ಸಿಎಂ ಸಿದ್ದರಾಮಯ್ಯ ಮಾತಿಗೆ ಮಾತು, ಏಟಿಗೆ ಎದುರೇಟು ನೀಡುವ ನುರಿತ ನಾಯಕ ಆ ಸ್ಥಾನಕ್ಕೆ ಸೂಕ್ತ,
ಆಡಳಿತದ ಪಕ್ಷದ ನಾಯಕರಿಗೆ ಸೆಡ್ಡು ಹೊಡೆಯಲು ಪ್ರಬಲ ಪೈಪೋಟಿ ನೀಡುವ ನಾಯಕರನ್ನು ಅಗತ್ಯವಿದೆ.
ಸಿಎಂ ಆಯ್ಕೆ ಬೆನ್ನಿಗೆ ಬಿಜೆಪಿಯಲ್ಲೂ ಗರಿಗೆದರಿದ ರಾಜಕೀಯ ಚಟುವಟಿಕೆ: ಯಾರು ಆ ನಾಯಕ ?
ಹುಮ್ಮಸ್ಸಿನಲ್ಲಿ ಟಗರಿಗೆ ಡಿಚ್ಚಿ ಕೊಡುವ ವಿಪಕ್ಷ ನಾಯಕ ಯಾರು
ಬೆಳಗಾವಿ: ರಾಜ್ಯದ ಮುಖ್ಯಮಂತ್ರಿಯಾಗಿ ಅಹಿಂದ ನಾಯಕ ಸಿದ್ದರಾಮಯ್ಯ ಅವರು ಪ್ರಮಾಣ ವಚನ ಸ್ವೀಕರಿಸಿದ ಹಿನ್ನೆಲೆಯಲ್ಲಿ, ಇತ್ತ ರಾಜ್ಯ ಬಿಜೆಪಿಯಲ್ಲೂ ಇದೀಗ ಭಾರಿ ರಾಜಕೀಯ ಚಟುವಟಿಕೆ ಗರಿಗೆದರಿದೆ. ವಿಧಾನಸಭೆಯ ವಿಪಕ್ಷ ನಾಯಕನ ಆಯ್ಕೆ ಹಿನ್ನೆಲೆಯಲ್ಲಿ ರಾಜಕಾರಣ ಚುರುಕುಗೊಂಡಿದೆ.
ಈ ಹಿಂದೆ ವಿಧಾನಸಭೆಯ ವಿಪಕ್ಷ ನಾಯಕ ಆಗಿದ್ದ ಸಿದ್ದರಾಮಯ್ಯ ಇದೀಗ ನೂತನ ಮುಖ್ಯಮಂತ್ರಿ ಆಗಿದ್ದಾರೆ., ಇನ್ನೊಮ್ಮೆ ಸಿಎಂ ಆಗುವ ಅವಕಾಶ ಸಿಕ್ಕಿದೆ. ಮತ್ತೊಂದೆಡೆ ಪ್ರಬಲ ಆಕಾಂಕ್ಷಿಯಾಗಿದ್ದ ಡಿ.ಕೆ.ಶಿವಕುಮಾರ್ಗೆ ಉಪ ಮುಖ್ಯಮಂತ್ರಿ ಸ್ಥಾನ ನೀಡಲಾಗಿದೆ.
ಕಾಂಗ್ರೆಸ್ನಲ್ಲಿ ಸಿಎಂ ಆಯ್ಕೆ ಗೊಂದಲ ಪರಿಹಾರ ಆಗುತ್ತಿದ್ದಂತೆ ಇತ್ತ ಬಿಜೆಪಿಯಲ್ಲಿ ವಿಧಾನಸಭೆಯ ವಿಪಕ್ಷ ನಾಯಕನ ಆಯ್ಕೆಗೆ ಮುಂದಾಗಲಾಗಿದೆ. ಈ ಕುರಿತು ಪ್ರತಿಕ್ರಿಯೆ ನೀಡಿರುವ ಹಂಗಾಮಿ ಸಿಎಂ ಬೊಮ್ಮಾಯಿ, ವಿಪಕ್ಷ ನಾಯಕನ ಆಯ್ಕೆ ಕುರಿತು ಶೀಘ್ರವೇ ಶಾಸಕಾಂಗ ಪಕ್ಷದ ಸಭೆ ಕರೆದು ಪ್ರಕ್ರಿಯೆ ನಡೆಸುತ್ತೇವೆ ಎಂದಿದ್ದಾರೆ.
ಯಾರು ವಿರೋಧ ಪಕ್ಷದ ನಾಯಕ: ರಾಜ್ಯ ಚುನಾವಣೆಯಲ್ಲಿ ಠೇವಣಿ ಕಳೆದುಕೊಂಡಿರುವ ಬಿಜೆಪಿ ನಾಯಕರಿಗೆ ವಿರೋದ ಪಕ್ಷದ ನಾಯಕನಿಗೆ ಪೈಪೋಟಿ ನಡೆಯುವ ಸಾದ್ಯತೆ ಇದೆ. 136 ಕ್ಷೇತ್ರದಲ್ಲಿ ಅಬ್ಬರಿಸಿದ ಕಾಂಗ್ರೆಸ್ ನಾಯಕರಿಗೆ ಆಡಳಿತ ನಡೆಸಲು ಸಜ್ಜಾಗಿದ್ದಾರೆ.
ಭರವಸೆಯಂತೆ ಯೋಜನೆಗಳು ಜಾರಿಗೊಳಿಸಲಾಗುವು ಎಂದು ಸಿಎ ಸಿದ್ದರಾಮಯ್ಯ ತಿಳಿಸಿದ್ದಾರೆ. ಆದರೆ, ಠೇವಣಿ ಕಳೆದುಕೊಂಡ ಬಿಜೆಪಿಗೆ ವಿಪಕ್ಷ ನಾಯಕ ಸ್ಥಾನದಲ್ಲಿ ಯಾರನ್ನು ಕುರಿಸಬೇಕುವೆಂದು ಚಿಂತನೆ ನಡೆಸುತ್ತಿದೆ.
ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಹೆಸರು ಮುನ್ನಲೇಗೆ ಬಂದಿದ್ದು, ಆಯ್ಕೆಯೆ ಕಗ್ಗಂಟಾಗಿದೆ.
ಆಡಳಿತದ ಪಕ್ಷದ ನಾಯಕರಿಗೆ ಸೆಡ್ಡು ಹೊಡೆಯಲು ಪ್ರಬಲ ಪೈಪೋಟಿ ನೀಡುವ ನಾಯಕರನ್ನು ಅಗತ್ಯವಿದೆ. ಆದರೆ, ಯಾರನ್ನು ಆಯ್ಕೆ ಮಾಡಬಹುದು ಎನ್ನುವುದು ಒಂದು ದೊಡ್ಡ ಪ್ರಶ್ನೆ..?
ಅಹಿಂದ ನಾಯಕ ಸಿಎಂ ಸಿದ್ದರಾಮಯ್ಯ ಅವರ ಮಾತಿಗೆ ಮಾತು, ಏಟಿಗೆ ಎದುರೇಟು ನೀಡುವ ನುರಿತ ನಾಯಕ ಆ ಸ್ಥಾನಕ್ಕೆ ಸೂಕ್ತ, ಯಾಕೆಂದರೆ ಅಧಿವೇಶನ ಸೇರಿದಂತೆ ಸಿಎಂಗೆ ಟಕ್ಕರ್ ಕೊಡುವ ನಾಯಕನನ್ನು ಆಯ್ಕೆ ಮಾಡಬೇಕು. ಹುಮ್ಮಸ್ಸಿನಲ್ಲಿ ಟಗರಿಗೆ ಡಿಕ್ಕಿ ನೀಡಲು ಯಾರು ನಾಯಕ ಎಂಬುವುದೇ ಪ್ರಶ್ನೆ…