ಬೆಳಗಾವಿ: ಶಿಕ್ಷಕ ಮನೆಯಲ್ಲಿರುವ ಲಕ್ಷಾಂತರ ಮೌಲ್ಯದ ಚಿನ್ನಾಭರಣ ದೋಚಿ ಪರಾರಿಯಾಗಿರುವ ಘಟನೆ ನಿಪ್ಪಾಣಿ ಢೋಣೆವಾಡಿ ಗ್ರಾಮದಲ್ಲಿ ನಡೆದಿದೆ.
ಢೊಣೆವಾಡಿ ಗ್ರಾಮದ ಸುರೇಶ ಪಾಟೀಲ ಅವರು ಮಹಾರಾಷ್ಟ್ರದ ಗಗನ ಭಾವಡಾ ತಾಲೂಕಿನ ಅಸಲಜ ಗ್ರಾಮದಲ್ಲಿ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಲಕ್ಷ್ಮೀದೇವಿಯ ಗ್ರಾಮಕ್ಕೆ ಹೋಗಿದ್ದಾರೆ. ಮನೆಯಲ್ಲಿ ಯಾರು ಇಲ್ಲದಿರುವುದನ್ನು ಗಮಿಸಿದ ಖದೀಮರು ಮನೆಯ ಬೀಗ ಮುರಿದು ಒಳನುಗ್ಗಿದ ಕಳ್ಳರು ರಾತ್ರಿ ಒಂದು ಲಕ್ಷ ರೂ. ಮೌಲ್ಯದ 14 ಗ್ರಾಂ ಚಿನ್ನಾಭರಣ, ಅಡುಗೆ ಅನಿಲ ಸಿಲಿಂಡರ್, ಕೂಲರ್, ಎರಡು ಫ್ಯಾನ್, ತಾಮ್ರದ ಕೊಡಗಳನ್ನು ದೋಚಿ ಪರಾರಿಯಾಗಿದ್ದಾರೆ.
ಸದಲಗಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.