ಸದಾಶಿವ ನಗರದಲ್ಲಿ ಟೋಪಣ್ಣವರ ಮತ ಭೇಟೆ ಬೆಳಗಾವಿ

ಸದಾಶಿವ ನಗರದಲ್ಲಿ ಟೋಪಣ್ಣವರ ಮತ ಭೇಟೆ ಬೆಳಗಾವಿ

 

ಬೆಳಗಾವಿ ಉತ್ತರ ಮತಕ್ಷೇತ್ರದ ಆಮ್ ಆದ್ಮಿ ಅಭ್ಯರ್ಥಿ ರಾಜಕುಮಾರ ಟೋಪಣ್ಣವರ ಅಪಾರ ಬೆಂಬಲಿಗರೊಂದಿಗೆ ಭಾನುವಾರ ಸದಾಶಿವ ನಗರದಲ್ಲಿ ಮನೆ ಮನೆಗೆ ತೆರಳಿ ಮತಯಾಚನೆ ಮಾಡಿದರು.
ಕಳೆದ ಮೂರು ದಶಕಗಳಿಂದ ಬೆಳಗಾವಿ ಜಿಲ್ಲೆಯ ಅಭಿವೃದ್ಧಿ ಸಲುವಾಗಿ ಹೋರಾಟ ಮಾಡಿಕೊಂಡು ಬರುತ್ತಿದ್ದೇನೆ. ಬೆಳಗಾವಿ ಉತ್ತರ ಮತಕ್ಷೇತ್ರದಲ್ಲಿ ಆಮ್ ಆದ್ಮಿ ಪಕ್ಷದಿಂದ ಸ್ಪರ್ಧೆ ಮಾಡಿದ್ದು ಒಂದು ಬಾರಿ ನನಗೆ ಮತದಾರರು ಆಶೀರ್ವಾದ ಮಾಡಬೇಕೆಂದು ಮನವಿ ಮಾಡಿಕೊಂಡರು.
ಈ ಸಂದರ್ಭದಲ್ಲಿ ಶಂಕರ ಹೆಗಡೆ, ಜುನೈದ ಪಾಶಾ, ಎಂ.ಕೆ.ಸೈಯದ, ಶಿವಾನಂದ ಕಾರಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.