ಬೀದರ್: ಅಕ್ರಮ ಸಂಬಂಧಕ್ಕೆ ಅಡ್ಡಿಯಾಗಿದ್ದ ಗಂಡನನ್ನೇ ಕೊಲೆಗೈದ ಮಹಿಳೆ ಮತ್ತಾಕೆ ಟೀಮ್ ಅರೆಸ್ಟ್ ಆಗಿದೆ. ಪತಿ ಅಮಿತ್ ಎಂಬಾತನನ್ನು ಪತ್ನಿ ಚೈತ್ರಾ ಮತ್ತಾಕೆ ಪ್ರಿಯಕರ ರವಿ ಪಾಟೀಲ್ ಎಂಬಾತ ಕೊಂದು ಹಾಕಿದ್ರು. ಈ ಕೇಸ್ ಸಂಬಂಧ ಇಬ್ಬರು ಅರೆಸ್ಟ್ ಆಗಿದ್ದು, ಈ ಬಗ್ಗೆ ಬೀದರ್ ಎಸ್ಪಿ ಚನ್ನಬಸವಣ್ಣ ಲಂಗೋಟಿ ಮಾತಾಡಿದ್ದಾರೆ.
ಅಮಿತ್ ಕೊಲೆ ಮಾಡಿರುವುದಾಗಿ ಚೈತ್ರಾ ಮತ್ತಾಕೆ ಪ್ರಿಯಕರ ರವಿ ಪಾಟೀಲ್ ಒಪ್ಪಿಕೊಂಡಿದ್ದಾರೆ. ಚೈತ್ರಾಗೆ ಪ್ರಿಯಕರ ರವಿ ಪಾಟೀಲ್ ಸ್ಕೂಟಿ ಮತ್ತು ಆಭರಣ ಕೊಡಿಸಿದ್ದ. ಈ ವಿಷಯ ಗೊತ್ತಾದ ಕೂಡಲೇ ಅಮಿತ್ ಚೈತ್ರಾಗೆ ಕಾಲ್ ಮಾಡಿ, ನಿನ್ನನ್ನ ಯಾವುದೇ ಕಾರಣಕ್ಕೂ ಬಿಡಲ್ಲ. ನಿನಗೆ ಸ್ಕೂಟಿ ಎಲ್ಲಿಂದ ಬಂತು? ಆಭರಣ ಕೊಡಿಸಿದ್ಯಾರು? ಯಾರೊಂದಿಗೆ ನಿನಗೆ ಸಂಬಂಧ ಇದೆ ಎಂದು ಜಗಳ ಆಡಿದ್ದ. ಇದಾದ ಮೇಲೆ ಚೈತ್ರಾ ತನ್ನ ಪ್ರಿಯಕರನ ಜತೆ ಸೇರಿ ಕೊಲೆ ಮಾಡಿದ್ದಾಳೆ ಎಂದಿದ್ದಾರೆ ಎಸ್ಪಿ ಚನ್ನಬಸವಣ್ಣ ಲಂಗೋಟಿ.
ಚೈತ್ರಾ ಹೇಳಿದ ಮೇಲೆ ಪ್ರಿಯಕರ ವೆಂಕಟ್ ಗಿರಿಮಾಜೆ, ಆಕಾಶ್, ಸಿಖಂದರ್ ಶಹಾಗೆ 2 ಲಕ್ಷ ನೀಡುವುದಾಗಿ ಹೇಳುತ್ತಾರೆ. ಬಳಿಕ ಮೊದಲ ಕಂತಿನಲ್ಲಿ 15 ಸಾವಿರ ಸುಪಾರಿ ನೀಡಿ ಕೊನೆಗೆ ಕೊಲೆ ಮಾಡಿದ್ದಾರೆ. ಎಲ್ಲಾ ರೀತಿಯ ಸಾಕ್ಷಿಗಳನ್ನು ಕಲೆ ಹಾಕಿ ನಾವು ಕೇಸ್ ಪತ್ತೆ ಮಾಡಿದ್ದೇವೆ. ಇಬ್ಬರು ಜೈಲಿನಲ್ಲೇ ಇದ್ದು, ತನಿಖೆ ಮಾಡಲಾಗುತ್ತದೆ ಎಂದರು.