ಸದಾಶಿವ ಸೊರಟೂರು ಮತ್ತು ಸಂತೋಷ ನಾಯಿಕ್ ರಿಗೆ ೨೦೨೩ ನೇ ಸಾಲಿನ ‘ಕವಿ ಗವಿಸಿದ್ಧ ಎನ್. ಬಳ್ಳಾರಿ ಕಾವ್ಯ ಪ್ರಶಸ್ತಿ’

ಸದಾಶಿವ ಸೊರಟೂರು ಮತ್ತು ಸಂತೋಷ ನಾಯಿಕ್ ರಿಗೆ ೨೦೨೩ ನೇ ಸಾಲಿನ ‘ಕವಿ ಗವಿಸಿದ್ಧ ಎನ್. ಬಳ್ಳಾರಿ ಕಾವ್ಯ ಪ್ರಶಸ್ತಿ’

ಕೊಪ್ಪಳ : ೨೦೨೩ ನೇ ಸಾಲಿನ ಕವಿ ಗವಿಸಿದ್ಧ ಎನ್. ಬಳ್ಳಾರಿ ಕಾವ್ಯ ಪ್ರಶಸ್ತಿಗೆ ಹೊನ್ನಾಳಿಯ ಸದಾಶಿವ ಸೊರಟೂರು ಇವರ ‘ಗಾಯಗೊಂಡ ಸಾಲುಗಳು’ ಮತ್ತು ಹುಕ್ಕೇರಿಯ ಸಂತೋಷ ನಾಯಿಕರ ‘ಹೊಸ ವಿಳಾಸದ ಹೆಜ್ಜೆಗಳು’ ಆಯ್ಕೆಯಾಗಿವೆ. ಈ ಸಲ ಒಟ್ಟು ೭೧ ಹಸ್ತಪ್ರತಿಗಳು ಬಂದಿದ್ದವು. ಪ್ರಶಸ್ತಿಯು ತಲಾ ೬,೦೦೦ ರೂ. ನಗದು ಮತ್ತು ಪ್ರಶಸ್ತಿ ಫಲಕವನ್ನು ಒಳಗೊಂಡಿದೆ. ನಂವಬರ್ ತಿಂಗಳು ಕೊಪ್ಪಳದಲ್ಲಿ ನಡೆಯುವ ‘ಗವಿಸಿದ್ಧ ಎನ್. ಬಳ್ಳಾರಿ – ಸಾಹಿತ್ಯೋತ್ಸವ’ದಲ್ಲಿ ವಿಜೇತರಿಗೆ ಪ್ರಶಸ್ತಿ ವಿತರಣೆ ಮಾಡಲಾಗುವುದು.