಗಿದೆ. ಆದ್ದರಿಂದಲೇ ಅಕ್ಟೋಬರ್ 1ರಿಂದ ಜಾರಿಗೆ ಬರುವಂತೆ ಸ್ವತ್ತುಗಳ ಮಾರ್ಗಸೂಚಿ ದರವನ್ನು ಹೆಚ್ಚಿಸಲು ತೀರ್ಮಾನ ಮಾಡಿರುತ್ತದೆ.
ಇದರಿಂದಾಗಿ ಕೆಲವು ನಗರ ಪ್ರದೇಶದ ಮಾರ್ಗಸೂಚಿ ದರಗಳಲ್ಲಿ
ಪ್ರತಿಶತ 40ರಿಂದ 45ರಷ್ಟು ಹೆಚ್ಚಳ ವಾಗಬಹುದಾಗಿದೆ.ಕೇವಲ ನೊಂದಣಿ ಮತ್ತು ಮುದ್ರಾಂಕ ಶುಲ್ಕಗಳಿಂದಲೇ ಸಾರ್ವಜನಿಕರಿಂದ
ಪ್ರತಿವರ್ಷ ಇಷ್ಟೊಂದು ಬೃಹತ್ ಪ್ರಮಾಣದಲ್ಲಿ ಸರ್ಕಾರಕ್ಕೆ ಶುಲ್ಕ ಸಂದಾಯವಾಗುತ್ತಿದ್ದರು ಕೂಡಾ ಕಂದಾಯ ಇಲಾಖೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಅಧಿಕಾರಿಗಳು
ಸಿಬ್ಬಂದಿಗಳು ನಿರೀಕ್ಷಿಸಿದ ಪ್ರಮಾಣದಲ್ಲಿ ಜವಾಬ್ದಾರಿಯಿಂದ ತಮಗೆ ವಹಿಸಿರುವ
ಕೆಲಸಗಳನ್ನು ನಿರ್ವಹಿಸದೇ ಇರುವುದರಿಂದ ಇಲಾಖೆಯ ಆಡಳಿತ ಯಂತ್ರಕ್ಕೆ ತುಕ್ಕು ಹಿಡಿದಂತಾಗಿರುವುದು ಎಂದರೆ ತಪ್ಪಾಗಲಾರದು.
ಪ್ರತಿಯೊಂದು ಗ್ರಾಮ ಪಂಚಾಯತಿಗಳ ವ್ಯಾಪ್ತಿಯಲ್ಲಿ ಇರುವ ವಿವಿಧ ರೀತಿಯ
ಜಮೀನುಗಳು ಹಾಗೂ ಸ್ವತ್ತುಗಳ ಸರ್ಕಾರಿ ಮಾರ್ಗಸೂಚಿ ಬೆಲೆಯನ್ನು ಸಾರ್ವಜನಿಕರಿಗೆ ತಿಳಿಯುವ ಹಾಗೆ ಪ್ರಕಟಿಸದೆ ಇರುವುದರಿಂದ ಉಪನೊಂದಣಿ ಅಧಿಕಾರಿಗಳ ಕಛೇರಿಗಳಲ್ಲಿ ದಲ್ಲಾಳಿಗಳ ಹಾವಳಿ ಹೆಚ್ಚಾಗಲು ಕಾರಣವಾಗಿದೆ.
ಪಾರದರ್ಶಕ ಆಡಳಿತ ನೀಡುವುದಾಗಿ ಆರಂಭದಿಂದಲೂ ಹೇಳುತ್ತಾ ಬಂದಿರುವ
ಈಗಿನ ಕಾಂಗ್ರೇಸ್ ಸರ್ಕಾರವು ಕಂದಾಯ ಇಲಾಖೆ ಆಡಳಿತದಲ್ಲಿ ಸುಧಾರಣೆ ತಂದು ತುಕ್ಕು ಹಿಡಿದ ಆಡಳಿತಕ್ಕೆ ಚುರುಕು ನೀಡುವುದು ಅವಶ್ಯವಿದೆ ಎಂಬುದು ರಾಜ್ಯದ ಸಾರ್ವಜನಿಕರ
ಅಭಿಪ್ರಾಯವಾಗಿದೆ ಎಂದು ಗಡಾದ ಅವರು ಹೇಳಿದ್ದಾರೆ.