This is the title of the web page
This is the title of the web page

ಯಾರ ಪಾಲಿಗೆ ಗೋಕಾಕ ಕರದಂಟು

ಯಾರ ಪಾಲಿಗೆ ಗೋಕಾಕ ಕರದಂಟು

 

ಸುರೇಶ ನೇಲ್ಲಿ೯

ರಾಜಕೀಯ ವಿಶ್ಲೇಷಣೆ

ರಮೇಶಗೆ ‘ಮಾಡು ಇಲ್ಲವೇ ಮಡಿ’ ಹೋರಾಟ!

ಬೆಳಗಾವಿ: ರಾಜರಾಜಕಾರಣದಲ್ಲಿ ಗೋಕಾಕ ವಿಧಾನಸಭಾ ಕ್ಷೇತ್ರದ ಅಖಾಡದಲ್ಲಿ ಬಿರುಸಿನ ಪೈಪೋಟಿ ನಡೆಯಲಿದ್ದು, ಗೆಲುವಿನ ತವಕದಲ್ಲಿರುವ ಹಾಲಿ ಶಾಸಕ ರಮೇಶ ಜಾರಕಿಹೊಳಿಯವರನ್ನು ಮಣಿಸಲು ಕಾಂಗ್ರೆಸ್‌ ಪ್ರಬಲ ಅಸ್ತ್ರ ತಯಾರಿಸಿದೆ ಎನ್ನಲಾಗುತ್ತದೆ.
ಸತತ ಆರು ಬಾರಿ ಗೆದ್ದು, ಗೋಕಾಕದಲ್ಲಿ ಬಲಿಷ್ಠ ಜಾರಕಿಹೊಳಿ ಸಾಮ್ರಾಜ್ಯ ಕಟ್ಟಿದ ರಮೇಶನನ್ನು ಉರುಳಿಸಲು ಕಾಂಗ್ರೆಸ್‌ ಈ ಬಾರಿ ಲಿಂಗಾಯತ ಅಭ್ಯರ್ಥಿ ಅಶೋಕ ಪೂಜಾರಿಯನ್ನು ಅಖಾಡಕ್ಕೆ ಇಳಿಸಿದೆ. ಹೀಗಾಗಿ ರಮೇಶ ಜಾರಕಿಹೊಳಿ ಅವರು ಲಿಂಗಾಯತ ಸಮುದಾಯದ ಮತಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಲು ಹರಸಾಹಸ ಪಡುತ್ತಿದ್ದಾರೆ.

ಜಾರಕಿಹೊಳಿ ಅವರು ಗೋಕಾಕ್ ನಲ್ಲಿ ಕಳೆದ ಆರು ಚುನಾವಣೆಗಳಲ್ಲಿ ಗೆದ್ದು ಭದ್ರ ಬುನಾದಿ ಸ್ಥಾಪಿಸುವಲ್ಲಿ ಯಶಸ್ವಿಯಾಗಿದ್ದಾರೆ. ಲಿಂಗಾಯತರು, ಎಸ್‌ಸಿ/ಎಸ್‌ಟಿಗಳು, ಒಬಿಸಿಗಳು ಮತ್ತು ಮೇಲ್ಜಾತಿ ಜನಸಂಖ್ಯೆ ಸೇರಿದಂತೆ ಎಲ್ಲಾ ಸಮುದಾಯಗಳ ವಿಭಾಗಗಳು ಇದುವರೆಗೆ ರಮೇಶ್ ಜಾರಕಿಹೊಳಿ ಅವರಿಗೆ ಬೆಂಬಲ ನೀಡಿವೆ.

ಲಿಂಗಾಯತರು ಮಣೆ: ಗೋಕಾಕ ಕ್ಷೇತ್ರದಲ್ಲಿ 75 ಸಾವಿರಕ್ಕೂ ಹೆಚ್ಚು ಮತದಾರರನ್ನು ಹೊಂದಿರುವ ಲಿಂಗಾಯತ ಸಮುದಾಯವು ಈ ಬಾರಿ ಇಬ್ಭಾಗವಾಗಿದ್ದು, ಜಾರಕಿಹೊಳಿ ಅವರನ್ನು ಸೋಲಿಸಲು ಕಾಂಗ್ರೆಸ್ ಮತ್ತು ಬಿಜೆಪಿ ಎರಡೂ ಪಂಚಮಸಾಲಿ ಲಿಂಗಾಯತ ಮುಖಂಡರು ಒಟ್ಟಾಗಿ ಕೆಲಸ ಮಾಡುತ್ತಿರುವ ಕ್ಷೇತ್ರದ ವಲಯದಲ್ಲಿ ಚರ್ಚೆಗಳಾಗುತ್ತಿವೆ.

ರಮೇಶಗೆ ‘ಮಾಡು ಇಲ್ಲವೇ ಮಡಿ’ ಹೋರಾಟ!

ಗೋಕಾಕದಲ್ಲಿ ಲಿಂಗಾಯತ ಸಮುದಾಯದ ನಿರ್ಧಾರ ಮೇಲೆ ಶಾಸಕರ ಹಣೆಬರಹ ನಿಂತಿದೆ. ತಮ್ಮ ಸಮುದಾಯದ ಅಶೋಕ ಪೂಜಾರಿ ಕಣಕ್ಕೆ ಇಳಿಯುವ ಲಕ್ಷಣಗಳಿದ್ದು, ಒಂದು ವೇಳೆ ಟಿಕೆಟ್‌ ಪೈನಲ್‌ ಆದರೆ, ರಮೇಶಗೆ ಮಾಡು ಇಲ್ಲವೇ ಮಡಿ ಹೋರಾಟ ಅಗತ್ಯವಾಗಿದೆ. ಅಶೋಕಗೆ ಕಾಂಗ್ರೆಸ್‌ ನ ಎಸ್‌ ಸಿ/ ಎಸ್‌ ಟಿ , ಮುಸ್ಲಿಂ ಹಾಗೂ ಪ್ರಬಲ ಸಮುದಾಯವಾಗಿರುವ ಲಿಂಗಾಯತ ಮತಗಳು ವಾಲುವ ಲಕ್ಷಣಗಳಿವೆ. ಬಿಜೆಪಿ ಬೆಂಬಲಿತರಿಂದ ರಮೇಶಗೆ ಲಿಂಗಾಯತ ಮತಗಳು ಪಡೆಯುವ ಸಾಧ್ಯತೆ ಇದೆ ಸಾಧ್ಯತೆ ಇದ್ದು, ದಶದಿಕ್ಕಿನಲ್ಲಿ ರಮೇಶ ಜಾರಕಿಹೊಳಿಯನ್ನು ಕಟ್ಟಿಹಾಕಲು ಕೈ ಪಡೆ ರಣತಂತ್ರ ರೂಪಿಸಿದೆ ಎನ್ನಲಾಗಿದೆ.

ರಮೇಶಗೆ ಪಸ್ಲ್‌ : ಆರು ಭಾರಿ ಗೆದ್ದು ಕ್ಷೇತ್ರವನ್ನು ಮುಷ್ಠಿಯಲ್ಲಿ ಇಟ್ಟಕೊಂಡಿರುವ ರಮೇಶ ಜಾರಕಿಹೊಳಿ ಅಭಿವೃದ್ಧಿ ಹಾಗೂ ಅಭಿಮಾನ ಅಲೆ ಬಿಸಬಹುದು ಆದರೆ, ಕ್ಷೇತ್ರದ ಹಿನ್ನೊಟವೇ ಬೇರೆ ಯಾಗಿದೆ ಎನ್ನಲಾಗಿದೆ. ಯಾಕೆಂದರೆ, ಬೆಳಗಾವಿಯ ಸ್ಥಳೀಯ ಸಂಸ್ಥೆಗಳ ಕ್ಷೇತ್ರದಿಂದ ಕಳೆದ ಎಂಎಲ್‌ಸಿ ಚುನಾವಣೆಯಲ್ಲಿ ಮಹಾಂತೇಶ ಕವಟಗಿಮಠ (ಬಿಜೆಪಿ) ಸೋಲಿಗೆ ರಮೇಶ್ ಕಾರಣ ಎಂದು ಲಿಂಗಾಯತರ ಒಂದು ವರ್ಗ ಆರೋಪಿಸಿದೆ, ಅನೇಕ ಲಿಂಗಾಯತ ಮುಖಂಡರು ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ (ಪಂಚಮಸಾಲಿ ಲಿಂಗಾಯತ) ಮತ್ತು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರೊಂದಿಗೆ ಕೈಜೋಡಿಸಿದ್ದಾರೆ. ಹೀಗಾಗಿ ರಮೇಶ್ ಹಿನ್ನಡೆ ಯಾಗಬಹುದು ಎಂದು ಹೇಳಲಾಗುತ್ತಿದೆ.

ಅವರು 2018 ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ನಿಂದ ನಂತರ ಬಿಜೆಪಿ ಅಭ್ಯರ್ಥಿಯಾಗಿದ್ದ ರಮೇಶ್ ವಿರುದ್ಧ ಕಡಿಮೆ ಅಂತರದಿಂದ ಸೋತರು. ಪೂಜಾರಿ ಅವರು ಲಿಂಗಾಯತ ಮಠಗಳ ಬೆಂಬಲ ಹೊಂದಿದ್ದಾರೆ. ಕಾಂಗ್ರೆಸ್ ಮುಖಂಡ ಮಹಾಂತೇಶ ಕಡಾಡಿ ಕೂಡ ಗೋಕಾಕ ಟಿಕೆಟ್ ಆಕಾಂಕ್ಷಿಯಾಗಿದ್ದಾರೆ.

ಬಿಜೆಪಿ ಅಭ್ಯರ್ಥಿಯಾಗಲು ಲಿಂಗಾಯತ ಮತ್ತು ಮೇಲ್ವರ್ಗದ ಮತಗಳನ್ನು ಕ್ರೋಢೀಕರಿಸುವ ಅನುಕೂಲ ರಮೇಶ್‌ಗೆ ಇದ್ದರೂ, ಬೆಳಗಾವಿ ಪ್ರದೇಶದ ಹಲವಾರು ಬಿಜೆಪಿ ನಾಯಕರು ಅವರ ವಿರುದ್ಧ ಕೆಲಸ ಮಾಡುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ. ತನ್ನ ಗೆಲುವಿನ ಸರಣಿಯನ್ನು ಮುಂದುವರಿಸಲು ಅವನು ತನ್ನ ಸ್ಥಾನವನ್ನು ಹೇಗೆ ಬಲಪಡಿಸುತ್ತಾರೆ ಎಂಬುದು ಕುತೂಹಲ ಮೂಡಿಸಿದೆ.