ಬೆಂಗಳೂರು: ನಿಗಮ-ಮಂಡಳಿ ನೇಮಕಾತಿಗೆ ಕಡೆಗೂ ಮುಹೂರ್ತ ನಿಗದಿ ಆಗಿದೆ. ಕಾಂಗ್ರೆಸ್ ಹೈಕಮಾಂಡ್ ಒಪ್ಪಿಗೆ ಸೂಚಿಸಿರುವ ಹಿನ್ನೆಲೆಯಲ್ಲಿ ಅಧ್ಯಕ್ಷರ ಪಟ್ಟಿಯನ್ನು ಇಂದು ಸಂಜೆಯೊಳಗೆ ಪ್ರಕಟಿಸುವ ಸಾಧ್ಯತೆಯಿದೆ. ನಿಗಮ-ಮಂಡಳಿ ಹುದ್ದೆಗೆ 74 ಹೆಸರು ಅಂತಿಮಗೊಂಡಿದೆ.
37 ಶಾಸಕರು, 37 ಕಾರ್ಯಕರ್ತರ ಹೆಸರು ಈ ಪಟ್ಟಿಯಲ್ಲಿದೆ. ಇವತ್ತು ಸುಮಾರು 40 ರಿಂದ 46 ಮಂದಿಯ ಹೆಸರು ಪ್ರಕಟವಾಗುವ ಸಾಧ್ಯತೆ ಇದೆ. ಇಂದು ಬೆಳಗ್ಗೆ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅಂತಿಮ ಮುದ್ರೆ ಒತ್ತಿದ್ದಾರೆ.
ಸಿ. ಪುಟ್ಟರಂಗ ಶೆಟ್ಟಿ: ಎಂಎಸ್ಐಎಲ್, ನರೇಂದ್ರ ಸ್ವಾಮಿ: ಮಾಲಿನ್ಯ ನಿಯಂತ್ರಣ ಮಂಡಳಿ, ಶಿವಲಿಂಗೇಗೌಡ- ವಸತಿ, ರಮೇಶ್ ಬಂಡಿಸಿದ್ದೇಗೌಡ, ಎಸ್ ಎನ್ ನಾರಾಯಣಸ್ವಾಮಿ, ಬೇಳೂರು ಗೋಪಾಲಕೃಷ್ಣ- ಅರಣ್ಯ, ರಾಜಾ ವೆಂಕಟಪ್ಪ ನಾಯ್ಕ್, ಜೆಟಿ ಪಾಟೀಲ್, ಶ್ರೀನಿವಾಸ್ ಮಾನೆ, ದದ್ದಲ್- ವಾಲ್ಮೀಕಿ ಅಭಿವೃದ್ಧಿ, ಟಿ. ರಘುಮೂರ್ತಿ, ಹ್ಯಾರಿಸ್: ಬಿಡಿಎ ಇವರಿಗೆ ಅವಕಾಶ ಸಿಗುವ ಸಾಧ್ಯತೆಗಳಿವೆ.