ಹುಕ್ಕೇರಿ: ಧಾರಾಕಾರ ಮಳೆಯಿಂದ ತಾಲೂಕಿನ ಹರಗಾಪುರ ಗ್ರಾಮದ ಗುಡ್ಡ ಕುಸಿತಗೊಳ್ಳುತ್ತಿರುವದರಿಂದ ಜನರಿಗೆ ಮುಂಜಾಗೃತೆ ಸುರಕ್ಷಿತ ಸ್ಥಳಕ್ಕೆ ತೆರಳಲು ಸೂಚಿಸಲಾಗಿದೆ.
ಹುಕ್ಕೇರಿ ತಾಲೂಕಿನ ಹರಗಾಗುರ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಬರುವ ಗುಡ್ಡವು ಮ ಳೆಯಿಂದ ಬಿರುಕು ಬಿಟ್ಟು ಕುಸಿಯುತ್ತಿರುವ ಹಿನ್ನಲೆಯಲ್ಲಿ ಗುಡ್ಡದ ವ್ಯಾಪ್ತಿಯಲ್ಲಿ ಬರುವ ಸುಮಾರ ೨೫೦ ಮನೆಗಳಿಗೆ ಸೂಚನೆ ನೀಡಲಾಗಿದೆ. ಮಳೆಯಿಂದ ಕ್ಷಣ ಕ್ಷಣಕ್ಕೂ ಕುಸಿಯುತ್ತಿರುವದರಿಂAದ ಮೇಲಿಂದ ಕಲ್ಲುಗಳು ಉರುಳುತ್ತಿವೆ. ಕಾರಣ ಗುಡ್ಡದ ಕೆಳಗಿರುವ ಮನೆಗಳಲ್ಲಿ ಸುರಕ್ಷಿತವಾಗಿ ತೆರಳುವದು ಸೂಕ್ತ ಅವರಿಗೆ ಯಾವುದೇ ತೊಂದರೆಯಾಗದAತೆ ವ್ಯವಸ್ಥೆ ಕಲ್ಪಿಸಲಾಗುವದು.ತಿಳಿಸಲಾಗಿದೆ.
ತಾಲೂಕಾ ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿ ಪ್ರವೀಣ ಕಟ್ಟಿ ಅವರ ತಂಡವು ಸ್ಥಳಕ್ಕೆ ಬೆಟ್ಟಿ ನೀಡಿ ಕುಸಿಯುತ್ತಿರುವ ಗುಡ್ಡದ ಸ್ಥಿತಿಗತಿ ಬಗ್ಗೆ ಪರಿಶೀಲಿಸಿ ಗ್ರಾಮದಲ್ಲಿ ವಿಪತ್ತು ನಿರ್ವಾºಣೆ ಸಭೆ ನಡೆಸಿ ಮುಂಜಾಗೃತವಾಗಿ ಕೈಗೊಳ್ಳಬೇಕಾದ ಮಾಹಿತಿ ನೀಡಿದರು.
ಪಂಚಾಯತಿ ರಾಜ್ಯ ಇಲಾಖೆಯ ಸಹಾಯಕ ನಿರ್ದೇಶಕ ರಾಜು ಡಾಂಗೆ, ನೂಡಲ್ ಅಧಿಕಾರಿಗಳಾಧ ಸವಿತಾ ಹಲಕಿ, ಪಿಡಿಓ ಶಿಲ್ಪಾ ಮಗದುಮ್ಮ, ಗ್ರಾಮದ ಸದಸ್ಯರಾದ ಪವನ ಪಾಟೀಲ ಗ್ರಾ.ಪಂ ಅಧ್ಯಕ್ಷ ಉಪಾಧ್ಯಕರು ಉಪಸ್ಥಿತರಿದ್ದರು.