This is the title of the web page
This is the title of the web page

ಬೈಲಹೊಂಗಲ ಮತಕ್ಷೇತ್ರದಲ್ಲಿ ತ್ರಿಕೋಣ ಸ್ಪರ್ಧೆ: ವಿಜಯ ಮಾಲೆ ಯಾರಿಗೆ?

ಬೈಲಹೊಂಗಲ ಮತಕ್ಷೇತ್ರದಲ್ಲಿ ತ್ರಿಕೋಣ ಸ್ಪರ್ಧೆ: ವಿಜಯ ಮಾಲೆ ಯಾರಿಗೆ?

ವಿಶೇಷ ವರದಿ
ಬೈಲಹೊಂಗಲ- ವಿಧಾನಸಭಾ ಚುನಾವಣೆಯ ಫಲಿತಾಂಶ ದಿ. ೧೩ ರಂದು ಶನಿವಾರ ಹೊರಬಿಳಲಿದೆ. ಪ್ರತಿಯೊಬ್ಬರು ಈ ಕ್ಷಣಕ್ಕಾಗಿ ಕೂತೂಹಲದಿಂದ ಜಾತಕ ಪಕ್ಷಿಯಂತೆ ಕಾಯುತ್ತಿದ್ದಾರೆ. ತಮ್ಮ ತಮ್ಮ ಮತಕ್ಷೇತ್ರದಲ್ಲಿ ಹೊಸ ಶಾಸಕರು ಯಾರಾಗಬಹುದು ಎಂಬ ಕಾತರ ಎಲ್ಲರನ್ನೂ ತೀವ್ರವಾಗಿ ಕಾಡುತ್ತಿದೆ. ಬೈಲಹೊಂಗಲ ಮತಕ್ಷೇತ್ರದಲ್ಲಿ ಬಿಜೆಪಿ, ಕಾಂಗ್ರೆಸ್, ಸ್ವಾಭಿಮಾನಿ ಪಕ್ಷೇತರ ಅಭ್ಯರ್ಥಿಯಿಂದ ತ್ರಿಕೋಣ ಸ್ಪರ್ದೆ ಏರ್ಪಟ್ಟಿದೆ. ಆದರೂ ಕಾಂಗ್ರೇಸ್ ಪಕ್ಷದ ಅಭ್ಯರ್ಥಿ ಶಾಸಕ ಮಹಾಂತೇಶ ಕೌಜಲಗಿ ಅವರ ಸರಳತೆ, ಕ್ಷೇತ್ರದಲ್ಲಿ ಸಾವಿರಾರು ಕೋಟಿ ಅಭಿವೃದ್ದಿ ಕಾಮಗಾರಿಗಳನ್ನು ಪರಿಗಣಿಸಿ ಜನತೆ ಅವರನ್ನು ಮತ್ತೋಮ್ಮೆ ಪ್ರಚಂಡ ಬಹುಮತದಿಂದ ಆರಿಸಿ ತರಲಿದ್ದಾರೆ ಎಂದು ಅವರ ಬೆಂಬಲಿಗರಾದ ಶಂಕರ ಅವಟಗಿ, ಹಸನ ಗೋರವನಕೊಳ್ಳ ತಮ್ಮ ಮುಕ್ತ ಅನಿಸಿಕೆಗಳನ್ನು ಹಂಚಿಕೊAಡಿದ್ದಾರೆ.
ಕಳೆದ ೧೫ ದಿನದಿಂದ ನಾಮಪತ್ರ ಸಲ್ಲಿಕೆಯಿಂದ ಮತದಾನದ ಕೊನೆಯವರೆಗೂ ಬಹಳಷ್ಟು ಬ್ಯೂಸಿಯಲ್ಲಿದ್ದ ಬೈಲಹೊಂಗಲ ಕ್ಷೇತ್ರದ ಸ್ಪರ್ಧಾಳು ಅಭ್ಯರ್ಥಿಗಳು ನಿನ್ನೆ ಮತ್ತು ಇಂದು ಬೆಳಿಗ್ಗೆಯಿಂದ ಸ್ವಲ್ಪ ರಿಲ್ಯಾಕ್ಸ್ ಮೂಡಲ್ಲಿದ್ದು ತಮ್ಮ ತಮ್ಮ ಮನೆಗಳ ಕುಟುಂಬದವರೊAದಿಗೆ ಕಾಲ ಕಳೆದರು.
ಪಕ್ಷೇತರ ಅಭ್ಯರ್ಥಿ ಡಾ.ವಿಶ್ವನಾಥ ಪಾಟೀಲ ಅವರು ತಮ್ಮ ಮನೆಯ ಆವರಣದಲ್ಲಿ ಕುಟುಂಬದವರೊAದಿಗೆ ಸೇರಿ ಸಂತಸದ ಕ್ಷಣಗಳನ್ನು ಹಂಚಿಕೊAಡು ಕ್ಷೇತ್ರವಾರು ನಡೆದ ಮತಗಟ್ಟೆಗಳಲ್ಲಿನ ಮತದಾನದ ಲೆಕ್ಕಾಚಾರ ಕುರಿತಾಗಿ ಚರ್ಚೆ ನಡೆಸುತ್ತ ಕುಳಿತಿದ್ದರು.
ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಜಗದೀಶ ಮೆಟಗುಡ್ಡ ಅವರು ಬೆಳಗಿನವರೆಗೆ ತಮ್ಮ ನಿವಾಸದಲ್ಲಿದ್ದು ತಮ್ಮ ಹಿತೈಷಿಗಳ ಜೊತೆ ಮತದಾನದ ಕುರಿತು ರಿಲ್ಯಾಕ್ಸ್ ಮೂಡಿನ ಚರ್ಚೆ ನಡೆಸಿ, ರಿಲ್ಯಾಕ್ಸ್ ಮೂಡಲ್ಲಿ ಸಂತಸದ ಕ್ಷಣದಲ್ಲಿ ಕಾಲ ಕಳೆದರು.
ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಶಾಸಕ ಮಹಾಂತೇಶ ಕೌಜಲಗಿ ಅವರು ಬೆಳಿಗ್ಗೆಯಿಂದ ಕಾರ್ಯಕರ್ತರೊಂದಿಗೆ ಚರ್ಚೆ ನಡೆಸಿದರು. ಜೆಡಿಎಸ್ ಅಭ್ಯರ್ಥಿ ಶಂಕರ ಮಾಡಲಗಿ ಮನೆಯಲ್ಲಿ ರಿಲ್ಯಾಕ್ಸ್ ಮೂಡಲ್ಲಿ ಇದ್ದಾರೆ.
ಮೇ ೧೦ರಂದು ಮತದಾರರು ನಿರ್ಧಾರ ಮಾಡಿ ಮತ ಚಲಾಯಿಸಿದ ಮತಗಳು ಮತಯಂತ್ರಗಳಲ್ಲಿ ಭದ್ರವಾಗಿದ್ದು ಅಭ್ಯರ್ಥಿಗಳ ಭವಿಷ್ಯ ಮೇ ೧೩ ರಂದು ಹೊರಬೀಳಲಿದೆ ಅಲ್ಲಿಯವರೆಗೂ ರಿಲ್ಯಾಕ್ಸ್ ಮೂಡಲ್ಲಿರುವ ಅಭ್ಯರ್ಥಿಗಳ ಎದೆಯಲ್ಲಿ ಢವ ಢವ ಎನ್ನುತ್ತಿರುವದು ಅಕ್ಷರಶ: ಸತ್ಯ