ಬೆಳಗಾವಿ: 12 ವರ್ಷಗಳ ಹಿಂದೆ ತಿಗಡೊಳ್ಳಿ ಗ್ರಾಪಂ ಅಧ್ಯಕ್ಷೆ ದಂಪತಿಯನ್ನು ಮಾರಕಾಸ್ತ್ರಗಳಿಂದ ಬರ್ಬರವಾಗಿ ಕೊಲೆಗೈದ ಪ್ರಕರಣಕ್ಕೆ ಸಂಬಂದಿಸಿದಂತೆ 16 ಅಪರಾಧಿಗಳಿಗೆ ಜೀವಾವದಿ ಶಿಕ್ಷೆ, 8 ಲಕ್ಷ ರೂ. ದಂಡ ವಿಧಿಸಿ ನ್ಯಾಯಾಲಯ ತೀರ್ಪು ಪ್ರಕಟಿಸಿದೆ.
ತಿಗಡೊಳ್ಳಿ ಗ್ರಾಮದ ನಿವಾಸಿಗಳಾದ ರುಜು ಕ್ಯಾತನವರ, ಬಸಪ್ಪ ಶಿರಗಾಪುರ, ದುಂಡಪ್ಪ ಪಾರೀಶವಾಡ, ಬಾಳು ಮುಚ್ಚಂಡಿ, ಶಿವಲಿಂಗಯ್ಯ ಬಾನಿಮಠ, ಅಜಿತ ಕ್ಯಾತನವರ, ಶಿವಾಜಿ ಸಂಭೋಜಿ, ತವನಪ್ಪ ಕಲಗೌಡರ, ಕಲ್ಲಪ್ಪ ಜಾಯಕ್ಕನವರ, ಸಾವಂತ ಕಿರಬನವರ, ಅನೀಲ ಬಸಪ್ಪ ಉಪರಿ, ದೀಪಕ ಹೊಸೂರಕರ, ಸಂತೋಷ ಮಡಿವಾಳರ, ಬಾಬು ಮಂಡೇದ, ಸಾತೂ ಶಿರಗಾಪುರ ಶಿಕ್ಷೆಗೆ ಒಳಗಾದವರು.
ಕೊಲೆ ಪ್ರಕರಣ ನ್ಯಾಯಾಲಯದಲ್ಲಿ 12 ವರ್ಷಗಳ ಕಾಲ ಸುದೀರ್ಘ ವಿಚಾರಣೆ ನಡೆಯಿತು. ಅಪರಾಧಿ ಸಾಭೀತಾದ ಬಳಿಕ ತೀರ್ಪು ನೀಡಲಾಗಿದೆ. ಶಿಕ್ಷೆ ಒಳಗಾದವರ ಪೈಕಿ ಬಾಳಪ್ಪ ಗೋದಳ್ಳಿ, ಬಸಪ್ಪ ಮುಗಳಿ ಹಾಗೂ ಪಾರೀಷ ರೆಂಟಿ ಅವರು ಸಾವಿಗೀಡಾಗಿದ್ದಾರೆ. ಕಿರಣ ಅಲಿಯಾಸ್ ವಿನಾಯಕ ಪರೀಟ ತಲೆಮರೆಸಿಕೊಂಡಿದ್ದಾನೆ ಎಂದು ಉಲ್ಲೇಖಿಸಲಾಗಿದೆ.
ಈ ಕುರಿತು ನಂದಗಢ ಪೊಲೀಸರು ಪ್ರಕರಣ ದಾಖಲಿಸಲಾಗಿತ್ತು.