ಬೆಳಗಾವಿ: ಇಲ್ಲಿನ ಸಂಗಮೇಶ್ವರ ನಗರದ ಕಟ್ಟಿಮನಿ ಪ್ರೌಢಶಾಲೆ ವಿದ್ಯಾರ್ಥಿನಿ ಸುಪ್ರಿಯಾ ಆರ್. ಗುಡ್ಡಾಕಾಯು ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಉತ್ತಮ ಸಾಧನೆ ಮಡಿದ್ದಾಳೆ. 625ಕ್ಕೆ 588 (94%) ಅಂಕ ಪಡೆದು ತೇರ್ಗಡೆ ಹೊಂದಿದ್ದಾರೆ.
ಬಡತನದಲ್ಲಿ ಬೆಳೆದ ಬಂದ ಸುಪ್ರಿಯಾ ಓದಿನಲ್ಲಿ ಮುಂದೆ ಇದ್ದಳು. ಇದನ್ನು , ಮನಗಂಡ ತಾಯಿ ಸವಿತಾ ಆರ್. ಗುಡ್ಡಾಕಾಯು ಅವರು ಪ್ರೋತ್ಸಾಹ ನೀಡಿದ್ದು, ತಂದೆ- ತಾಯಿ ಕನಸಿನಂತೆ ಮಗಳು ಕೂಡ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಉತ್ತಮ ಸಾಧನೆ ಮಾಡಿದ್ದಾಳೆ.
ಈಕೆ ಕನ್ನಡದಲ್ಲಿ 125ಕ್ಕೆ 125 ಅಂಕಗಳನ್ನು ಪಡೆದಿದ್ದಾಳೆ. ಇಂಗ್ಲಿಷ್ (88), ಹಿಂದಿ (99), ಗಣಿತ (91) , ವಿಜ್ಞಾನ )86) ಮತ್ತು ಸಮಾಜ ವಿಜ್ಞಾನ (99)ಅಂಕಗಳನ್ನು ಪಡೆದಿದ್ದಾಳೆ. ಈಕೆ ಸಾಧನೆಗೆ ಪ್ರೌಢಶಾಲೆಯ ಶಿಕ್ಷಕರು ಹಾಗೂ ಪಾಲಕರು ಅಭಿನಂದನೆ ಸಲ್ಲಿಸಿದ್ದಾರೆ.