ರಾಮದುರ್ಗ:ಒಳ ಮೀಸಲಾತಿ ಹೋರಾಟ ಸಮಿತಿ ಹಾಗೂ ಆಲ್ ಇಂಡಿಯಾ ಬಂಜಾರ ಸೇವಾ ಸಂಘ ತಾಲೂಕ ಘಟಕ ರಾಮದುರ್ಗ ಸೇರಿದಂತೆ ವಿವಿಧ ಸಮುದಾಯಗಳಿಂದ ಬೃಹತ್ ಪ್ರತಿಭಟನೆಯನ್ನು ಮಾಡಲಾಯಿತು
ಬೆಳಗಾವಿ ಜಿಲ್ಲೆ ರಾಮದುರ್ಗ ಪಟ್ಟಣದ ಎಪಿಎಂಸಿ ಮಾರುಕಟ್ಟೆಯಿಂದ ಬಂಜಾರ ಸಮುದಾಯದ ಗುರುಗಳಾದ ಬಾಗಲಕೋಟೆಯ ಶಿರೂರದ ಶ್ರೀ ಕುಮಾರ ಮಹಾರಾಜರ ನೇತೃತ್ವದಲ್ಲಿ ಒಳ ಮೀಸಲಾತಿ ವಿರೋಧಿಸಿ ವಿವಿಧ ಸಮುದಾಯಗಳು ಪಟ್ಟಣದ ಮಿನಿ ವಿಧಾನಸೌಧದ ವರೆಗೂ ಒಳ ಮೀಸಲಾತಿ ಜಾರಿಗೆ ತಂದಿರುವ ಸರಕಾರದ ವಿರುದ್ಧ ಘೋಷಣೆಗಳನ್ನು ಕೂಗುತ್ತಾ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಿ ನಂತರ ತಹಶೀಲ್ದಾರರಿಗೆ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಬಂಜಾರ ಸಮಾಜದ ಗುರುಗಳಾದ ಕುಮಾರ ಮಹಾರಾಜರು ಮಾತನಾಡಿ ಸರಕಾರ ನ್ಯಾಯಮೂರ್ತಿ ಸದಾಶಿವ ಆಯೋಗದ ವರದಿಯನ್ನು ಧಿಕ್ಕರಿಸಿ ಬಹಿರಂಗವಾಗಿ ಚರ್ಚೆ ಮಾಡದೆ ಏಕರೂಪದಲ್ಲಿ ಒಳ ಮೀಸಲಾತಿಯನ್ನಾಗಿ ಮಾಡಿ ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡಿರುವುದು ಖಂಡನೀಯ, ರಾಮದುರ್ಗ ತಾಲೂಕಿನ 99 ಜಾತಿಯವರು ಸೇರಿ ಪ್ರತ್ಯಕ್ಷವಾಗಿ ಅವರಿಗೆ ಧಿಕ್ಕಾರವನ್ನು ಕೂಗುತ್ತೇವೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ನ್ಯಾಯಮೂರ್ತಿ ಸದಾಶಿವ ಆಯೋಗದ ವರದಿಯನ್ನು ಹಾಗೂ ಒಳ ಮೀಸಲಾತಿಯನ್ನು ಕೈಗೆತ್ತಿಕೊಳ್ಳುವುದಿಲ್ಲ ಎಂದು ಸರ್ಕಾರ ಈ ಹಿಂದೆ ಹೇಳಿಕೆ ನೀಡುತ್ತಿತ್ತು, ಆದರೆ ಏಕಾಏಕಿ ಯಾವುದೇ ಪಕ್ಷದವರವನ್ನು ಹಾಗೂ ಯಾವುದೇ ಸಮಾಜದ ಮುಖಂಡರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ ಆನೆ ನಡೆದಿದ್ದೇ ದಾರಿ ಎಂಬಂತೆ ಬಸವರಾಜ ಬೊಮ್ಮಾಯಿ ಅವರ ಸರಕಾರ ಒಳ ಮೀಸಲಾತಿಯನ್ನು ಕೇಂದ್ರಕ್ಕೆ ಶಿಫಾರಸ್ಸು ಮಾಡಿದೆ. ಈ ಸರ್ಕಾರಕ್ಕೆ ತಕ್ಕ ಶಾಸ್ತಿಯನ್ನು ಮಾಡೇ ಮಾಡ್ತೀವಿ ಹಾಗೂ ಮೀಸಲಾತಿಯನ್ನು ಒಡೆದು ಆಳುವ ನೀತಿಯನ್ನಾಗಿ ಮಾಡಿ ಅಂಬೇಡ್ಕರ್ ಅವರ ಆಶಯಕ್ಕೆ ವಿರುದ್ಧವಾಗಿ ನಡೆದುಕೊಂಡಿರುವ ಈ ಸರಕಾರ ಯಾವ ಆಧಾರದ ಮೇಲೆ ಒಳಮಿಸಲಾತಿಯನ್ನು ಮಾಡಿದೆ ಉತ್ತರ ನೀಡಲೇಬೇಕು ಎಂದು ಅವರು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಬಂಜಾರ ಸಮುದಾಯದ ಭೀಲಪ್ಪ ಮಹಾರಾಜರ ಸರಕೊಟ,ಖಿರಾಪ್ಪ ಮಹಾರಜ ಚನ್ನಾಪೂರ ತಾಂಡಾ ಹಾಗೂ ಬಂಜಾರ ಸಮುದಾಯದ ತಾಲೂಕ ಅಧ್ಯಕ್ಷ ಪರಶುರಾಮ ಪಮ್ಮಾರ, ವಿಜಯ್ ಕುಮಾರ್ ರಾಠೋಡ, ಶಂಕರ ಲಮಾಣಿ, ಜೀವಪ್ಪ ಲಮಾಣಿ, ಆನಂದ ಲಮಾಣಿ, ಬೀಮಶಿ ಬಂಡಿವಡ್ಡರ, ರಮೇಶ ಬಂಡಿವಡ್ಡರ,ರವಿ ಭಜಂತ್ರಿ, ಯಲ್ಲಪ ಇಟಗಿ ಸೇರಿದಂತೆ ವಿವಿಧ ಸಮುದಾಯದ ಮುಖಂಡರು ಉಪಸ್ಥಿತರಿದ್ದರು