ರಸೀದಿ ಇಲ್ಲದೇ ಸಾಗಿಸುತ್ತಿದ್ದ ರೂ.೩೧೮೨೦ ಮೌಲ್ಯದ ವಿವಿಧ ತರಹದ ಬ್ಯಾಗಗಳ ವಶಕ್ಕೆ

ರಸೀದಿ ಇಲ್ಲದೇ ಸಾಗಿಸುತ್ತಿದ್ದ ರೂ.೩೧೮೨೦ ಮೌಲ್ಯದ ವಿವಿಧ ತರಹದ ಬ್ಯಾಗಗಳ ವಶಕ್ಕೆ

 

ಬೈಲಹೊಂಗಲ- ಅಧಿಕೃತ ರಸೀದಿ ಇಲ್ಲದೇ ಸಾಗಿಸುತ್ತಿದ್ದ ರೂ.೩೧೮೨೦ ಮೌಲ್ಯದ ವಿವಿಧ ತರಹದ ಬ್ಯಾಗಗಳನ್ನು ವಶಪಡಿಸಿಕೊಂಡ ಘಟನೆ ಬೈಲವಾಡ ಕ್ರಾಸ ಚೆಕ್‌ಪೋಸ್ಟ ಬಳಿ ಶನಿವಾರ ಜರುಗಿದೆ.
ಮಾರುತಿ ಒಮ್ನಿ ಕಾರಿನಲ್ಲಿ ಸಾಗಿಸುತ್ತಿದ್ದ ೭೮ ಲಗೆಜ ಬ್ಯಾಗ, ೩೦ ಲೆಡಿಸ್ ಬ್ಯಾಗ, ೨೫೨ ಕೈಚಿಲ, ೩೦ ಪೌಚಗಳು ಹಾಗೂ ರೂ.೪ ಲಕ್ಷ ರೂ ಮೌಲ್ಯದ ಮಾರುತಿ ಒಮ್ನಿ ಕಾರನ್ನು ವಶಕ್ಕೆ ತೆಗೆದುಕೊಂಡು ಸವದತ್ತಿ ತಾಲೂಕಿನ ರಾಮಾಪುರ ಸೈಟಿನ ನಿವಾಸಿ ಪ್ರಜ್ವಲ ಸತೀಶ ಸುಖರಾವೆ(೨೭) ಈತನನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ.
ಡಿವೈಎಸ್‌ಪಿ ರವಿ ನಾಯ್ಕ, ಸಿಪಿಐ ಶಿವಶಂಕರ ಗಣಾಚಾರಿ, ತಾಪಂ.ಇಓ ಸುಭಾಸ ಸಂಪಗಾAವಿ ಹಾಗೂ ಸಿಬ್ಬಂದಿ ಇದ್ದರು.
ಬೈಲಹೊಂಗಲ ಪೊಲಿಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.