This is the title of the web page
This is the title of the web page

ಮಕ್ಕಳಾಗಿರಲಿಲ್ಲ ಎಂಬ ಕೊರಗಿನಿಂದ ತಾಯಿ ಸಾವು: ಶವ ಪತ್ತೆ

ಮಕ್ಕಳಾಗಿರಲಿಲ್ಲ ಎಂಬ ಕೊರಗಿನಿಂದ ತಾಯಿ ಸಾವು: ಶವ ಪತ್ತೆ

 

ಬೆಳಗಾವಿ: ಹುಕ್ಕೇರಿ ತಾಲೂಕಿನ ಸೊಲ್ಲಾಪುರ ಗ್ರಾಮದ ಪಾಲು ಬಿದ್ದ ಬಾವಿಯಲ್ಲಿ ಶಂಕಾಸ್ಪದವಾಗಿ ಮಹಿಳೆ ಶವ ಪತ್ತೆಯಾಗಿದೆ.

ಸುಧಾ (28)ಮೃತ ಮಹಿಳೆ, ಮಕ್ಕಳಾಗಿರಲಿಲ್ಲ ಎಂಬ ಕೊರಗಿನಿಂದ ತಾಯಿ ಬಳಹಷ್ಟು ನೊಂದಿದ್ದಳು ಎನ್ನಲಾಗಿದೆ. ಈ ಹಿನ್ನಲೆಯಲ್ಲಿ ಸಾವಿನ ಹಾದಿ ಹಿಡಿದಿರಬಹುದು ಎಂದು ಅನುಮಾನ ವ್ಯಕ್ತವಾಗಿದೆ. ತನಿಖೆ ಬಳಿಕ ಮಹಿಳೆ ಸಾವಿನ ನಿಜಾಂಶ ಬಯಲು ಹೊರಬರಲಿದೆ. ಮೃತ ಸುಧಾ ಇವರಿಗೆ ಮದುವೆಯಾಗಿ 8 ವರ್ಷ ಕಳೆದರು ಮಕ್ಕಳು ಆಗಿರಲಿಲ್ಲ ಮಾಹಿತಿ ಇದೆ.
ಮಕ್ಕಳು ಆಗದ ಹಿನ್ನಲೆ ಮನೆಯಲ್ಲಿ ಜಗಳವಾಡಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತಪಡಿಸಲಾಗಿದೆ. ಸ್ಥಳಕ್ಕೆ ಸಂಕೇಶ್ವರ ಸಿಪಿಐ ಪ್ರಹ್ಲಾದ ಚೆನ್ನಗೇರಿ ಹಾಗೂ ಪೋಲಿಸ ಸಿಬ್ಬಂದಿಗಳು ಭೇಟಿ ಪರಿಶೀಲನೆ ನಡೆಸಿದ್ದಾರೆ.