This is the title of the web page
This is the title of the web page

ಯಾದಗೂಡ ಗ್ರಾಮದಲ್ಲಿ ಕೃಷಿ ಹೊಂಡದಲ್ಲಿ ಬಿದ್ದ ಚಂಡ (ಬಾಲ) ತೆಗೆಯಲು ಹೋಗಿ ಬಾಲಕರಿಬ್ಬರು ನೀರಿನಲ್ಲಿ ಮುಳಗಿ ಮೃತಪಟ್ಟಿದ್ದಾರೆ

 

ಹುಕ್ಕೇರಿ: ಕೃಷಿ ಹೊಂಡದಲ್ಲಿ ಬಿದ್ದ ಚಂಡ (ಬಾಲ) ತೆಗೆಯಲು ಹೋಗಿ ಬಾಲಕರಿಬ್ಬರು ಮುಳಗಿ ಮೃತ ಪಟ್ಟ ಹೃದಯ ವಿದ್ರಾವಕ ಘಟನೆ ತಾಲೂಕಿನ ಯಾದಗೂಡ ಗ್ರಾಮದಲ್ಲಿ ರವಿವಾರ ಸಂಜೆ ನಡೆದಿದೆ.
ಹುಕ್ಕೇರಿ ತಾಲೂಕಿನ ಯಾದಗೂಡ ಗ್ರಾಮದ ಬಾಲಕರಾದ ಯಮನಪ್ಪ ಪ್ರಕಾಶ ರಡ್ಡೆರಟ್ಟಿ(೧೦). ನಾಲ್ಕನೇ ತರಗತಿಯಲ್ಲಿ ಹಾಗೂ ಯೇಸು ಬಸಪ್ಪ ವಗ್ಗರ (೧೪) ಎಂಟನೇ ತರಗತಿಯಲ್ಲಿ ಓದುತ್ತಿರುವ ಮೃತ ಬಾಲಕರು.
ಗ್ರಾಮದ ಲಕ್ಷ್ಮೀ ಗುಡಿ ಹತ್ತಿರ ರವಿವಾರ ಬಾಲಕರು ಕ್ರಿಕೆಟ್ ಆಟ ಆಡಲು ಹೋಗಿ ಸಮೀಪದ ಹೊಂಡದಲ್ಲಿ ಚಂಡು ನೀರಿನಲ್ಲಿ ಬಿದ್ದಿದರಿಂದ ತರಲು ಹೋಗಿ ಒರ್ವ ಬಾಲಕ ಮುಳಗಿದ್ದು ಆತನ ರಕ್ಷಣೆ ಧಾವಿಸಿದ ಮತ್ತೋಬ ಬಾಲಕ ನೀರಿನಲ್ಲಿ ಮುಳಗಿ ಮೃತ ಪಟ್ಟಿದ್ದಾರೆ.
ಬಾಲಕರಿಬ್ಬರ ಶವಗಳನ್ನು ಹೊರತೆಗೆದು ಹುಕ್ಕೇರಿ ಸರಕಾರಿ ಆಸ್ಪತ್ರೆಯಲ್ಲಿ ಶವಪರೀಕ್ಷೆ ನಡೆಸಲಾಯಿತು.