ಬೆಳಗಾವಿ : ಉತ್ತರ ವಿಧಾನಸಭಾ ಮತಕ್ಷೇತ್ರದ ಜಾತ್ಯತೀತ ಜನತಾದಳದ ಅಧಿಕೃತ ಅಭ್ಯರ್ಥಿಯಾಗಿ ಶಿವಾನಂದ ಮುಗಳಿಹಾಳ ಇವರು ನಾಮಪತ್ರ ಸಲ್ಲಿಸಿದರು ಬಿಜೆಪಿ, ಕಾಂಗ್ರೆಸ್ ನಾಯಕರು ಯಾರು ಅಭಿವೃದ್ಧಿ ಮಾಡಿಲ್ಲ ಬರೇ ಜನರಿಗೆ ಸುಳ್ಳು ಹೇಳುತ್ತಾ ಹೋಗುತ್ತಿದ್ದಾರೆ ಎರಡು ರಾಷ್ಟ್ರೀಯ ಪಕ್ಷಗಳು ಒಳಗೊಳಗೆ ಹೊಂದಾಣಿಕೆಯ ರಾಜಕಾರಣ ಮಾಡಿಕೊಂಡಿದ್ದಾರೆ. ಜೆಡಿಎಸ್ ಪಕ್ಷಕ್ಕೆ ಬೆಳಗಾವಿ ಜನತೆ ಆಶೀರ್ವಾದ ಮಾಡಿದರೆ ಐದು ವರ್ಷದಲ್ಲಿ ಕಾಂಗ್ರೆಸ್,ಬಿಜೆಪಿ ಮಾಡದ ಅಭಿವೃದ್ಧಿ ಮಾಡಿ ತೋರಿಸುತ್ತೇನೆ ಎಂದು ಜೆಡಿಎಸ್ ಪಕ್ಷದ ಉತ್ತರ ಮತಕ್ಷೇತ್ರದ ಅಭ್ಯರ್ಥಿ ಶಿವಾನಂದ ಮುಗಳಿಹಾಳ ಮನವಿ ಮಾಡಿದರು.
ಬುದುವಾರ ಸಂಗೊಳ್ಳಿ ರಾಯಣ್ಣ ವೃತ್ತದಿಂದ ವೃತ್ತದಿಂದ ತಮ್ಮ ಅಪಾರ ಅಭಿಮಾನಿಗಳು, ಜೆಡಿಎಸ್ ಕಾರ್ಯಕರ್ತರೊಂದಿಗೆ ಪಾದಯಾತ್ರೆ ಮೂಲಕ ತೆರಳಿ ನಾಮಪತ್ರ ಸಲ್ಲಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು.
ಬೆಳಗಾವಿ ರಾಮತೀರ್ಥ ನಗರದ ಅನೇಕ ಬಡಾವಣೆಗಳಲ್ಲಿ ಕೆಲಸ ಮಾಡಿಕೊಟ್ಟಿದ್ದೇನೆ ಕಣಬರಗಿ ಹೊಸ ಬಡಾವಣೆ ರದ್ದು ಮಾಡಿದ್ದಾರೆ. ಕೆಲವೇ ಕೆಲವರಿಗೆ ನಿವೇಶನ ಹಂಚಿಕೆ ಮಾಡಿದ್ದಾರೆ. ನಾನು ಹೋರಾಟದ ಮೂಲಕವೇ ಜನರ ಸಮಸ್ಯೆ ಬಗೆಹರಿಸುವ ಕೆಲಸ ಮಾಡಿದ್ದೇನೆ.ಯುವಕರು ತಿಳಿದುಕೊಳ್ಳಬೇಕು. ಒಂದು ಬಾರಿ ನನಗೆ ಅವಕಾಶ ಕೊಟ್ಟರೆ ಬೆಳಗಾವಿ ನಗರವನ್ನು ಅಭಿವೃದ್ಧಿ ಮಾಡಿ ತೋರಿಸುತ್ತೇನೆ ಎಂದರು.
ಬೆಳಗಾವಿಯಲ್ಲಿ ಯುವಕರಿಗೆ ಉದ್ಯೋಗಾವಕಾಶ, ಮಹಿಳೆಯರ ಭದ್ರತೆ, ವಿದ್ಯಾರ್ಥಿಗಳಿಗೆ ಐಎಎಸ್, ಐಪಿಎಸ್, ಕೆಎಎಸ್ ಪರೀಕ್ಷೆ ಬರೆಯಲು ಉಚಿತ ಕೋಚಿಂಗ್ ಸೆಂಟರ್ ಮಾಡುವ ಪ್ರಯತ್ನ ಮಾಡಿ ಬೆಳಗಾವಿ ನಗರದ ಯುವಕರು ದೇಶದಲ್ಲಿ ಮಿಂಚುವ ಹಾಗೆ ಮಾಡುವೆ ಎಂದರು.
ಬೆಳಗಾವಿ ನಗರಕ್ಕೆ ಸ್ಮಾರ್ಟ್ ಸಿಟಿ ಹಾಗೂ ಅಮೃತ ಸಿಟಿಯಲ್ಲಿ ಸಾಕಷ್ಟು ಅನುದಾನ ನೀಡಿದ್ದಾರೆ. ಆ ಅನುದಾನ ಎಲ್ಲಿ ಹೋಯಿತು ? ಬಿಜೆಪಿ ಮುಖಂಡರು ನಗರದಲ್ಲಿ ರಸ್ತೆ, ಚರಂಡಿ ಮಾಡುತ್ತೇನೆ ಎನ್ನುತ್ತಾರೆ. ಬೆಳಗಾವಿ ನಗರದಲ್ಲಿ ಜೆಡಿಎಸ್ ಪಕ್ಷವು ರಾಷ್ಟ್ರೀಯ ಪಕ್ಷದಲ್ಲಿ ಹಣ ಕೊಟ್ಟು ಟಿಕೆಟ್ ಪಡೆದುಕೊಂಡಿದ್ದಾರೆ. ಹಣ ಕೊಟ್ಟು ಟಿಕೆಟ್ ಪಡೆದು ಗೆದ್ದು ಬಂದರೆ ಮತ್ತೇ ಇಲ್ಲಿ ಲೂಟಿ ಮಾಡುವುದು. ಕಳೆದ ಐದು ವರ್ಷದಲ್ಲಿ ಬಿಜೆಪಿ ಶಾಸಕರೇ ಇದ್ದರೂ ಅವರು ರಸ್ತೆ, ಚರಂಡಿ ನಿರ್ಮಾಣ ಮಾಡಿಲ್ಲವೇ ಇದನ್ನು ಜನರು ಪ್ರಶ್ನಿಸಬೇಕು ಎಂದರು ಯಡಿಯೂರಪ್ಪನವರು ಮುಖ್ಯಮಂತ್ರಿ ಇದ್ದ ಸಂದರ್ಭದಲ್ಲಿ ನೂರು ಕೋಟಿ ರೂ. ವಿಶೇಷ ಅನುದಾನ ಸುಮಾರು ಐದಾರು ಬಾರಿ ಬಂದಿದೆ. ಆ ಅನುದಾನ ಎಲ್ಲಿ ಹೋಯಿತು. ಬೆಳಗಾವಿ ನಗರದಲ್ಲಿ ನಿರ್ಮಾಣ ರಸ್ತೆಗಳು ಎಲ್ಲಿ ಹೋದವು. ಅನುದಾನವನ್ನು ರಸ್ತೆ, ಚರಂಡಿಗೆಯೇ ವೆಚ್ಚ ಮಾಡಿದ್ದಾರೆ ಎಂದು ಹರಿಹಾಯ್ದರು.
ಬೆಳಗಾವಿ ಅಭಿವೃದ್ಧಿಯ ಬಗ್ಗೆ ರಾಷ್ಟ್ರೀಯ ಪಕ್ಷದ ಅಭ್ಯರ್ಥಿಗಳಿಗೆ . ಅಭಿವೃದ್ಧಿಯ ವಿಚಾರದ ಬಗ್ಗೆ ಮುಕ್ತ ಚರ್ಚೆಗೆ ಅವಕಾಶ ಮಾಡುವೆ. ಬೆಳಗಾವಿಗೆ ಬರುವ ಸಾಕಷ್ಟು ಯೋಜನೆ ನೆರೆಯ ಜಿಲ್ಲೆಗೆ ಹೋಗಿವೆ. ಅದನ್ನು ತರುವ ಪ್ರಯತ್ನ ಬಿಜೆಪಿ ಮಾಡಲಿಲ್ಲ. ವಿರೋಧ ಮಾಡುವ ಪ್ರಯತ್ನ ಕಾಂಗ್ರೆಸ್ ಮಾಡಲಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಪಂಚಮಶಾಲಿ ಅಧ್ಯಕ್ಷರಾದ ಶ್ರೀ ಆರ್ ಕೆ ಪಾಟೀಲ್ ಹಾಗೂ ಜೆಡಿಎಸ್ ಅಧ್ಯಕ್ಷರಾದ ಪ್ರಮೋದ್ ಪಾಟೀಲ್ ರಾಜ್ಯ ಕಾರ್ಯದರ್ಶಿಯಾದ ತಾಹಿರ್ ಖಾನ್ ಪಠಾನ್ ಮುತ್ತು ಅಂಗಡಿ ಉಪಸ್ಥಿತರಿದ್ದರು