ತಂದೆಯೊಂದಿಗೆ ಬೆಳಗಾವಿಗೆ ಬಂದಿದ್ದ ಮಗ ನಾಪತ್ತೆ: ಮಗನಿಗಾಗಿ ಠಾಣೆ ಮೇಟ್ಟಿಲೇರಿದ ತಂದೆ

ತಂದೆಯೊಂದಿಗೆ ಬೆಳಗಾವಿಗೆ ಬಂದಿದ್ದ ಮಗ ನಾಪತ್ತೆ: ಮಗನಿಗಾಗಿ ಠಾಣೆ ಮೇಟ್ಟಿಲೇರಿದ ತಂದೆ

 

ಬೆಳಗಾವಿ: ತಂದೆಯೊಂದಿಗೆ ಜತೆಗೆ ಬೆಳಗಾವಿಗೆ ಬಂದಿದ್ದ ವಿಶೇಷಚೇತನ ಯುವಕನೋರ್ವ ಕೇಂದ್ರಿಯ ಬಸ್‌ ನಿಲ್ದಾಣದಿಂದ ನಾಪತ್ತೆಯಾಗಿರುವ ಘಟನೆ ನಿನ್ನೆ ಸಾಯಕಾಂಲ ನಡೆದಿದೆ.

ಮಗನಿಗಾಗಿ ತಂದೆ ನಿನ್ನೆ ಈಡೀ ರಾತ್ರಿ ಬೆಳಗಾವಿ ನಗರ ಅಲೆದಾಡಿ, ಪೊಲೀಸ್‌ ಠಾಣೆ ಮೇಟ್ಟಿಲೇರಿದ್ದಾರೆ.

ಹುಕ್ಕೇರಿ ತಾಲೂಕಿನ ಬೊರಗಲ್ಲ ಗ್ರಾಮದ ನಿಖಿಲ್‌ ರಾಜಕುಮಾರ ಮಗದುಮ್ಮ (23) ನಾಪತ್ತೆಯಾದ ಯುವಕ. ತಂದೆಯೊಂದಿಗೆ ನಿಖಿಲ್‌ ಮಂಗಳವಾರ ಸಂಬಂಧಿಕರ ಮನೆಗೆ ಬಂದಿದ್ದ, ಸಂಜೆ ‌ವೇಳೆಗೆ ಊರಿಗೆ ತೆರಳಲೇಂದು ಕೇಂದ್ರಿಯ ಬಸ್ ನಿಲ್ದಾಣಕ್ಕೆ ಆಗಮಿಸಿದ್ದಾರೆ. ತಂದೆ ರಾಜಕುಮಾರ, ಮಗನನ್ನುಬಸ್‌ ನಿಲ್ದಾಣದಲ್ಲಿ ಕುಳಿತುಕೊಳ್ಳಲು ಹೇಳಿ, ಸಿಹಿ ತಿಂಡಿ ಖರೀದಿಸಲು ಬೇಕರಿ ಅಂಗಡಿಗೆ ಹೋಗಿದ್ದಾರೆ. ವಾಪಸ್‌ ಬಂದು ನೋಡಿದಾಗ ಬುದ್ಧಿ ಮಾಂಧ್ಯ ಮಗ ನಾಪತ್ತೆಯಾಗಿದ್ದಾರೆ.

ವಿಶೇಷಚೇತನ ಯುವಕ: ಯುವಕ ಬುದ್ಧಿ ಮಾಂಧ್ಯ ಇರೊದರಿಂದ ಸ್ಪಷ್ಟವಾಗಿ ಮಾತನಾಡಲು ಬರುವುದಿಲ್ಲ, ಕಾಣೆಯಾದಾಗ ಕೆಂಪು ಶರ್ಟ್‌, ಜಿನ್‌ ಪ್ಯಾಂಟ್‌ ಧರಿಸಿದ, ಜನರಿಗೆ ಕಂಡಲ್ಲಿ 8088235341 ಕರೆ ಮಾಡಿ ಎಂದು ತಂದೆ ಮಾಹಿತಿ ನೀಡಿದ್ದಾರೆ.
ಮಾಕೇಟ್‌ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.