This is the title of the web page
This is the title of the web page

19ರಲ್ಲಿ 16ಮತ ಪಡೆದು ಅಧ್ಯಕ್ಷರಾಗಿ ಆಯ್ಕೆಯಾದ ಸಂಜಯ ಹಳ್ಳಿ.

19ರಲ್ಲಿ 16ಮತ ಪಡೆದು ಅಧ್ಯಕ್ಷರಾಗಿ ಆಯ್ಕೆಯಾದ ಸಂಜಯ ಹಳ್ಳಿ.

 

ರಾಮದುರ್ಗ: ಕೆ ಚಂದರಗಿ ಗ್ರಾಮ ಪಂಚಾಯತಿಗೆ ಸೋಮವಾರ ನಡೆದ ಎರಡನೇ ಅವಧಿಯ ಅಧ್ಯಕ್ಷ, ಉಪಾಧ್ಯಕ್ಷ ಚುನಾವಣೆಯಲ್ಲಿ ನೂತನ ಅಧ್ಯಕ್ಷರಾಗಿ ಸಂಜಯ ರಾಮಪ್ಪ ಹಳ್ಳಿ ಆಯ್ಕೆಯಾಗಿದ್ದಾರೆ. 19 ಸದಸ್ಯರ ಬಲದ ಗ್ರಾಮ ಪಂಚಾಯತಿಯಲ್ಲಿ 16 ಸದಸ್ಯರ ಬಲದೊಂದಿಗೆ ಸಂಜಯ ಹಳ್ಳಿ ಭರ್ಜರಿ ಗೆಲವು ಸಾಧಿಸಿದ್ದಾರೆ. ಈ ಮೂಲಕ ರಾಮದುರ್ಗ ತಾಲೂಕಿನ ಅತೀ ಚಿಕ್ಕ ವಯಸ್ಸಿನಲ್ಲೇ ಗ್ರಾಪಂ ಅಧ್ಯಕ್ಷ ಸ್ಥಾನ ಅಲಂಕರಿಸಿದ ಕೀರ್ತಿಗೆ ಪಾತ್ರರಾಗದರು. ಉಪಾಧ್ಯಕ್ಷರಾಗಿ ವಿಜಯಾ ಬನ್ನೂರ ಅವಿರೋಧವಾಗಿ ಆಯ್ಕೆಯಾದರು.
ಗೆಲುವಿನ ನಂತರ ಇವರ ಅಭಿಮಾನಿಗಳು ಗುಲಾಲ ಎರಚಿ, ಪಟಾಕಿ ಸಿಡಿಸಿ ಸಂಭ್ರಮಾಚರಣೆ ಮಾಡಿದರು. ನಂತರ ಮಾತನಾಡಿದ ನೂತನ ಅಧ್ಯಕ್ಷ ಸಂಜಯ ಹಳ್ಳಿ, ನನ್ನ ಗೆಲವಿಗೆ ಕಾರಣರಾದ ಸರ್ವ ಸದಸ್ಯರಿಗೂ ನಾ ಆಭಾರಿ. ನನ್ನ ಮೇಲೆ ವಿಶ್ವಾಸವಿಟ್ಟು ಅಧ್ಯಕ್ಷರನ್ನಾಗಿ ಮಾಡಿದ್ದಾರೆ. ಎಲ್ಲ ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಗ್ರಾಮದ ಸಮಗ್ರ ಅಭಿವೃದ್ಧಿಗೆ ಶ್ರಮಿಸಿ ತಾಲೂಕಿನಲ್ಲೇ ಮಾದರಿ ಗ್ರಾಮ‌ ಪಂಚಾಯತಿಯನ್ನಾಗಿಸಲು ಶ್ರಮಿಸುವೆ ಎಂದು ತಿಳಿಸಿದರು.

ಕೋರ್ಟ್
ಅಧಿಕಾರ ಇಲ್ಲದೇ ಇದ್ದಾಗಲೂ ನಾನು ಅನೇಕ ಸಮಾಜಮುಖಿ ಕಾರ್ಯಗಳು ಮಾಡಿದ್ದೇನೆ. ಕಷ್ಟದಲ್ಲಿ ಇದ್ದವರಿಗೂ ಸಹಾಯ ಹಸ್ತಚಾಚಿದ್ದೇನೆ. ಇದೀಗ ಅಧಿಕಾರ ಸಿಕ್ಕಿದೆ. ಹೀಗಾಗಿ ಜನ ಸೇವೆ ಮಾಡಲು ಇನ್ನಷ್ಟು ಬಲ ಬಂದಿದೆ. ಸಮಾಜ ಸೇವೆಯೊಂದಿಗೆ ಗ್ರಾಪಂ ಅಭಿವೃದ್ಧಿಗೆ ಶ್ರಮಿಸಿ, ಜನರಿಗೆ ನೆಮ್ಮದಿ ಬದುಕು ನೀಡಲು ಶ್ರಮಿಸುವೆ.
-ಸಂಜಯ ಹಳ್ಳಿ, ಕೆ.ಚಂದರಗಿ ಗ್ರಾಪಂ ನೂತನ ಅಧ್ಯಕ್ಷ.