This is the title of the web page
This is the title of the web page

ಅಕ್ರಮ ಮರಳು ಸಾಗಾಣಿಕೆ ವಿರುದ್ದ ಕ್ರಮಕ್ಕೆ ಆಗ್ರಹ

ಅಕ್ರಮ ಮರಳು ಸಾಗಾಣಿಕೆ ವಿರುದ್ದ ಕ್ರಮಕ್ಕೆ ಆಗ್ರಹ

ಯಮಕನಮರಡಿ: ಹುಕ್ಕೇರಿ ತಾಲೂಕಿನ ಹಿಡಕಲ್ ಜಲಾಶಯದ ಹಿನ್ನೀರಿನ ಗ್ರಾಮಗಳಾದ ಜಿನರಾಳ ಮತ್ತು ಬೇಡರಹಟ್ಟಿ ಗ್ರಾಮಗಳ ವ್ಯಾಪ್ತಿಯಲ್ಲಿ ಕಾನೂನು ಬಾಹಿರವಾಗಿ ಅಕ್ರಮವಾಗಿ ಮರಳು ಸಾಗಾಣಿಕೆ ಮಾಡುತ್ತಿರುವ ಮೇಲೆ ಕಾನೂನು ಕ್ರಮ ಜರುಗಿಸಬೇಕೆಂದು ಜಿನರಾಳ ಗ್ರಾಮದ ಶ್ರೀ ಮಹರ್ಷಿ ವಾಲ್ಮೀಕ ಯುವಕ ಮಂಡಳ ಪದಾಧಿಕಾರಿಗಳು ಆಗ್ರಹಿಸಿದ್ದಾರೆ. ಈ ಕುರಿತು ಅವರು ದಿ. ೦೨ ರಂದು ಹಿಡಕಲ್ ಡ್ಯಾಮಿನ ಕರ್ನಾಟಕ ನೀರಾವರಿ ನಿಗಮದ ಜಿ.ಆರ್.ಬಿ.ಸಿ.ಸಿ. ವಿಭಾಗ ನಂ ೨ ರ ಕಚೇರಿಗೆ ಬೇಟಿ ನೀಡಿ ಮನವಿ ಸಲ್ಲಿಸಿದ್ದಾರೆ. ಅವರು ಮನವಿಯಲ್ಲಿ ನಮ್ಮ ಭಾಗದಲ್ಲಿ ಮರಳು ಮಾಫಿಯಾ ರಾಜಾರೋಷವಾಗಿ ನಡೆಸಿರುವುದು ಮತ್ತು ಮರಳು ಗುತ್ತಿಗೆದಾರರು ತಮ್ಮ ಗುಂಡಾಗಿರಿಯನ್ನು ಪ್ರದರ್ಶಿಸುತ್ತಿರುವುದು ಸ್ಪಷ್ಟವಾಗಿದೆ. ಅಕ್ರಮ ಮರಳು ಸಾಗಾಣಿಕೆಯಿಂದ ಸದರಿ ಭಾಗದ ಜಮೀನಿನ ಫಲವತ್ತಾದ ಮಣ್ಣಿನ ಸೋರಿಕೆಯಾಗಿದೆ ಹಾಗೂ ಕುಡಿಯುವ ನೀರಿನ ತೊಂದರೆಯಾಗಿದೆ. ಅದೇ ರೀತಿ ಗ್ರಾಮದ ಸಮೀಪದಲ್ಲಿ ಅಕ್ರಮ ಮರಳನ್ನು ತೆಗೆದು ಸುಮಾರು ೫೦ ರಿಂದ ೬೦ ಪೂಟಕ್ಕಿಂತ ಹೆಚ್ಚಿನ ತಗ್ಗುಗಳನ್ನು ತಗೆದಿದ್ದು, ಇವುಗಳಲ್ಲಿ ಸುಮಾರು ಜಾನುವಾರುಗಳು ಬಿದ್ದು ಸಾವನ್ನಪ್ಪಿವೆ.
ಹಾಗೂ ಅಕ್ರಮ ಮರಳು ಸಾಗಾಣಿಕೆಯಿಂದ ಟಿಪ್ಪರಗಳು ಟ್ರಾಕ್ಟರಗಳು ಸದರಿ ಭಾಗದಲ್ಲಿ ರಸ್ತೆಯ ಹಂದಾದುAದಿ ವಾಹನ ಓಡಿಸುವದಕ್ಕೆ ಅನೇಕ ಅಫಘಾತಗಳು ಸಂಭವಿಸಿವೆ. ತಪಿಸ್ಥತರ ಮೇಲೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಶ್ರೀ ಮಹರ್ಷಿ ವಾಲ್ಮೀಕಿ ಯುವಕ ಮಂಡಳದ ಪದಾಧಿಕಾರಿಗಳು ಉಪಸ್ಥಿತರಿದ್ದರು.