ಬೆಳಗಾವಿ: ಬೆಳಗಾವಿ ಉತ್ತರ ಮತಕ್ಷೇತ್ರದ ಆಮ್ ಆದ್ಮಿ ಪಕ್ಷದ ಅಭ್ಯರ್ಥಿ ರಾಜಕುಮಾರ ಟೋಪಣ್ಣವರ ಗುರುವಾರ ಮಹಾಂತೇಶ ನಗರ ಹಾಗೂ ಇನ್ ಕಮ್ ಟ್ಯಾಕ್ಸ್ ಕಾಲೋನಿಯಲ್ಲಿ ಮನೆ ಮನೆ ಪ್ರಚಾರ ನಡೆಸಿ ಮತಯಾಚನೆ ಮಾಡಿದರು.
ರಾಜಕುಮಾರ ಟೋಪಣ್ಣವರ ಪ್ರಚಾರಕ್ಕೆ ಹೊದ ಕಡೆಯಲ್ಲಿ ಜನರ ಅಭೂತಪೂರ್ವ ಬೆಂಬಲ ಸಿಗುತ್ತಿದ್ದು, ಬೆಳಗಾವಿ ಉತ್ತರ ಮತಕ್ಷೇತ್ರದಲ್ಲಿ ಎರಡೂ ರಾಷ್ಟ್ರೀಯ ಪಕ್ಷಗಳ ಅಭ್ಯರ್ಥಿಗೆ ಅವಕಾಶ ನೀಡಿದ್ದೇವೆ. ಈ ಬಾರಿ ಆಮ್ ಆದ್ಮಿಗೆ ಬೆಂಬಲ ನೀಡುವುದಾಗಿ ಜನರು ಆಶೀರ್ವಾದ ಮಾಡುತ್ತಿರುವುದು ವಿಶೇಷವಾಗಿದೆ.
ರಾಜಕುಮಾರ ಟೋಪಣ್ಣವರ ದೂರು ದೃಷ್ಟಿಯ ನಾಯಕ. ಈ ಬಾರಿ ಬೆಳಗಾವಿ ಉತ್ತರ ಮತಕ್ಷೇತ್ರದಿಂದ ಆಯ್ಕೆಯಾದರೆ ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿ ಮಾಡುವುದಾಗಿ ಆಮ್ ಆದ್ಮಿ ಪಕ್ಷದ ಜಿಲ್ಲಾಧ್ಯಕ್ಷ ಶಂಕರ ಹೆಗಡೆ ತಿಳಿಸಿದರು.
ಈ ಸಂದರ್ಭದಲ್ಲಿ ಜುನೈದ ಪಾಶಾ, ಎಂ.ಕೆ.ಸೈಯದ್, ಶಿವಾನಂದ ಕಾರಿ ಸೇರಿದಂತೆ ಹಲವಾರು ಉಪಸ್ಥಿತರಿದ್ದರು.





























