This is the title of the web page
This is the title of the web page

“ಯುಗ ಯುಗಾದಿ ಕಳೆದರೂ, ಯುಗಾದಿ ಮರಳಿ ಬರುತಿದೆ ಹೊಸ ವರುಷಕೆ ಹೊಸ ಹರುಷವ ಹೊಸತು ಹೊಸತು ತರುತಿದೆ”

“ಯುಗ ಯುಗಾದಿ ಕಳೆದರೂ, ಯುಗಾದಿ ಮರಳಿ ಬರುತಿದೆ ಹೊಸ ವರುಷಕೆ ಹೊಸ ಹರುಷವ ಹೊಸತು ಹೊಸತು ತರುತಿದೆ”

 

ವಿಶೇಷ ಲೇಖನ

ಬೆಳಗಾವಿ:  ಯುಗಾದಿಯನ್ನು ‘ಗುಡಿಪಾಡವಾ’ ಎಂದು ಕರೆಯುವರು. ಗುಡಿ ಎಂದರೆ ಧ್ವಜ. ಒಂದು ಕೋಲಿನ ತುದಿಗೆ ರೇಷ್ಮೆ ಬಟ್ಟೆ ಏರಿಸಿ, ಅದರ ಮೇಲೆ ಬೆಳ್ಳಿ ಅಥವಾ ಹಿತ್ತಾಳೆಯ ಸಣ್ಣ ಬಿಂದಿಗೆಯನ್ನು ಕಟ್ಟಿ ಬೇವು ಮತ್ತು ಮಾವಿನ ಎಲೆಗಳಿಂದ ಅಲಂಕರಿಸುವರು. ಮಹಾಭಾರತದಲ್ಲಿ ಇದರ ಪ್ರಸ್ತಾಪವಿದೆ. ಅಂದು ‘ಪುರಣಪೋಳಿ’ ಸಿಹಿಯನ್ನು ಮಾಡುವರು. ಕರ್ನಾಟಕದಲ್ಲಿ ಹೋಳಿಗೆ, ಆಂಧ್ರದಲ್ಲಿ ಒಬ್ಬಟ್ಟು ಮಾಡುವ ಪದ್ಧತಿ ಇದೆ. ಕರಾವಳಿಯಲ್ಲಿ ಖಣಿ ಇಡುವ ಸಂಪ್ರದಾಯವಿದೆ. ಬಾಳೆ ಎಲೆಯ ಮೇಲೆ ಅಕ್ಕಿ ಹಾಕಿ ತೆಂಗಿನಕಾಯಿ, ಸೌತೆಕಾಯಿ, ಹೊಸ ಬಟ್ಟೆ, ರವಿಕೆ ಖಣ, ಚಿನ್ನ, ಬತ್ತದ ತೆನೆ, ಹಣ್ಣ್ಣು ಹಂಪಲು, ದೇವರ ಪ್ರತಿಮೆ ಜೋಡಿಸಿ ಒಂದು ಕನ್ನಡಿ ಮುಂದೆಮ ದೇವರು ಸಮೇತ ಎಲ್ಲವೂ ಕಾಣುವಂತೆ ಇಡುತ್ತಾರೆ. ಯುಗಾದಿಯ ಹಬ್ಬದಂದು ಬೆಳಿಗ್ಗೆ ಎದ್ದು ಪೂಜೆ ಮಾಡಿ, ಕನ್ನಡಿಯಲ್ಲಿ ದೇವರ ದರ್ಶನ ಪಡೆಯುತ್ತಾರೆ. ತದ ನಂತರ ದೇಗುಲಕ್ಕೆ ಹೋಗುವರು, ಸಿಹಿ ಊಟ, ಗುರು ಹಿರಿಯರ ಭೇಟಿ, ಪಂಚಾAಗ ಶ್ರವಣ ಮಾಡುತ್ತಾರೆ.
ಯುಗಾದಿಯ ಮಾರನೆಯ ದಿನವೂ ಹಬ್ಬದ ವಾತಾವರಣವೇ ಇರುತ್ತದೆ. ಮುಂಜಾನೆ ಎದ್ದು ಸ್ನಾನ ಮಾಡಿ ಮಡಿಯುಟ್ಟು ದೇವರನ್ನು ಪೂಜಿಸಿ ಗುರುಹಿರಿಯರಿಗೆ ನಮಸ್ಕ್ಕರಿಸುವರು. ಅಂದು ‘ವರ್ಷ ತೊಡಕು’ ಎಂದು ಆಚರಿಸಲಾಗುತ್ತದೆ. ಅಂದರೆ ಸತ್ಕಾರ್ಯಗಳಿಗೋಸ್ಕರ ನಮ್ಮನ್ನು ತೊಡಗಿಸಿಕೊಳ್ಳುವ ದಿನ. ವರ್ಷವಿಡೀ ಸುಖ ನೀಡುವಂತೆ, ಕಷ್ಟ ನಿವಾರಿಸುವಂತೆ ದೇವರಲ್ಲಿ ಕೇಳಿಕೊಳ್ಳುವ ದಿವಸ. ಈ ದಿನ ಯಾರಿಗೆÉ ಏನನ್ನು ನೀಡುತ್ತಾರೆಯೋ ಅದು ಇಡೀ ವರ್ಷದವರೆಗೆ ಇರುತ್ತದೆ ಎಂಬ ನಂಬಿಕೆ ಇದೆ. ಅಷ್ಟೇ ಅಲ್ಲದೇ ಅಂದು ಬಿದಿಗೆಯ ದಿನ, ಚಂದ್ರದರ್ಶನ ಮಾಡುವರು.
`ಯುಗಾದಿ’ ಎಂಬ ಶಬ್ದವು ಸಂಸ್ಕೃತದ `ಯುಗ’ ಮತ್ತು `ಆದಿ’ ಎಂಬ ಎರಡು ಶಬ್ದಗಳಿಂದ ಕೂಡಿದೆ. ಸೃಷ್ಟಿ ನಾಟಕದಲ್ಲಿ ನಾಲ್ಕು ಯುಗಗಳು ಇವೆ. ಸತ್ಯಯುಗ, ತ್ರೇತಾಯುಗ, ದ್ವಾಪರಯುಗ, ಮತ್ತು ಕಲಿಯುಗ. `ಆದಿ’ ಎಂದರೆ ಪ್ರಾರಂಭ, ಪೂರ್ವಕಾಲ ಎಂದಾಗುತ್ತದೆ.
ವರ್ತಮಾನ ಸಮಯ ಕಲಿಯುಗದ ಕೊನೆಯ ಹಾಗೂ ಸತ್ಯಯುಗದ ಸಂಗಮ ಸಮಯ, ಸಂಗಮಯುಗವಾಗಿದೆ. ಹೀಗೆ ಕಲಿಯುಗದ ಅಂಧಕಾರದ ರಾತ್ರಿಯನ್ನು ಸತ್ಯಯುಗದ e್ಞÁನದ ಬೆಳಕನ್ನಾಗಿ ಪರಿವರ್ತಿಸುವ ಉದಯ ಕಾಲವೇ `ಯುಗಾದಿ’. ಈ ಯುಗಾದಿಯ ಸಮಯದಲ್ಲಿ ನಿರಾಕಾರ ಶಿವನು ಪ್ರಜಾಪಿತ ಬ್ರಹ್ಮಾರವರ ಶರೀರದಲ್ಲಿ ಪ್ರವೇಶ ಮಾಡಿ, ಹೊಸ ಸೃಷ್ಟಿಯ ಸ್ಥಾಪನೆ ಮಾಡುವನು. ಕಲಿಯುಗದ ತಮೋಪ್ರಧಾನ ಮನುಷ್ಯಾತ್ಮರಿಗೆ ಸತ್ಯe್ಞÁನವನ್ನು ನೀಡಿ, ಅವರಿಗೆ ಸಹಜ ರಾಜಯೋಗವನ್ನು ಕಲಿಸಿ, ಅವರನ್ನು ಸ್ವರ್ಗ ಅಥವಾ ರಾಮರಾಜ್ಯಕ್ಕಾಗಿ ಬೇಕಾಗುವ ಶ್ರೀ ಲಕ್ಷಿö್ಮÃ-ನಾರಾಯಣ, ಶ್ರೀರಾಮ-ಸೀತೆಯರ ಸಮಾನ ದೇವಾತ್ಮರನ್ನಾಗಿ ಮಾಡುತ್ತಾನೆ. ಅದಕ್ಕಾಗಿಯೇ ರಾಮಾಯಣದಲ್ಲಿ ಇಂದ್ರನು ವ್ಶೆಜಯಂತಿ ಮಾಲೆಯನ್ನು ಹಾಗೂ ಚಿನ್ನದ ಕಲಶವನ್ನು ವಸುವಿಗೆ ನೀಡಿದ ದಿನವೆಂದು ಹೇಳಲಾಗುತ್ತದೆ.
ನಿಜವಾಗಿ ಸತ್ಯ `ಯುಗಾದಿ’ ಸಂಗಮ ಯುಗವಾಗಿದೆ. ಈ ಯುಗ ಬರುವುದು ಕಲ್ಪಕ್ಕೊಮ್ಮೆ ಮಾತ್ರ. ಅನೇಕ ಕಾಲಚಕ್ರಗಳು ಅನಾದಿ ಕಾಲದಿಂದ ನಡೆಯತ್ತಾ ಬಂದಿವೆÉ. ಉದಾಹರಣೆಗೆ ೬೦ ಸೆಕೆಂಡಿಗೆ ೧ ನಿಮಿಷ, ೬೦ ನಿಮಿಷಕ್ಕೆ ೧ ಗಂಟೆ, ೨೪ ಗಂಟೆಗೆ ೧ ದಿನ, ೭ ದಿನಗಳಿಗೆ ೧ ವಾರ, ೩೦ ದಿನಗಳಿಗೆ ೧ ತಿಂಗಳು, ೧೨ ತಿಂಗಳಿಗೆ ೧ ವರ್ಷದಂತೆ, ಈ ಸೃಷ್ಟಿ ನಾಟಕವು ೫೦೦೦ ವರ್ಷದ್ದಾಗಿದೆ. ಈಶ್ವರೀಯ e್ಞÁನದ ಪ್ರಕಾರ ಸತ್ಯಯುಗಕ್ಕೆ ೧೨೫೦ ವರ್ಷ, ತ್ರೇತಾಯುಗÀಕ್ಕೆ ೧೨೫೦ ವರ್ಷ, ದ್ವಾಪರಯುಗÀಕ್ಕೆ ೧೨೫೦ ವರ್ಷ, ಕಲಿಯುಗÀಕ್ಕೆ ೧೨೫೦ ವರ್ಷಗಳಂತೆ ಒಟ್ಟು ಇಡೀ ೪ ಯುಗಕ್ಕೆ ೫೦೦೦ ವರ್ಷಗಳಿವೆ. ಈ ರೀತಿ ನಾಲ್ಕು ಯುಗಗಳನ್ನು ಸೇರಿ ಒಂದು ಕಲ್ಪ ಆಗುತ್ತದೆ. ಈ ಕಾಲಚಕ್ರ ೫೦೦೦ ವರ್ಷಕ್ಕೊಮ್ಮೆ ಪುನರಾವರ್ತನೆಯಾಗುತ್ತದೆ. ಪರಮಪಿತ ಪರಮಾತ್ಮನಾದ ಶಿವನು ಸಂಗಮಯುಗದಲ್ಲಿ [ಕಲಿಯುಗದ ಅಂತ್ಯ ಹಾಗೂ ಸತ್ಯಯುಗದ ಆರಂಭದ ಸಮಯ] ಒಮ್ಮೆ ಮಾತ್ರ ಈ ಭೂಮಿಗೆ ಬಂದು ವಿಶ್ವಪರಿವರ್ತನೆ ಮಾಡುತ್ತಾನೆ. ಅದರ ಸ್ಮರಣಾರ್ಥವಾಗಿಯೇ `ಯುಗಾದಿ’ಯನ್ನು ವರುಷ-ವರುಷ ಆಚರಿಸುತ್ತಾರೆ.
ಈ ರೀತಿಯಾಗಿ ಯುಗಾದಿಯು ನಾಡಿಗೆ ಮಾತ್ರವಲ್ಲದೇ ಇಡೀ ವಿಶ್ವಕ್ಕೇ ಉಜ್ವಲತೆಯನ್ನು, ಜನತೆಗೆ ಸುಖ ಶಾಂತಿಯನ್ನು ನೀಡುವ ವಜ್ರಸಮಾನ ಸಮಯವಾಗಿದೆ. ಹೀಗೆ ಯುಗಾದಿಯು `ಭಕ್ತರಿಗಾಗಿ, ವಿಶಾಲ ಹೃದಯದ ಶಿವ-ಶರಣೆಯರಿಗಾಗಿ, ಮುಕ್ತಿ ಬಯಸುವ ಆರಾಧಕರಿಗಾಗಿ, ಶಿವನು ಭಕ್ತರ ಕರೆಗೆ ಓಗೊಟ್ಟು, ಅವರ ಭಕ್ತಿಯ ಫಲವನ್ನು ನೀಡಲು ಧರೆಗೆ ಬಂದಿದ್ದಾನೆ’ ಎಂಬ ಪರಮ ಸಂದೇಶವನ್ನು ನೀಡುವ ಮಹಾನ್ ಪರ್ವವೇ ಯುಗಾದಿಯಾಗಿದೆ. ಅನೇಕ ವೈರಾಣುಗಳ, ಎಚ್೩ಎನ್೨ ಮತ್ತು ಕಾಯಿಲೆಗಳ ಕಠಿಣ ಕಾಲದಲ್ಲಿ ಹಬ್ಬದ ಆಚರಣೆ ಕಷ್ಟಕರವಾಗಿದೆ. ಇನ್ನೊಂದು ಕಡೆ ಜೀವನಾವಶ್ಯಕ ವಸ್ತಗಳ ಬೆಲೆ ಗಗನಕ್ಕೇರಿದೆ. ಈ ಸಂಕಷ್ಟದ ಸಮಯದಲ್ಲಿ ಕರುಣಾಮಯಿ ದಯಾಸಾಗರನಾದ ಪರಮಾತ್ಮನ ಕೃಪೆಯು ನಮ್ಮ ಮೇಲೆ ಸದಾ ಇರಲಿ ಎಂದು ಎಲ್ಲರೂ ಪ್ರಾರ್ಥನೆ ಮಾಡೋಣ.
“ಯುಗ ಯುಗಾದಿ ಕಳೆದರೂ,
ಯುಗಾದಿ ಮರಳಿ ಬರುತಿದೆ
ಹೊಸ ವರುಷಕೆ ಹೊಸ ಹರುಷವ
ಹೊಸತು ಹೊಸತು ತರುತಿದೆ”