ಬೆಳಗಾವಿ: ಕನ್ನಡಾಭಿಮಾನಿ ಮೇಲೆ ಮರಾಠಿ ಭಾಷಿಕ ಪುಂಡರಿಂದ ಹಲ್ಲೆ ನಡೆಸಿದ್ದು, ರಾಮನವಮಿ ಮೆರವಣಿಗೆ ವೇಳೆ ಕನ್ನಡ ಧ್ವಜ ಹಾರಿಸಿದ ಯುವಕನ ಮೇಲೆ ಕಿಡಿಗೇಡಿತ್ತನ ಮೇರೆದಿದ್ದಾರೆ.
ನಗರದ ತಿಲಕ್ ಚೌಕ್ ಬಳಿ ಗುರುವಾರ ರಾತ್ರಿ ರಾಮನವಮಿ ಮೆರವಣಿಗೆ ವೇಳೆ ನೂರಾರು ಯುವಕರು ಭಗವಾಧ್ವಜ ಹಿಡಿದು ಭಾಗಿಯಾಗಿದ್ದರು.
ಈ ವೇಳೆ ಕನ್ನಡ ಬಾವುಟ ಹಿಡಿದು ಮೆರವಣಿಗೆಯಲ್ಲಿ ಭಾಗಿಯಾಗಿದ್ದ ಮಂಜುನಾಥ ಢಂಗ ಜೊತೆಗೆ ಮರಾಠಿ ಭಾಷಿಕ ಪುಂಡರು ವಾಗ್ವಾದ ನಡೆಸಿದ್ದಾರೆ. ಏಕಾಏಕಿ ಗಲಾಟೆ ಶುರುಮಾಡಿ ಮಂಜುನಾಥ ಢಂಗ ಅವರ ಮೇಲೆ ಹಲ್ಲೆ ನಡೆಸಿ, ಕನ್ನಡ ಬಾವುಟಕ್ಕೆ ಅಪಮಾನ ಮಾಡಿದ್ದಾರೆ.
ಕನ್ನಡಪರ ಸಂಘಟನೆಯ ಹೋರಾಟಗಾರರು ಘಟನೆಯನ್ನು ಖಂಡಿಸಿದ್ದಾರೆ. ಈ ಸಂಬಂಧ ಕಿಡಿಗೇಡಿಗಳ ವಿರುದ್ಧ ಖಡೇಬಜಾರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.