ಬೆಳಗಾವಿ: ಡಿಸಿಸಿ ಬ್ಯಾಂಕ್ ರವರು ಸೂಕ್ತ ದಾಖಲಾತಿ ಇಲ್ಲದೇ ಸಾಗಿಸುತ್ತಿದ್ದ 5 ಕೋಟಿ ರೂ.ಜಪ್ತಿ ಚುನಾವಣಾ ಅಧಿಕಾರಿಗಳು ಅಂಕಲಗಿ ಪೊಲೀಸ್ ಠಾಣಾ . ವ್ಯಾಪ್ತಿಯ ಯಾದಲಗುಡ್ಡ ಚೆಕ್ ಪೋಸ್ಟ್ ನಲ್ಲಿ ಜಪ್ತಿ ಮಾಡಲಾಗಿದೆ.
ಗೋಕಾಕ್- ವಿಧಾನ ಸಭಾ ಕ್ಷೇತ್ರದ ಅಂಕಲಗಿ ವ್ಯಾಪ್ತಿಯಲ್ಲಿ 5 ಕೋಟಿ ರೂ. ಸಿಕ್ಕಿರುವುದು ಬಹಳಷ್ಟು ಶಂಕೆ ವ್ಯಕ್ತವಾಗಿದೆ. ಯಾವುದೇ ಸಕ್ಷಮ ಪ್ರಾಧಿಕಾರ ಅನುಮತಿ ಪಡೆಯದೆ 5 ಕೋಟಿ ಹಣವನ್ನು ವರ್ಗಾವಣೆ ಮಾಡುವಾಗ ಪೊಲೀಸರು ಹಾಗೂ ಎಫ್ ಎಸ್ ಟಿ ತಂಡ ವಾಹನ ಪರಿಶೀಲನೆ ನಡೆಸಿ ಹಣವನ್ನು ಜಪ್ತಿಮಾಡಿದ್ದು ಉಪಖಜಾನೆ ಗೋಕಾಕ್ ಭದ್ರತಾ ಕೋಣೆಯಲ್ಲಿ ಇರಿಸಲಾಗಿದೆ.