ಬೆಳಗಾವಿ : ಅಥಣಿಯಲ್ಲಿ ಕೆಲವು ಪಂಚಮಸಾಲಿ ಮುಖಂಡರ ಜೊತೆಗೆ ಮಾಜಿ ಡಿ ಸಿ ಎಂ ಲಕ್ಷ್ಮಣ ಸವದಿ ಸಭೆ ಮಾಡಿದರು ತದನಂತರ ಕೆಲವು ಪಂಚಮಸಾಲಿ ಸಮಾಜದ ಮುಖಂಡರು ಒಪ್ಪಿಗೆ ನೀಡಿದರು. ಇನ್ನೂ ಕೆಲವು ಮುಖಂಡರು ಸವದಿಗೆ ಪಂಚಮಸಾಲಿ ಸಮುದಾಯದ ಬೆಂಬಲ ಇಲ್ಲಾ ಎಂದು ಹೇಳಿಕೆ ನೀಡಿದ್ದರು. ಇದರ ನಡುವೆ ಮಾಜಿ ಡಿಸಿಎಂ ಲಕ್ಷ್ಮಣ ಸವದಿ ವಿರುದ್ಧ ಪಂಚಮಸಾಲಿ ಸಮುದಾಯದ ಜಗದ್ಗುರುಗಳು ಹೇಳಿಕೆ ನೀಡಿದ್ದು ನಮ್ಮ ಬೆಂಬಲ ಶಾಸಕ ಮಹೇಶ್ ಕುಮಠಳ್ಳಿ ಅವರಿಗೆ ಎಂದು ಹೇಳಿದ್ದಾರೆ.
ಪಂಚಮಸಾಲಿ ಸಮುದಾಯದ ಆಲಗೂರ ಮೂರನೇ ಪೀಠದ ಜಗದ್ಗುರು ಮಹಾದೇವ ಶಿವಾಚಾರ್ಯ ಶ್ರೀ ಪ್ರತಿಕ್ರಿಯೆ ನೀಡಿದ್ದು. ನಮ್ಮದೆ ಸಮುದಾಯದ ಶಾಸಕ ಇರುವಾಗ ನಾವು ಬೇರೆಯವರಿಗೆ ಬೆಂಬಲ ನೀಡುವ ಪ್ರಶ್ನೆ ಇಲ್ಲ. ಮಹೇಶ್ ಕುಮಠಳ್ಳಿ ನಮ್ಮ ಸಮಾಜದ ಪರವಾಗಿ ಯಾವತ್ತೂ ನಿಂತಿದ್ದು ಸಮಾಜ ಅವರ ಪರವಾಗಿ ಇರುತ್ತದೆ ಎಂದು ಹೇಳುವ ಮೂಲಕ ಲಕ್ಷ್ಮಣ ಸವದಿ ಹೇಳಿಕೆಗೆ ವಿರೋಧ ವ್ಯಕ್ತಪಡಿಸಿದ್ದಾರೆ