ಬೆಳಗಾವಿ: ಕೆಎಂಎಫ್ ವಿಚಾರದಲ್ಲಿ ದಯವಿಟ್ಟು ಅನಗತ್ಯವಾಗಿ ರಾಜಕೀಯ ತರಬೇಡಿ, ಇದೊಂದು ಸಹಕಾರ ಸ್ವಾಮ್ಯದ ರಾಜ್ಯದ ಪ್ರತಿಷ್ಠಿತ ಸಂಸ್ಥೆಯಾಗಿದೆ. ಹೈನುಗಾರರು, ಗ್ರಾಹಕರು ಹಾಗೂ ನೌಕರರ ಒಳಿತನ್ನು ಕಾಪಾಡುವ ರಾಜ್ಯದ ಏಕಮೇವ ಸಹಕಾರ ಸಂಸ್ಥೆಯಾಗಿದೆ ಎಂದು ಶಾಸಕ ಬಾಲಚಂದ್ರ ಜಾರಕಿಹೊಳಿ ಹೇಳಿದರು.
ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿ ಅವರು, ನಂದಿನಿ ನಮ್ಮೆಲ್ಲರ ಹೆಮ್ಮೆಯಾಗಿದೆ. ನಂದಿನಿಯನ್ನು ಕಾಪಾಡುವುದು ಪ್ರತಿಯೊಬ್ಬ ಕನ್ನಡಿಗರ ಆಧ್ಯ ಕರ್ತವ್ಯವಾಗಿದೆ. ದಯವಿಟ್ಟು ಯಾರೂ ನಂದಿನಿ-ಅಮೂಲ್ ವಿಚಾರದಲ್ಲಿ ಅನಗತ್ಯ ಗೊಂದಲಗಳನ್ನು ಸೃಷ್ಟಿಸಬೇಡಿ ಎಂದ ಅವರು, ಕೆಎಂಎಫ್ ವಾರ್ಷಿಕವಾಗಿ 22,000 ಕೋಟಿ ರೂ.ಗಳ ವಹಿವಾಟು ನಡೆಸಿದ್ದು ಇದರಿಂದ ಕೆಎಂಎಫ್ ಮತ್ತು 15 ಜಿಲ್ಲಾ ಹಾಲು ಒಕ್ಕೂಟಗಳು ಸೇರಿ ವಾರ್ಷಿಕವಾಗಿ ಅಂದಾಜು 200 ಕೋಟಿ ರೂ.ಗಳ ಲಾಭ ನಿರೀಕ್ಷೆ ಮಾಡಲಾಗಿದೆ. ರಾಜ್ಯದಲ್ಲಿ ಅಂದಾಜು 40 ಲಕ್ಷ ಹೈನೋದ್ಯಮ ಅವರ ಆಸೆ ಯಾವತ್ತೂ ನನಸಾಗುವುದಿಲ್ಲ. ಇದೊಂದು ಎಂದರು.
ಕೆಎಂಎಫ್‌ನ ಮಾರುಕಟ್ಟೆಯ ಯೋಜನೆಗಳ ಬಗ್ಗೆ ಯಾವುದೇ ಸಮರ್ಪಕ ಮಾಹಿತಿ ಇಲ್ಲದೇ ರಾಜ್ಯದಲ್ಲಿ ವಿನಾಕಾರಣ ಜನರಲ್ಲಿ ಗೋಂದಲಗಳನ್ನು ಸೃಷ್ಟಿಸುತ್ತಿರುವುದು ಯಾವ ನ್ಯಾಯ? ಕಳೆದ 3 ತಿಂಗಳಿನಿಂದ ಕೆಎಂಎಫ್ ವಿಚಾರವಾಗಿ ನಾಯಕರು, ಗಣ್ಯರು ತಿಳಿದು, ತಿಳಿಯದೋ ಮಾತನಾಡುತ್ತಿದ್ದಾರೆ. ಇದರಿಂದ ಕೆಎಂಎಫ್‌ನ ರೈತರು, ಕಾರ್ಮಿಕರು, ಗ್ರಾಹಕರಿಗೆ ಚಿತ್ರಹಿಂಸೆಯಾಗುತ್ತಿದೆ ಎಂದ ಅವರು, ರಾಜ್ಯದಲ್ಲಿ ಅಮೂಲ್ ಬಂದು ಎಷ್ಟೋ ವರ್ಷಗಳಾಗಿದ್ದರೂ ಇನ್ನೂ ರಾಜ್ಯದಲ್ಲಿ ತನ್ನ ಮಾರುಕಟ್ಟೆಯನ್ನು ವಿಸ್ತರಿಸಿಕೊಳ್ಳಲು ಆಗುತ್ತಿಲ್ಲ. ಇದಕ್ಕೆ ನಾಡಿನ ರೈತರು, ಗ್ರಾಹಕರು ಕೆಎಂಎಫ್‌ನ ಮೇಲೆ ಇಟ್ಟಿರುವ ವಿಶ್ವಾಸ ಹಾಗೂ ನಂಬಿಕೆಗಳೇ ಕಾರಣವಾಗಿವೆ. ಆದ್ದರಿಂದ ಕೆಎಂಎಫ್ ಯಾವ ಕಾಲಕ್ಕೂ ಅಮೂಲ್ ಜೊತೆ ಕೈಜೋಡಿಸುವ ಪ್ರಶ್ನೆಯೇ ಇಲ್ಲ ಎಂದು ಖಡಕ್ಕಾಗಿ ಉತ್ತರಿಸಿದರು.ಆದರೇ ಇದನ್ನೇ ಕೆಲವರು ರಾಜಕೀಯವಾಗಿ ದುರ್ಬಳಕೆ ಮಾಡಿಕೊಳ್ಳುತ್ತಿರುವುದು ಖಂಡನೀಯವಾಗಿದೆ. ಪ್ರತಿ ವರ್ಷ ಇಂಧನ ಇಲಾಖೆಗೆ ವಿದ್ಯುತ್ ಬಿಲ್ಲಗಾಗಿಯೇ 120 ಕೋಟಿ ರೂ.ಗಳನ್ನು ಸಂದಾಯ ಮಾಡಲಾಗುತ್ತಿದೆ. ಸೋಲಾರ ಪ್ಲಾಂಟ್ ನಿರ್ಮಾಣ ಮಾಡುವ ಯೋಜನೆಯನ್ನು ರೂಪಿಸಲಾಗಿದೆ. ಇದು ಜಾರಿಯಾದರೆ ವಾರ್ಷಿಕವಾಗಿ 40 ಕೋಟಿ ರೂ.ಗಳ ಉಳಿತಾಯವಾಗಲಿದೆ. ನಾವು ಅಧಿಕಾರಕ್ಕೆ ಬಂದ ನಂತರ ಅನುಕಂಪದ ಆಧಾರದ ಮೇಲೆ ಉದ್ಯೋಗಾವಕಾಶಗಳನ್ನು ಕಲ್ಪಿಸಲಾಗಿದೆ. ಈ ಹಿಂದೆ ಯಾರೂ ಮಾಡದ ನೌಕರರ ನಿವೃತ್ತಿ ವೇತನವನ್ನು ಜಾರಿಗೆ ತರಲಾಗಿದೆ ಎಂದು ಹೇಳಿದರು.