ಬೆಳಗಾವಿ ಸುವರ್ಣಸೌಧ ಡಿ.09 : ರಾಜ್ಯದ ಯಾವುದೇ ಆಸ್ಪತ್ರೆಗಳಲ್ಲಿ ಅಗತ್ಯ ಔಷಧಗಳ ಕೊರತೆ ಇಲ್ಲ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡೂರಾವ್ ಹೇಳಿದರು.
ಅವರು ವಿಧಾನ ಪರಿಷತ್‌ನಲ್ಲಿ ಸದಸ್ಯ ಹೆಚ್.ಎಸ್. ಗೋಪಿನಾಥ್ ಅವರ ಚುಕ್ಕೆ ಗುರುತಿನ ಪ್ರಶ್ನೆಗೆ ಉತ್ತರಿಸಿದರು.
ಕರ್ನಾಟಕ ರಾಜ್ಯದ ಸರ್ಕಾರಿ ಆರೋಗ್ಯ ಸಂಸ್ಥೆಗಳಿಗೆ ಅವಶ್ಯವಿರುವ ಹಾಗೂ State Therapeutic Committee ಯಲ್ಲಿ ನಿರ್ಧರಿಸಿ ಅನುಮೋದಿಸಿದ ಔಷಧಿಗಳ ವಾರ್ಷಿಕ ಬೇಡಿಕೆ ಪಟ್ಟಿಯನ್ನು E-AUSHADA ತಂತ್ರಾಂಶದ ಮುಖಾಂತರ ಕರ್ನಾಟಕ ರಾಜ್ಯ ವೈದಕೀಯ ಸರಬರಾಜು ನಿಗಮ ನಿಯಮಿತ (KSMSCL) ಸಲ್ಲಿಸಲಾಗುತ್ತಿದೆ. KSMSCL ಸಂಸ್ಥೆಯಿಂದ ಕೆ.ಟಿ.ಪಿ.ಪಿ ನಿಯಮಾನುಸಾರ ಟೆಂಡರ್ ಮುಖಾಂತರ ಔಷಧಿಗಳನ್ನು ಸಂಗ್ರಹಿಸಿ ಜಿಲ್ಲಾವಾರು KSMSCL, ಉಗ್ರಾಣಗಳಿಗೆ ಸರಬರಾಜು ಮಾಡಲಾಗುತ್ತಿದೆ ಎಂದರು.
ಜಿಲ್ಲಾ KSMSCL ಔಷಧ ಉಗ್ರಾಣಗಳಿಂದ ಆರೋಗ ಸಂಸ್ಥೆವಾರು ಬೇಡಿಕೆಯನ್ನಯ ಕೊರತೆಯಾಗದಂತೆ ಔಷಧಿಗಳನ್ನು ಸರಬರಾಜು ಮಾಡಲಾಗುತ್ತಿದೆ ಎಂದು ತಿಳಿಸಿದರು.
KSMSCL ಸಂಸ್ಥೆಯ ಜಿಲ್ಲಾ ಔಷಧ ಉಗ್ರಾಣಗಳಲ್ಲಿ ಲಭವಿರುವ ಔಷಧಿಗಳ ಪಟ್ಟಿಯನ್ನು ಎಲ್ಲಾ ಜಿಲ್ಲೆಗಳಿಗೆ ಹಂಚಿಕೆ ಮಾಡಲಾಗಿರುತ್ತದೆ. ಸಾರ್ವಜನಿಕ ಆರೋಗ ಸಂಸ್ಥೆಗಳು ತಮಗೆ ಅವಶ್ಯವಿರುವ ಔಷಧಿಗಳನ್ನು ಜಿಲ್ಲಾವಾರು KSMSCL ಔಷಧ ಉಗ್ರಾಣಗಳಿಗೆ ಬೇಡಿಕೆ ಸಲ್ಲಿಸಿ ಪಡೆಯಲಾಗುತ್ತಿದೆ ಎಂದರು.
2023-24 ನೇ ಸಾಲಿನ ವಿವಿಧ ಹಂತದ ಆರೋಗ್ಯ ಸಂಸ್ಥೆಗಳು ಬೇಡಿಕೆಯ 732 ಔಷಧಿಗಳನ್ನು ಸರಬರಾಜು ಮಾಡಲು ಟೆಂಡರ್‌ಗಳನ್ನು KSMSCL ವತಿಯಿಂದ ಆಹ್ವಾನಿಸಲಾಗಿರುತ್ತದೆ ಹಾಗೂ ಟೆಂಡರ್ ಪ್ರಕ್ರಿಯೆ ಅಂತಮಗೊಳಿಸಿ ಈಗಾಗಲೇ 475 ಔಷಧಗಳ ಸರಬರಾಜಿಗಾಗಿ ಖರೀದಿ ಆದೇಶ ನೀಡಲಾಗಿದ್ದು, 01 ಔಷಧಗಳ ಸರಬರಾಜಿಗಾಗಿ Notification of Award ಗಳನ್ನು ನೀಡಲಾಗಿರುತ್ತದೆ.
ಶೂನ್ಯ ಬಿಡ್ ಹಾಗೂ ಬಿಡ್ ಯಶಸ್ವಿಯಾಗದ 256 ಔಷಧಗಳಿಗೆ ಮೆರು ಟೆಂಡರ್ ಆಹ್ವಾನಿಸಿ ಸರಬರಾಜು ಮಾಡುವ ಪ್ರಕ್ರಿಯೆ ಚಾಲ್ತಿಯಲ್ಲಿರುತ್ತದೆ. ಖರೀದಿ ಆದೇಶ ನೀಡಲಾಗಿರುವ 475 ಮತ್ತು NOA ನೀಡಲಾಗಿರುವ 1 ಔಷಧಗಳ ಮಾಹಿತಿ ಹಾಗೂ ಖರೀದಿ ಪ್ರಕ್ರಿಯೆಯಲ್ಲಿರುವ 256 ಔಷಧಗಳ ಮಾಹಿತಿಯು KSMSCL Health & Family Welfare ನ ಜಾಲತಾಣದಲ್ಲಿ ಲಭ್ಯವಿರುತ್ತದೆ.
ಖರೀದಿ ಪ್ರಕ್ರಿಯೆ ಪೂರ್ಣಗೊಳ್ಳದ ಔಷಧಗಳನ್ನು ಸೂಕ್ತ ಪ್ರಾಧಿಕಾರದ ಅನುಮೋದನೆಯೊಂದಿಗೆ ಸ್ಥಳೀಯವಾಗಿ ರಾಷ್ಟ್ರೀಯ ಉಚಿತ ಔಷಧಿ ಸೇವೆಗಳ ಕಾರ್ಯಕ್ರಮದ ಅಡಿಯಲ್ಲಿ ಲಭ್ಯವಿರುವ ಅನುದಾನ, ಆಯುಷ್ಮಾನ್ ಭಾರತ್ ಆರೋಗ್ಯ ಕರ್ನಾಟಕ (ABARK) ಅನುದಾನ, ಆರೋಗ್ಯ ರಕ್ಷ ಸಮಿತಿ (ARS) ಹಾಗೂ ಇತರೆ ಅನುದಾನದಲ್ಲಿ ನಿಯಮಾನುಸಾರ ಆರೋಗ್ಯ ಸಂಸ್ಥೆಗಳಿಗೆ ಸ್ಥಳೀಯವಾಗಿ ಖರೀದಿಸಲು ಆರೋಗ್ಯ ಇಲಾಖೆಯಲ್ಲಿ ಅವಕಾಶವಿರುತ್ತದೆ ಎಂದರು.