ನಾಮಪತ್ರ ವಾಪಸ್ಸು ಪಡೆಯಲು ಇಂದೇ ಕೊನೆ ದಿನ : ಬಂಡಾಯ ಅಭ್ಯರ್ಥಿಗಳ ನಡೆ ಕೌನ್‌ ಡೌನ್‌ ಶುರು..!

ನಾಮಪತ್ರ ವಾಪಸ್ಸು ಪಡೆಯಲು ಇಂದೇ ಕೊನೆ ದಿನ : ಬಂಡಾಯ ಅಭ್ಯರ್ಥಿಗಳ ನಡೆ ಕೌನ್‌ ಡೌನ್‌ ಶುರು..!

 

ಬೆಂಗಳೂರು: ರಾಜ್ಯ ವಿಧಾನಸಭೆ ಚುನಾವಣೆಗೆ ಸಲ್ಲಿಸಿದ್ದ ಅಭ್ಯರ್ಥಿಗಳ ನಾಮಪತ್ರ ವಾಪಸ್ಸು ತೆಗೆದುಕೊಳ್ಳುವುದಕ್ಕೆ ಇಂದೇ ಕೊನೆ ದಿನವಾಗಿದೆ.

ಈ ನಡುವೆ ಮೂರು ಪಾರ್ಟಿಗಳ ಬಂಡಾಯ ಅಭ್ಯರ್ಥಿಗಳು ನಾಮಪತ್ರವನ್ನು ಸಲ್ಲಿಸಿದ್ದು, ವಾಪಸ್ಸು ಪಡೆದುಕೊಳ್ಳುವುದಕ್ಕೆ ಇಂದೇ ಕೊನೆ ದಿನವಾಗಿರುವ ಕಾರಣ ಎಲ್ಲರ ಗಮನ ಬಂಡಾಯ ಅಭ್ಯರ್ಥಿಗಳ ಕಡೆ ನೆಟ್ಟಿದೆ.

ಚಿಕ್ಕಪೇಟೆ ಯಿಂದ ಗಂಗಾಭಿಕೆ ಕಾಂಗ್ರಸ್‌ನಿಂದ, ರಾಮದುರ್ಗ, ಪುತ್ತೂರು ನಿಂದ ಅರುಣ್‌ ಪುತ್ತಿಲ್ಲ ಬಿಜೆಪಿಯಿಂದ, ಹೊಸದುರ್ಗದಿಂದ ಗೂಳಿ ಹಟ್ಟಿ ಶೇಖರ್‌ ಬಿಜೆಪಿಯಿಂದ ಬಂಡಾಯ ಹುಟ್ಟಿ ಹಾಕಿದ್ದಾರೆ. ಅಫಜಲ್‌ ಪುರದಿಂದ ಬಿಜೆಪಿ ಟಿಕೆಟ್ ಸಿಗದೇ ಹಿನ್ನಲೆಯಲ್ಲಿ, ನಿತಿನ್ ಗುತ್ತದೆದಾರ್‌. ಶಿರಹಟ್ಟಿಯಿಂದ ಬಿಜೆಪಿ ಟಿಕೆಟ್ ನೀಡದ ಹಿನ್ನಲೆಯಲ್ಲಿ ರಾಮಣ ಲಮಾಣ ಕೂಡ ನಾಮಪತ್ರ ಸಲ್ಲಿಸಿದ್ದಾರೆ.

ಇವೆಲ್ಲದರ ನಡುವೆ ಬಂಡಾಯ ಅಭ್ಯರ್ಥಿಗಳ ಮನವೊಲಿಕೆ ಮಾಡಲು ಕೂಡ ಮುಂದಾಗಿದ್ದು, ಮುಂಬರುವ ಪಾರ್ಟಿಯಲ್ಲಿ ಸೂಕ್ತ ಸ್ಥಾನಮಾನವನ್ನು ನೀಡಲಾಗುವುದು ಅಂಥ ಸ್ಥಾನ ನೀಡಲಾಗುವುದು ಅಂತ ಹೇಳಿದ್ದಾರೆ. ಆದರೆ ಇವರ ನಡೆ ಕೂಡ ನಿಗೂಢವಾಗಿದೆ.