This is the title of the web page
This is the title of the web page

ಜೋಯಿಡಾ ತಾಲೂಕಿನ ಕಳಸಾಯಿ ಗ್ರಾಮದಲ್ಲಿ ಶ್ರೀಶೈಲ ಜಗದ್ಗುರು ಮಹಾಸನ್ನಿಧಿಯವರ ಮೌನಾನುಷ್ಠಾನ ಆರಂಭ;* *ಆ.12 ರಂದು ಧರ್ಮಸಭೆಯೊಂದಿಗೆ ಮುಕ್ತಾಯ.*

ಜೋಯಿಡಾ ತಾಲೂಕಿನ ಕಳಸಾಯಿ ಗ್ರಾಮದಲ್ಲಿ ಶ್ರೀಶೈಲ ಜಗದ್ಗುರು ಮಹಾಸನ್ನಿಧಿಯವರ ಮೌನಾನುಷ್ಠಾನ ಆರಂಭ;* *ಆ.12 ರಂದು ಧರ್ಮಸಭೆಯೊಂದಿಗೆ ಮುಕ್ತಾಯ.*

 

ಧಾರವಾಡ, ಆ.05: ಉತ್ತರ ಕನ್ನಡ ಜಿಲ್ಲೆಯ ಜೋಯಿಡಾ ತಾಲೂಕಿನ ಕುಂಬಾರವಾಡ ಹತ್ತಿರದ ಕಳಸಾಯಿ ಗ್ರಾಮದಲ್ಲಿ ಇಂದಿನಿಂದ ( ಆ.05) ಶ್ರೀಶೈಲ ಪೀಠದ ಜಗದ್ಗುರು ಡಾ.ಚನ್ನಸಿದ್ದರಾಮ ಪಂಡಿತಾರಾದ್ಯ ಶಿವಾಚಾರ್ಯ ಭಗವತ್ಪಾದಂಗಳವರ ಇಷ್ಟಲಿಂಗ ಮಹಾಪೂಜೆ, ಮೌನಾನುಷ್ಠಾನ ಆರಂಭವಾಗಿದ್ದು, ಆಗಸ್ಟ್ 12 ರಂದು ಧರ್ಮಸಭೆಯೊಂದಿಗೆ ಕಾರ್ಯಕ್ರಮ ಮುಕ್ತಾಯವಾಗಲಿದೆ.

ಮಹಾಸನ್ನಿಧಿಯವರ ಇಷ್ಟಲಿಂಗ ಮಹಾಪೂಜೆ ಪ್ರತಿದಿನ ಬೆಳಿಗ್ಗೆ 7 ಗಂಟೆಗೆ ಆರಂಭವಾಗುತ್ತದೆ. ಭಕ್ತರು ಸಹ ಈ ಮಾಹಾಪೂಜೆಯಲ್ಲಿ ಭಾಗವಹಿಸಬಹುದು. ಮತ್ತು ಪ್ರತಿದಿನ ಸಂಯಕಾಲ 4 ರಿಂದ 5 ಗಂಟೆಯವರೆಗೆ ಜಗದ್ಗುರು ಮಹಾಸನ್ನಿಧಿಯವರು ಆಶ್ರಮಕ್ಕೆ ಆಗಮಿಸುವ ಭಕ್ತರಿಗೆ ದರ್ಶನ, ಆಶಿರ್ವಾದ ನೀಡುತ್ತಾರೆ.

ಆಗಸ್ಟ್ 12 ರಂದು ಬೆಳಿಗ್ಗೆ 7 ಗಂಟೆಗೆ ಇಷ್ಟಲಿಂಗ ಮಹಾಪೂಜೆ ಹಾಗೂ ಬೆಳಿಗ್ಗೆ 11 ಗಂಟೆಗೆ ಧರ್ಮಸಭೆ ಜರುಗಲಿದ್ದು, ನಂತರ ಮಹಾಸನ್ನಿಧಿಯವರ ಮೌನಾನುಷ್ಠಾನ ಮುಕ್ತಾಯಗೊಳ್ಳಲಿದೆ.

ಈ ಅಧಿಕ ಶ್ರಾವಣ ಮಾಸವು 19 ವರ್ಷಗಳ ನಂತರ ಬಂದಿದ್ದು, ಈ ಸಮಯದಲ್ಲಿ ಜಪ, ಪೂಜೆ, ಅಭಿಷೇಕ, ಪಾರಾಯಣ, ಪುರಾಣ, ಪ್ರವಚನ ಕಾರ್ಯಕ್ರಮದಲ್ಲಿ ಭಾಗಿ ಆಗುವದರಿಂದ ಶ್ರೇಷ್ಠ ಫಲ ದೊರಕುತ್ತದೆ. ನಾಡಿನ ಸಮೃದ್ಧಿ ಮತ್ತು ಭಕ್ತರ ಸುಮಂಗಲಕ್ಕಾಗಿ ನಿಸರ್ಗರಮಣೀಯ ತಪೋಭೂಮಿಯಲ್ಲಿ ಜಗದ್ಗುರು ಮಹಾಸನ್ನಿಧಿಯವರು ಮೌನಾನುಷ್ಠಾನ ಕೈಗೊಂಡಿದ್ದಾರೆ.
ಭಕ್ತರು ಭಾಗವಹಿಸಿ, ಜಗದ್ಗುರುಗಳ ಕೃಪಾಶಿರ್ವಾದ ಪಡೆದುಕೊಳ್ಳಬೇಕು.
*ಕಳಸಾಯಿ ತಲುಪುವುದು:*
ಕಳಸಾಯಿ ಗ್ರಾಮ ಉಳವಿ ರಸ್ತೆಯಲ್ಲಿದ್ದು, ದಾಂಡೇಲಿ, ಜೋಯಿಡಾ, ಕುಂಬಾರವಾಡ, ಪಂದರ ಗ್ರಾಮ ಮಾರ್ಗವಾಗಿ ಹೋಗಬೇಕು. ಕಳಸಾಯಿ ಗ್ರಾಮವು ದಾಂಡೇಲಿಯಿಂದ ಸುಮಾರು 40 ಕೀ.ಮಿ ದೂರದಲ್ಲಿದೆ. ಕಳಸಾಯಿ ಇಂದ ಉಳವಿ 20 ಕೀ.ಮೀಟರ್ ಇದೆ. ಕಳಸಾಯಿ ಗ್ರಾಮಕ್ಕೆ ಸಾರಿಗೆ ಸೌಕರ್ಯ ಬೆಳಿಗ್ಗೆ, ಮಧ್ಯಾಹ್ನ ಮತ್ತು ಸಂಜೆ ವೇಳೆ ಮಾತ್ರ ಸೀಮಿತ ಅವಧಿಗೆ ಇದ್ದು, ಸ್ವಂತ ವಾಹನದಲ್ಲಿ ಹೋಗವುದು ಉತ್ತಮ. ಸರಕಾರಿ ಬಸ್ ಸೌಕರ್ಯದ ಕುರಿತು ರಾಜ್ಯ ಸಾರಿಗೆಯ ದಾಂಡೇಲಿ ಡಿಪೋ ಮ್ಯಾನೇಜರ್ ರಾಠೋಡ್ – 7760991731 ಹಾಗೂ ಜೋಯಿಡಾ ಡಿಪೋ ಮ್ಯಾನೇಜರ್ ಪೂಜಾರ – 9164610356 ಗೆ ಸಂಪರ್ಕಿಸಬಹುದು ಎಂದು ಧಾರವಾಡ ವೀರಶೈವ ಜಂಗಮ ಸಂಸ್ಥೆಯ ಅಧ್ಯಕ್ಷರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.