ನವದೆಹಲಿ:ಮಾ.8. ಮಾರ್ಚ್ 6 ಗಡುವನ್ನು “ಉದ್ದೇಶಪೂರ್ವಕವಾಗಿ ಎಸ್ ಬಿಐ ಧಿಕ್ಕರಿಸಿದೆ ಎಂದು ಆರೋಪಿಸಿ, ರಾಜಕೀಯ ಪಕ್ಷಗಳು ನಗದೀಕರಿಸಿದ ಪ್ರತಿ ಚುನಾವಣಾ ಬಾಂಡ್‌ಗಳ ವಿವರ ನೀಡಲು ಜೂನ್ 30 ರವರೆಗೆ ಕಾಲಾವಕಾಶ ಕೋರಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ(ಎಸ್‌ಬಿಐ) ಸಲ್ಲಿಸಿದ ಅರ್ಜಿಯನ್ನು ಸುಪ್ರೀಂ ಕೋರ್ಟ್‌ನ ಐವರು ನ್ಯಾಯಾಧೀಶರ ಸಂವಿಧಾನ ಪೀಠ ಮಾರ್ಚ್ 11 ರಂದು ವಿಚಾರಣೆ ನಡೆಸಲಿದೆ.
ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ನೇತೃತ್ವದ ಪೀಠ, ರಾಜಕೀಯ ಪಕ್ಷಗಳಿಗೆ ನೀಡಿದ ಕೊಡುಗೆಗಳ ವಿವರಗಳನ್ನು ಸಲ್ಲಿಸಲು ಸುಪ್ರೀಂ ಕೋರ್ಟ್ ನೀಡಿದ ಮಾರ್ಚ್ 6 ಗಡುವನ್ನು “ಉದ್ದೇಶಪೂರ್ವಕವಾಗಿ ಎಸ್ ಬಿಐ ಧಿಕ್ಕರಿಸಿದೆ ಎಂದು ಆರೋಪಿಸಿ, ಬ್ಯಾಂಕ್ ವಿರುದ್ಧ ನ್ಯಾಯಾಂಗ ನಿಂದನೆ ಕ್ರಮ ಆರಂಭಿಸುವಂತೆ ಕೋರಿದ ಪ್ರತ್ಯೇಕ ಮನವಿಯನ್ನು ಸಹ ಸೋಮವಾರ ಆಲಿಸಲಿದೆ.
ಫೆಬ್ರವರಿ 15 ರಂದು ನೀಡಿದ ಮಹತ್ವದ ತೀರ್ಪಿನಲ್ಲಿ, ಐವರು ನ್ಯಾಯಾಧೀಶರ ಸಂವಿಧಾನ ಪೀಠ, ಕೇಂದ್ರದ ಚುನಾವಣಾ ಬಾಂಡ್ ಯೋಜನೆಯನ್ನು ರದ್ದುಗೊಳಿಸಿತ್ತು ಮತ್ತು ಇದು “ಅಸಂವಿಧಾನಿಕ” ಎಂದು ಹೇಳಿತ್ತು. ರಾಜಕೀಯ ಪಕ್ಷಗಳು ನಗದಾಗಿ ಪರಿವರ್ತಿಸಿಕೊಂಡ ಪ್ರತಿಯೊಂದು ಚುನಾವಣಾ ಬಾಂಡ್ ಗಳ ಕುರಿತು ನಗದಿನ ದಿನಾಂಕ, ಮುಖಬೆಲೆ ಸೇರಿದಂತೆ ಪ್ರತಿಯೊಂದು ಮಾಹಿತಿಯನ್ನು ಎಸ್ ಬಿಐ ಬಹಿರಂಗಗಿಳಿಸಬೇಕು ಎಂದು ಸುಪ್ರೀಂ ಕೋರ್ಟ್ ಆದೇಶಿಸಿದೆ.