ನವದೆಹಲಿ:ಲಸಿಕೆ ಪಡೆದುಕೊಂಡಿರುವವರಲ್ಲಿ ಕೆಲವರು ತಮ್ಮ ಪ್ರಮಾಣ ಪತ್ರಗಳನ್ನು ಡೌನ್ಲೋಡ್ ಮಾಡಿ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ ಅದರಲ್ಲಿ ಪ್ರಧಾನಿ ಫೋಟೋ ಏಕೆ ಕಣ್ಮರೆಯಾಗಿದೆ ಎಂದು ಪ್ರಶ್ನಿಸಿದ್ದಾರೆ.ಕೊರೊನಾ ಲಸಿಕೆ ಪ್ರಮಾಣ ಪತ್ರದಲ್ಲಿದ್ದ ಪ್ರಧಾನಿ ನರೇಂದ್ರ ಮೋದಿ ಅವರ ಫೋಟೋವನ್ನು ನೀ ತೆಗೆದುಹಾಕಲಾಗಿದೆ. ಕೊವಿಶೀಲ್ಡ್ ಲಸಿಕೆ ಅಡ್ಡಪರಿಣಾಮಗಳ ವಿಚಾರ ಚರ್ಚೆಗೆ ಗ್ರಾಸವಾದ ಬೆನ್ನಲ್ಲೇ ಈ ಬೆಳವಣಿಗೆ ನಡೆದಿರುವುದು ಮಹತ್ವ ಪಡೆದಿದ್ದು, ಫೋಟೋ ತೆಗೆದಿರುವ ಬಗ್ಗೆ ಸರ್ಕಾರ ಗುರುವಾರ ಸ್ಪಷ್ಟನೆ ನೀಡಿದೆ.
ಇನ್ನೂ ಕೆಲವರು ಲಸಿಕೆಯಲ್ಲಿ ಅಡ್ಡಪರಿಣಾಮ ವರದಿಯಾಗುತ್ತಿದ್ದಂತೆಯೇ ಸರ್ಕಾರ ಇದರಿಂದ ನುಣುಚಿಕೊಳ್ಳಲು ಯತ್ನಿಸುತ್ತಿದೆ ಎಂದೂ ಆರೋಪಿಸಿದ್ದಾರೆ. ಆದರೆ, ಈ ಕುರಿತಂತೆ ಕೇಂದ್ರ ಆರೋಗ್ಯ ಸಚಿವಾಲಯ ಸ್ಪಷ್ಟನೆ ನೀಡಿದ್ದು, ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ನೀತಿ ಸಂಹಿತೆ ಜಾರಿಯಾಗಿರುವ ಕಾರಣಕ್ಕಾಗಿ ಫೋಟೋ ತೆಗದುಹಾಕಲಾಗಿದೆ.