ಕರ್ನಾಟಕದ ಎಲ್ಲವೂ ಗುಜರಾತ ಮಾದರಿ ರಾಜ್ಯದಲ್ಲಿ ಕಲಿಗಳ ಹುಡುಕಾಟದಲ್ಲಿ ಕಮಲ ಪಡೆ
ಬಿಜೆಪಿ ಆತಂರಿಕ ಸಮೀಕ್ಷೆ ಹಾಲಿ 16 ಶಾಸಕರಿಗೆ ಟಿಕೆಟ್ ಬುಡಮೇಲುಸಾಧ್ಯತೆ
ಆ ಕ್ಷೇತ್ರಗಳಲ್ಲಿ ವೈಯುಕ್ತಿಕ ವರ್ಚಸ್ಸಿನ ಕುಸಿತ, ಆಡಳಿತ ವಿರೋಧಿ ಅಲೆ
ಹಾಲಿ ಶಾಸಕರಿಗೆ ಗೇಟ್ ಪಾಸ್ ಸಾಧ್ಯತೆ
ಈಗಾಗಲೇ 20ಕ್ಕೂ ಹೆಚ್ಚು ಕ್ಷೇತ್ರಗಳ ವರದಿಯನ್ನ ಪಡೆದಿರುವ ಬಿಜೆಪಿ ಹೈಕಮಾಂಡ್, ಏನ್ ಮಾಡುತ್ತೆ ಅನ್ನೋ ಆತಂಕ ಶಾಸಕರಲ್ಲಿದೆ.
ಬೆಳಗಾವಿ: ಚುನಾವಣೆ ಅಖಾಡಕ್ಕೆ ಇಳಿಯಲಿರುವ ಬಿಜೆಪಿ ಹಾಲಿ 16 ಶಾಸಕರಿಗೆ ಬಿಜೆಪಿ ಹೈಕಮಾಂಡ್ ಶಾಕ್ ನೀಡುವುದು ದಟ್ಟವಾಗಿದೆ.
ಬಿಜೆಪಿ ಆತಂರಿಕ ಸಮೀಕ್ಷೆ ಪ್ರಕಾರ 30 ಶಾಸಕರ ಪೈಕಿ 16 ಶಾಸಕರಿಗೆ ಸ್ಥಿತಿ ನೀರಿನ ಮೇಲಿನ ದೋಣಿಯಂತೆ ಅಳಾಡುತ್ತಿದೆ. ಹೀಗಾಗಿ 16 ಹಾಲಿ ಬಿಜೆಪಿ ಶಾಸಕರಿಗೆ ಟಿಕೆಟ್ ಕೈ ತಪ್ಪುತ್ತಾ..?, ವರ್ಚಸ್ಸು, ವಯಸ್ಸು, ಆಡಳಿತ ವಿರೋಧಿ ಅಲೆಯೇ ಮಾನದಂಡ ಆಗುತ್ತಾ ಎಂಬ ಪ್ರಶ್ನೆಗಳು ಬಿಜೆಪಿಯಲ್ಲಿ ಬಿಸಿಬಿಸಿ ಚರ್ಚೆ ಯಾಗುತ್ತಿದೆ.
ಆ ಕ್ಷೇತ್ರಗಳಲ್ಲಿ ವೈಯುಕ್ತಿಕ ವರ್ಚಸ್ಸಿನ ಕುಸಿತ, ಆಡಳಿತ ವಿರೋಧಿ ಅಲೆ
16 ಜಿಲ್ಲೆಗಳಲ್ಲಿ ಬಿಜೆಪಿ ಹಾಲಿ ಶಾಸಕರಿಗೆ ಕೊಕ್ ಕೊಡುವ ಶಾರ್ಟ್ ಲಿಸ್ಟ್ ರೆಡಿ ಆಗ್ತಿದೆ ಎನ್ನಲಾಗಿದ್ದು, ಹೈಕಮಾಂಡ್ ಮುಂದಿರುವ ವರದಿ ಅಸಲಿಯತ್ತಿನ ಬಗ್ಗೆ ಕುತೂಹಲ ಮೂಡಿದೆ. ಚುನಾವಣೆಗೆ ಇನ್ನು ಮೂರೂವರೆ ತಿಂಗಳು ಬಾಕಿ ಇರುವಾಗಲೇ ಟಿಕೆಟ್ ಲೆಕ್ಕಚಾರ ಶುರುವಾಗಿದ್ದು, ಬಿಜೆಪಿ ಟಿಕೆಟ್ ನೀಡಿಕೆ ಮಾನದಂಡಗಳ ಬಗ್ಗೆ ಪಕ್ಷದ ವೇದಿಕೆಯಲ್ಲೇ ಚರ್ಚೆ ಆಗುತ್ತಿದೆ. ಗುಜರಾತ್ ಮಾಡೆಲ್, ಉತ್ತರ ಪ್ರದೇಶ ಮಾಡೆಲ್‍ಗಳ ಪ್ರಯೋಗದ ಬಗ್ಗೆ ಆತಂಕ ವ್ಯಕ್ತವಾಗ್ತಿದೆ. ಬರೋಬ್ಬರಿ 20ಕ್ಕೂ ಹೆಚ್ಚು ಶಾಸಕರಿಗೆ ಟಿಕೆಟ್ ಕೈ ತಪ್ಪು ಆತಂಕವಿದೆ ಎನ್ನಲಾಗಿದೆ.
ಹಾಲಿ ಶಾಸಕರಿಗೆ ಗೇಟ್ ಪಾಸ್ ಸಾಧ್ಯತೆ :
ನಾಲ್ಕು ಜಿಲ್ಲೆಗಳಲ್ಲಿ ತಲಾ ಇಬ್ಬರು ಹಾಲಿ ಶಾಸಕರಿಗೆ ಕೊಕ್ ಕೊಡುವ ಬಗ್ಗೆ ಚರ್ಚೆ ಆಗುತ್ತಿದ್ದರೆ, 12 ಜಿಲ್ಲೆಗಳಲ್ಲಿ ತಲಾ ಒಬ್ಬರು ಹಾಲಿ ಶಾಸಕರಿಗೆ ಕೊಕ್ ಕೊಡುವ ಬಗ್ಗೆಯೂ ಚರ್ಚೆ ನಡೆಯುತ್ತಿದೆ. ಆ ಕ್ಷೇತ್ರಗಳಲ್ಲಿ ವೈಯುಕ್ತಿಕ ವರ್ಚಸ್ಸಿನ ಕುಸಿತ, ಆಡಳಿತ ವಿರೋಧಿ ಅಲೆಯ ಬಗ್ಗೆ ಹೈಕಮಾಂಡ್ ವರದಿ ಪಡೆದಿದೆ ಎಂಬ ಮಾಹಿತಿ ಲಭ್ಯವಾಗಿದೆ.
ಈಗಾಗಲೇ 20ಕ್ಕೂ ಹೆಚ್ಚು ಕ್ಷೇತ್ರಗಳ ವರದಿಯನ್ನ ಪಡೆದಿರುವ ಬಿಜೆಪಿ ಹೈಕಮಾಂಡ್, ಏನ್ ಮಾಡುತ್ತೆ ಅನ್ನೋ ಆತಂಕ ಇದೆ. ಅಲ್ಲದೆ ವಯಸ್ಸಿನ ಕಾರಣದಿಂದಾಗಿ ಯಡಿಯೂರಪ್ಪ ಮಾಡೆಲ್ ಅನುಸರಿಸುವ ಬಗ್ಗೆಯೂ ಸುಳಿವು ಸಿಕ್ಕಿದೆ ಎನ್ನಲಾಗ್ತಿದೆ. ಒಟ್ಟಾರೆ ಮೂರು ಅಂಶಗಳ ಮಾನದಂಡಗಳನ್ನಿಟ್ಟುಕೊಂಡು ಕೆಲ ಹಾಲಿ ಶಾಸಕರಿಗೆ ಗೇಟ್ ಪಾಸ್ ಸಾಧ್ಯತೆ ಇದ್ದು, ಫೆಬ್ರವರಿ ಎರಡನೇ ವಾರದ ಬಳಿಕ ಬಿಜೆಪಿ ಹೈಕಮಾಂಡ್ ನಿರ್ಧಾರದ ಬಗ್ಗೆ ಸ್ಪಷ್ಟವಾದ ಸುಳಿವು ಸಿಗಲಿದೆ.