ಕೃಷ್ಣಾನದಿಯಲ್ಲಿ ಮುಳುಗಿ ಯುವತಿ ಸಾವು

ಕೃಷ್ಣಾನದಿಯಲ್ಲಿ ಮುಳುಗಿ ಯುವತಿ ಸಾವು

 

ಬೆಳಗಾವಿ: ಸ್ನಾನ ಮಾಡುವಾಗ ಕಾಲು ಜಾರಿ ನದಿಯಲ್ಲಿ 35 ವರ್ಷದ ಯುವತಿ ಮುಳಗಿರುವ ಘಟನೆ ಚಿಕ್ಕೋಡಿ ತಾಲೂಕಿನ ಕಲ್ಲೋಳ ಗ್ರಾಮದ ಕೃಷ್ಣಾ ನದಿಯಲ್ಲಿ ನಡೆದಿದೆ.

ನಿಪ್ಪಾಣಿ ಪಟ್ಟಣದ ನಿವಾಸಿ ಗೀತಾಂಜಲಿ ದಿನಕ‌ರ್ ಕಲ್ಲೋಳಕರ (35) ಎಂದು ಗುರುತಿಸಲಾಗಿದೆ. ಯುವತಿ ಎಂದಿನಂತೆ ಬಟ್ಟೆ ತೊಳೆದುಕೊಂಡು, ಇನ್ನೆನು ಸ್ನಾನ ಮಾಡಬೇಕು ಎನ್ನುವಷ್ಟರಲ್ಲಿ ಕಾಲು ಜಾರಿ ನದಿಯಲ್ಲಿ ಬಿದ್ದು ಮುಳುಗಿ ಯುವತಿ ಸಾವನ್ನಪ್ಪಿರುವ ಘಟನೆ ನಿನ್ನೆ ಸಾಯಕಾಂಲ ನಡೆದಿದೆ.

ಅಂಕಲಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಮುಂದಿನ ತನಿಖೆ ಕೈಗೊಂಡಿದ್ದಾರೆ.