This is the title of the web page
This is the title of the web page

ಬಿಜೆಪಿ, ಕಾಂಗ್ರೆಸ್ ನಾಯಕರು ಯಾರು ಎನ್ನುವುದು ತಿಳಿಯದಾಗಿದೆ ಆಮ್ ಆದ್ಮಿ ಪಾರ್ಟಿಯ ಬೆಳಗಾವಿ ಉತ್ತರ ಮತಕ್ಷೇತ್ರದ ಅಭ್ಯರ್ಥಿಯಾಗಿ ರಾಜಕುಮಾರ ಟೋಪಣ್ಣವರ ನಾಮಪತ್ರ ಸಲ್ಲಿಕೆ

ಬಿಜೆಪಿ, ಕಾಂಗ್ರೆಸ್ ನಾಯಕರು ಯಾರು ಎನ್ನುವುದು ತಿಳಿಯದಾಗಿದೆ ಆಮ್ ಆದ್ಮಿ ಪಾರ್ಟಿಯ ಬೆಳಗಾವಿ ಉತ್ತರ ಮತಕ್ಷೇತ್ರದ ಅಭ್ಯರ್ಥಿಯಾಗಿ ರಾಜಕುಮಾರ ಟೋಪಣ್ಣವರ ನಾಮಪತ್ರ ಸಲ್ಲಿಕೆ

 

ಬೆಳಗಾವಿ :ಬೆಳಗಾವಿಗೆ ಬರುವ ಸಾಕಷ್ಟು ಯೋಜನೆ ನೆರೆಯ ಜಿಲ್ಲೆಗೆ ಹೋಗಿವೆ. ಅದನ್ನು ತರುವ ಪ್ರಯತ್ನ ಬಿಜೆಪಿ ಮಾಡಲಿಲ್ಲ. ವಿರೋಧ ಮಾಡುವ ಪ್ರಯತ್ನ ಕಾಂಗ್ರೆಸ್ ಮಾಡಲಿಲ್ಲ .ಬಿಜೆಪಿ, ಕಾಂಗ್ರೆಸ್ ನಾಯಕರು ಯಾರು ಎನ್ನುವುದು ತಿಳಿಯದಾಗಿದೆ. ಒಳಗೊಳಗೆ ಹೊಂದಾಣಿಕೆಯ ರಾಜಕಾರಣ ಮಾಡಿಕೊಂಡಿದ್ದಾರೆ. ಆಮ್ ಆದ್ಮಿಗೆ ಬೆಳಗಾವಿ ಜನತೆ ಆಶೀರ್ವಾದ ಮಾಡಿದರೆ ಐದು ವರ್ಷದಲ್ಲಿ ಕಾಂಗ್ರೆಸ್,‌ಬಿಜೆಪಿ ಮಾಡದ ಅಭಿವೃದ್ಧಿ ಮಾಡಿ ತೋರಿಸುತ್ತೇನೆ ಎಂದು ಆಮ್ ಆದ್ಮಿ ಪಾರ್ಟಿಯ ಉತ್ತರ ಮತಕ್ಷೇತ್ರದ ಅಭ್ಯರ್ಥಿ ರಾಜಕುಮಾರ ಟೋಪಣ್ಣವರ ಮನವಿ ಮಾಡಿದರು

ನಾಮಪತ್ರ ಸಲ್ಲಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು.ಬೆಳಗಾವಿ ಬುಡಾದಲ್ಲಿಯೂ ಸಾಕಷ್ಟು ಭ್ರಷ್ಟಾಚಾರವಾಗಿದೆ. ಕಳೆದ ವಾರ ಕಣಬರಗಿ ಹೊಸ ಬಡಾವಣೆ ರದ್ದು ಮಾಡಿದ್ದಾರೆ. ಕೆಲವೇ ಕೆಲವರಿಗೆ ನಿವೇಶನ ಹಂಚಿಕೆ ಮಾಡಿದ್ದಾರೆ. ನಾನು‌ ಹೋರಾಟದ ಮೂಲಕವೇ ಜನರ ಸಮಸ್ಯೆ ಬಗೆಹರಿಸುವ ಕೆಲಸ ಮಾಡಿದ್ದೇನೆ. ರಾಣಿಚನ್ನಮ್ಮ ವಿಶ್ವ ವಿದ್ಯಾಲಯ ತರಲು ನಿರಂತರವಾಗಿ ಹೋರಾಟ ಮಾಡಿದ್ದೇನೆ. ಇದನ್ನು ಯುವಕರು ತಿಳಿದುಕೊಳ್ಳಬೇಕು. ಒಂದು ಬಾರಿ ನನಗೆ ಅವಕಾಶ ಕೊಟ್ಟರೆ ಬೆಳಗಾವಿ ನಗರವನ್ನು ಅಭಿವೃದ್ಧಿ ಮಾಡಿ ತೋರಿಸುತ್ತೇನೆ ಎಂದರು.

ಬೆಳಗಾವಿಯಲ್ಲಿ ಯುವಕರಿಗೆ ಉದ್ಯೋಗಾವಕಾಶ, ಮಹಿಳೆಯರ ಭದ್ರತೆ, ವಿದ್ಯಾರ್ಥಿಗಳಿಗೆ ಐಎಎಸ್, ಐಪಿಎಸ್, ಕೆಎಎಸ್ ಪರೀಕ್ಷೆ ಬರೆಯಲು ಉಚಿತ ಕೋಚಿಂಗ್ ಸೆಂಟರ್ ಮಾಡುವ ಪ್ರಯತ್ನ ಮಾಡಿ‌ ಬೆಳಗಾವಿ ನಗರದ ಯುವಕರು ದೇಶದಲ್ಲಿ‌ ಮಿಂಚುವ ಹಾಗೆ ಮಾಡುವೆ ಎಂದರು.ಬೆಳಗಾವಿ ದಕ್ಷಿಣ ಮತಕ್ಷೇತ್ರದಲ್ಲಿ ಬಿಜೆಪಿ, ಉತ್ತರದಲ್ಲಿ ಕಾಂಗ್ರೆಸ್ ಶಾಸಕರಿದ್ದಾಗ ಕೋಮು, ಗಲಭೆಗಳಾಗಿದ್ದಾವೆ. ಜನರು ಅರ್ಥ ಮಾಡಿಕೊಳ್ಳಬೇಕು‌. ಆ ರೀತಿಯ ವ್ಯವಸ್ಥೆ ಮತ್ತೊಮ್ಮೆ ಬೆಳಗಾವಿ ನಗರದಲ್ಲಿ ನಿರ್ಮಾಣವಾಗಬಾರದು.ಹಣಕೊಟ್ಟು ಟಿಕೆಟ್ ಪಡೆದ ಅಭ್ಯರ್ಥಿಗಳಿಂದ ಅಭಿವೃದ್ಧಿ ನಿರೀಕ್ಷೆ ಮಾಡುವುದು ಸರಿಯಲ್ಲ. ಅಂಥವರು ಸರಕಾರಿ ಆಸ್ಪತ್ರೆ ಅಭಿವೃದ್ಧಿ ಪಡೆಸುತ್ತೇವೆ ಎನ್ನುವುದು ಹಾಸ್ಯಾಸ್ಪದ. ಅಲ್ಲದೆ ಕಾಂಗ್ರೆಸ್ ನಲ್ಲಿ ಸಾಕಷ್ಟು ಜನ ಮುಸ್ಲಿಂ ಸಮುದಾಯವರಿದ್ದಾರೆ. ಅವರಿಗೂ ಅನ್ಯಾಯವಾಗಿದೆ. ಅವರ ಪರವಾಗಿಯೂ ಧ್ವನಿ ಎತ್ತುವ ಕೆಲಸ ಮಾಡುವೆ ಎಂದು ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದರು.ಕಳೆದ ಐದು ವರ್ಷದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಬೆಳಗಾವಿ ನಗರಕ್ಕೆ ಸ್ಮಾರ್ಟ್ ಸಿಟಿ ಹಾಗೂ ಅಮೃತ ಸಿಟಿಯಲ್ಲಿ ಸಾಕಷ್ಟು ಅನುದಾನ ನೀಡಿದ್ದಾರೆ. ಆ ಅನುದಾನ ಎಲ್ಲಿ ಹೋಯಿತು ? ಬಿಜೆಪಿ ಮುಖಂಡರು ನಗರದಲ್ಲಿ ರಸ್ತೆ, ಚರಂಡಿ ಮಾಡುತ್ತೇನೆ ಎನ್ನುತ್ತಾರೆ. ಬೆಳಗಾವಿ ನಗರದಲ್ಲಿ ಆಮ್ ಆದ್ಮಿಯಿಂದ ಉಚಿತ ಟಿಕೆಟ್ ಹಾಗೂ ರಾಷ್ಟ್ರೀಯ ಪಕ್ಷದಲ್ಲಿ ಹಣ ಕೊಟ್ಟು ಟಿಕೆಟ್ ಪಡೆದುಕೊಂಡಿದ್ದಾರೆ. ಹಣ ಕೊಟ್ಟು ಟಿಕೆಟ್ ಪಡೆದು ಗೆದ್ದು ಬಂದರೆ ಮತ್ತೇ ಇಲ್ಲಿ ಲೂಟಿ ಮಾಡುವುದು.

ಬೆಳಗಾವಿಗೆ ಬರುವ ಸಾಕಷ್ಟು ಯೋಜನೆ ನೆರೆಯ ಜಿಲ್ಲೆಗೆ ಹೋಗಿವೆ. ಅದನ್ನು ತರುವ ಪ್ರಯತ್ನ ಬಿಜೆಪಿ ಮಾಡಲಿಲ್ಲ. ವಿರೋಧ ಮಾಡುವ ಪ್ರಯತ್ನ ಕಾಂಗ್ರೆಸ್ ಮಾಡಲಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.ನನಗೆ ಎಲ್ಲರೂ ಕೇಳುತ್ತಾರೆ. ರೈಟ್ ಮ್ಯಾನ್ ಇನ್ ರಾಂಗ್ ಪಾರ್ಟಿ ಎಂದು ನಾನು ಅವರಿಗೆ ಕೇಳುತ್ತೇನೆ. ರೈಪ್ ಪಾರ್ಟಿಯಲ್ಲಿ ರಾಂಗ್ ಮ್ಯಾನ್ ಇದ್ದಾರೆ. ಅವರನ್ನು ಯಾಕೆ ಬೆಂಬಲಿಸುತ್ತಿರಿ ಎಂದು ಪ್ರಶ್ನಿಸಿದರು.ಈ ಸಂದರ್ಭದಲ್ಲಿ ಆಮ್ ಆದ್ಮಿ ಜಿಲ್ಲಾಧ್ಯಕ್ಷ ಶಂಕರ ಹೆಗಡೆ, ಶಿವಾನಂದ ಕಾರಿ, ಸುನೀತಾ ಪಾಟೀಲ, ವಿಜಯ ಪಾಟೀಲ, ಜುನೈದ್ ಖಾನ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.