ನವದೆಹಲಿ: ”ದೇಶದ ಯುವಕರೇ, ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಬಂದ ಮೇಲೆ ಯುವಕರಿಗೆ ಉದ್ಯೋಗಗಳ ಬಾಗಿಲು ಮುಚ್ಚಿವೆ.ಖಾಲಿ ಹುದ್ದೆಗಳನ್ನು ಭರ್ತಿ ಮಾಡದಿರುವ’ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ವಿರುದ್ಧ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಸೋಮವಾರ ವಾಗ್ದಾಳಿ ನಡೆಸಿದ್ದು, ಯುವಕರಿಗೆ ಮುಚ್ಚಿರುವ ಉದ್ಯೋಗಗಳ ಬಾಗಿಲು ತೆರೆಯುವುದು ಇಂಡಿಯಾ ಮೈತ್ರಿಕೂಟದ ಬಣದ ಸಂಕಲ್ಪವಾಗಿದೆ ಎಂದು ಪ್ರತಿಪಾದಿಸಿದ್ದಾರೆ.ಮೋದಿಯವರ ರಾಮರಾಜ್ಯದಲ್ಲಿ ದಲಿತರು, ಹಿಂದುಳಿದವರಿಗೆ ಉದ್ಯೋಗ ಸಿಗುವುದಿಲ್ಲ 10 ಲಕ್ಷ ಖಾಲಿ ಹುದ್ದೆಗಳಿರುವ ಸರ್ಕಾರ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಲು ಸಾಧ್ಯವಾಗುವುದಿಲ್ಲ’ : ಎನ್ ರಮೇಶ್
ಈ ಕುರಿತು ಎಕ್ಸ್‌ನಲ್ಲಿ ಹಿಂದಿಯಲ್ಲಿ ಪೋಸ್ಟ್ ಮಾಡಿರುವ ಅವರು, ‘ದೇಶದ ಯುವಕರೇ, ಒಂದು ವಿಷಯವನ್ನು ಗಮನಿಸಿ! ನರೇಂದ್ರ ಮೋದಿಯವರ ಉದ್ದೇಶ ಉದ್ಯೋಗ ನೀಡುವುದಲ್ಲ. ಹೊಸ ಹುದ್ದೆಗಳನ್ನು ಸೃಷ್ಟಿಸುವುದರಿಂದ ದೂರ ಉಳಿದಿರುವ ಅವರು, ಕೇಂದ್ರ ಸರ್ಕಾರದ ಖಾಲಿ ಹುದ್ದೆಗಳ ಮೇಲೂ ಕುಳಿತಿದ್ದಾರೆ’ ಎಂದು ಆರೋಪಿಸಿದ್ದಾರೆ.
‘ಕೇಂದ್ರ ಸರ್ಕಾರ ಸಂಸತ್ತಿನಲ್ಲಿ ಮಂಡಿಸಿದ ಅಂಕಿಅಂಶಗಳನ್ನು ಪರಿಗಣಿಸಿದರೆ, 78 ಇಲಾಖೆಗಳಲ್ಲಿ 9,64,000 ಹುದ್ದೆಗಳು ಖಾಲಿ ಇವೆ. ನಾವು ಪ್ರಮುಖ ಇಲಾಖೆಗಳನ್ನು ಮಾತ್ರ ನೋಡಿದರೆ, ರೈಲ್ವೆಯಲ್ಲಿ 2.93 ಲಕ್ಷ, ಗೃಹ ಸಚಿವಾಲಯದಲ್ಲಿ 1.43 ಲಕ್ಷ ಮತ್ತು ರಕ್ಷಣಾ ಸಚಿವಾಲಯದಲ್ಲಿ 2.64 ಲಕ್ಷ ಹುದ್ದೆಗಳು ಖಾಲಿ ಇವೆ’ ಎಂದು ರಾಹುಲ್ ಗಾಂಧಿ ತಿಳಿಸಿದ್ದಾರೆ.
15 ಪ್ರಮುಖ ಇಲಾಖೆಗಳಲ್ಲಿ ಶೇ 30ಕ್ಕಿಂತ ಹೆಚ್ಚು ಹುದ್ದೆಗಳು ಏಕೆ ಖಾಲಿ ಇವೆ ಎಂಬುದಕ್ಕೆ ಕೇಂದ್ರ ಸರ್ಕಾರದ ಬಳಿ ಉತ್ತರವಿದೆಯೇ. ‘ಸುಳ್ಳು ಭರವಸೆಗಳ ಚೀಲ’ವನ್ನು ಹೊತ್ತಿರುವ ಪ್ರಧಾನಿಯವರ ಕಚೇರಿಯಲ್ಲಿ ಹೆಚ್ಚಿನ ಸಂಖ್ಯೆಯ ಪ್ರಮುಖ ಹುದ್ದೆಗಳು ಏಕೆ ಖಾಲಿಯಾಗಿವೆ? ಎಂದು ಪ್ರಶ್ನಿಸಿದ್ದಾರೆ
ಮೋದಿಯವರ ರಾಮರಾಜ್ಯದಲ್ಲಿ ದಲಿತರು, ಹಿಂದುಳಿದವರಿಗೆ ಉದ್ಯೋಗ ಸಿಗುವುದಿಲ್ಲ: ರಾಹುಲ್ ಗಾಂಧಿ
ಕಾಯಂ ಉದ್ಯೋಗ ನೀಡುವುದನ್ನು ಹೊರೆ ಎಂದು ಪರಿಗಣಿಸಿರುವ ಬಿಜೆಪಿ ಸರ್ಕಾರ ಗುತ್ತಿಗೆ ಪದ್ಧತಿಗೆ ನಿರಂತರವಾಗಿ ಉತ್ತೇಜನ ನೀಡುತ್ತಿದ್ದು, ಅಲ್ಲಿ ಭದ್ರತೆ, ಗೌರವ ಇಲ್ಲದಂತಾಗಿದೆ ಎಂದು ಆರೋಪಿಸಿದರು.
ಖಾಲಿ ಇರುವ ಹುದ್ದೆಗಳು ದೇಶದ ಯುವಕರ ಹಕ್ಕಾಗಿದ್ದು, ಅವುಗಳನ್ನು ಭರ್ತಿ ಮಾಡಲು ಸಮಗ್ರ ಯೋಜನೆ ಸಿದ್ಧಪಡಿಸಿದ್ದೇವೆ. ನಾವು ಯುವಕರಿಗೆ ಮುಚ್ಚಿರುವ ಉದ್ಯೋಗದ ಬಾಗಿಲುಗಳನ್ನು ತೆರೆಯುವುದೇ ಇಂಡಿಯಾ ಮೈತ್ರಿಕೂಟದ ಸಂಕಲ್ಪವಾಗಿದೆ. ಯುವಕರ ಭವಿಷ್ಯ ನಿರುದ್ಯೋಗದ ಕತ್ತಲನ್ನು ಭೇದಿಸಿ ಸೂರ್ಯೋದಯವನ್ನು ಕಾಣಲಿದೆ ಎಂದರು.
ರಾಹುಲ್ ಗಾಂಧಿಯವರ ಪೋಸ್ಟ್ ಅನ್ನು ಟ್ಯಾಗ್ ಮಾಡಿದ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್, ಖಾಲಿ ಇರುವ ಪ್ರತಿಯೊಂದು ಸರ್ಕಾರಿ ಕೆಲಸವು ವಿದ್ಯಾವಂತ, ಉದ್ಯೋಗಾಕಾಂಕ್ಷಿ ಯುವಕರಿಗೆ ಆಗಿರುವ ಅನ್ಯಾಯ ಮಾತ್ರವಲ್ಲ, ಆದರೆ ಮೋದಿ ಸರ್ಕಾರದ ‘ವೈಫಲ್ಯ’ ಎಂದು ಹೇಳಿದ್ದಾರೆ.
ಕಾಂಗ್ರೆಸ್ ಮಿತ್ರಕೂಟ ಅಧಿಕಾರಕ್ಕೆ ಬಂದರೆ ‘MSP ಗ್ಯಾರಂಟಿ’: ಭಾರತ್ ಜೋಡೋ ನ್ಯಾಯ್ ಯಾತ್ರೆಯಲ್ಲಿ ರಾಹುಲ್ ಗಾಂಧಿ ಘೋಷಣೆ. 10 ಲಕ್ಷ ಖಾಲಿ ಹುದ್ದೆಗಳಿರುವ ಸರ್ಕಾರ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಲು ಸಾಧ್ಯವಾಗುವುದಿಲ್ಲ’ ಎಂದು ರಮೇಶ್ ಹೇಳಿದರು.