This is the title of the web page
This is the title of the web page

ಕರ್ನಾಟಕಕ್ಕೆ ಖಾಲಿ ಚೊಂಬು ಕೊಟ್ಟಿದ್ದಾರೆ: ಪ್ರಧಾನಮಂತ್ರಿ ಆಗಿ ಇಷ್ಟು ಕೆಳಮಟ್ಟಕ್ಕೆ ಮಾತನಾಡಬಾರದಿತ್ತು: ದಿಂಗಾಲೇಶ್ವರ ಶ್ರೀಗೆ ನಾಮಪತ್ರ ವಾಪಾಸ್ ಪಡೆದು ಕಾಂಗ್ರೆಸ್ ಬೆಂಬಲಿಸಲು ಹೇಳಿದ್ದೇನೆ: ಸಿಎಂ

ಕರ್ನಾಟಕಕ್ಕೆ ಖಾಲಿ ಚೊಂಬು ಕೊಟ್ಟಿದ್ದಾರೆ: ಪ್ರಧಾನಮಂತ್ರಿ ಆಗಿ ಇಷ್ಟು ಕೆಳಮಟ್ಟಕ್ಕೆ ಮಾತನಾಡಬಾರದಿತ್ತು: ದಿಂಗಾಲೇಶ್ವರ ಶ್ರೀಗೆ ನಾಮಪತ್ರ ವಾಪಾಸ್ ಪಡೆದು ಕಾಂಗ್ರೆಸ್ ಬೆಂಬಲಿಸಲು ಹೇಳಿದ್ದೇನೆ: ಸಿಎಂ

 

ಶಿವಮೊಗ್ಗ: ಕಪ್ಪು ಹಣ ತಂದು 15 ಲಕ್ಷ ಹಾಕುತ್ತೇವೆಂದರು, ಆದರೆ ಮಾಡಿದ್ರಾ? ಉದ್ಯೋಗ ಕೊಡುತ್ತೇವೆಂದರು, ಕೊಟ್ರಾ? ಖಾಲಿ ಚೊಂಬು ಚಿಪ್ಪು ಕೊಟ್ಟಿದ್ದಾರೆ ಅದಕ್ಕೆ ಜಾಹೀರಾತು ‌ಕೊಟ್ಟಿದ್ದೇವೆ ಎಂದು ಸಿದ್ದರಾಮಯ್ಯ ಹೇಳಿದರು. ಫಕ್ಕಿರೇಶ್ವರ ಮಠ ಜಾತ್ಯತೀತ ಮಠ. ಹೀಗಾಗಿ ಲೋಕಸಭೆಗೆ ನಾಮಪತ್ರ ಸಲ್ಲಿಸಿರುವ ದಿಂಗಾಲೇಶ್ವರ ಸ್ವಾಮೀಜಿಗಳಿಗೆ ನಾಮಪತ್ರ ವಾಪಾಸು ತೆಗೆದುಕೊಂಡು ಕಾಂಗ್ರೆಸ್ ಬೆಂಬಲಿಸಲು ಹೇಳಿದ್ದೇನೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಬರ ಪರಿಹಾರ ನೀಡುವಂತೆ ಕೇಂದ್ರ ಸರಕಾರಕ್ಕೆ ಸುಪ್ರೀಂ ಕೋರ್ಟ್ ಸೂಚನೆ ವಿಚಾರಕ್ಕೆ ಪ್ರತಿಕ್ರಿಯೆ ನೀಡಿ, ನಾವು ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದೇವು. ನಾವು ಮೆಮೋರೆಂಡಮ್ ಕೊಟ್ಟು 7 ತಿಂಗಳುಯಾಯ್ತು. ವರದಿ ಕೊಟ್ಟ ಒಂದು ತಿಂಗಳೊಳಗೆ ಪರಿಹಾರ ಕೊಡಬೇಕಿದೆ. ಅಕ್ಟೋಬರ್ ಕೊನೆ ವಾರದಲ್ಲಿ ವರದಿ ಕೊಟ್ಟಿದ್ದೇವೆ. ರಾಜ್ಯದ ನಮ್ಮ ಖಜಾನೆಯಿಂದ ರೈತರಿಗೆ ಎರಡು ಸಾವಿರ ಪರಿಹಾರ ಕೊಟ್ಟಿದ್ದೇವೆ. ಕುಡಿಯುವ ನೀರಿಗೆ ತೊಂದರೆ ಆಗದಂತೆ ನೋಡಿಕೊಳ್ಳುತ್ತಿದ್ದೇವೆ ಎಂದರು.

ಖಾಲಿ ಚೊಂಬು ಕೊಟ್ಟಿದ್ದಾರೆ: ಪ್ರಧಾನಮಂತ್ರಿ ಆಗಿ ಇಷ್ಟು ಕೆಳಮಟ್ಟಕ್ಕೆ ಮಾತನಾಡಬಾರದಿತ್ತು. ಅವರ ಸ್ಥಾನಕ್ಕೆ ಅಗೌರವ ತೋರುವ ರೀತಿ ಮಾತನಾಡಿದ್ದಾರೆ. ಎಲ್ಲಾ ಸಮುದಾಯಕ್ಕೆ ಅವರು ಪ್ರಧಾನಮಂತ್ರಿ. ಸಮಾನವಾಗಿ ಆಸ್ತಿ ಹಂಚಿಕೆ ಆಗಬೇಕು. ಅಧಿಕಾರ ಸಂಪತ್ತು‌ ಸಮಾನ ಹಂಚಿಕೆ ಆಗಬೇಕು. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಈ ದೇಶದಲ್ಲಿ ಅಧಿಕಾರ ಹಂಚಿಕೆ ಆಗಬೇಕು. ಒಬ್ಬರ ಕೈಯಲ್ಲಿ ಸಂಪತ್ತು ಇರಬಾರದು. ನಿಮ್ಮ ಕೈಗೆ ಏನು ಕೊಟ್ಟರು ಅಂದರೆ ಖಾಲಿ ಚೊಂಬು‌ ಅಂತಾರೆ ಎಂದು ಹಳ್ಳಿಯಲ್ಲಿ ಗಾದೆ ಇದೆ.