ಬೈಕ್ ಸ್ಕಿಡ್ ಆಗಿ ಘಟಪ್ರಭಾ ನದಿಯಲ್ಲಿ ಕೊಚ್ಚಿಹೋದ ಬೈಕ್ ಸವಾರ ಹಾಗೂ ಹಿಂದೆ ಕುಳಿತ ಮಹಿಳೆ

ಬೈಕ್ ಸ್ಕಿಡ್ ಆಗಿ ಘಟಪ್ರಭಾ ನದಿಯಲ್ಲಿ ಕೊಚ್ಚಿಹೋದ ಬೈಕ್ ಸವಾರ ಹಾಗೂ ಹಿಂದೆ ಕುಳಿತ ಮಹಿಳೆ

ಮೂಡಲಗಿ : ತಾಲೂಕಿನ ಅವರಾದಿ ಗ್ರಾಮದ ಬಳಿ ಹರಿಯುವ ಘಟಪ್ರಭಾ ನದಿಗೆ ಅಡ್ಡಲಾಗಿ ನರ‍್ಮಿಸಿದ ಸೇತುವೆ ಮೇಲೆ ಸೋಮವಾರ ಮಧ್ಯಾಹ್ನ ೨ಗಂಟೆಗೆ ಬೈಕ್ ಸ್ಕಿಡ್ ಆಗಿ ನದಿಗೆ ಬಿದ್ದು ಇಬ್ಬರು ನದಿಯಲ್ಲಿ ಕೊಚ್ಚಿಹೋಗಿರುವ ಘಟನೆ ನಡೆದಿದೆ.

ಬೈಕ್ ಸವಾರರಾದ ಅವರಾದಿ ಗ್ರಾಮದ ಚನ್ನಪ್ಪ ಹರಿಜನ ( ೩೯), ದರ‍್ಗಾವ್ವ ಹರಿಜನ( ೩೨ )ನದಿ ಪಾಲಾಗಿದ್ದಾರೆ. ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕದಳ ಹಾಗೂ ಕುಲಗೂಡು ಪೊಲೀಸ್ ಠಾಣೆ ಸಿಬ್ಬಂದಿಗಳು ಮುಳುಗಿದವರ ಹುಡುಕಾಟ ನಡೆಸಿದರು ಬೈಕ್ ಮಾತ್ರ ಪತ್ತೆಯಾಗಿದೆ. ಆದರೆ ಇಬ್ಬರು ವ್ಯಕ್ತಿಗಳು ಪತ್ತೆಯಾಗಿಲ್ಲ.

ಬೈಕ್ ಸವಾರ ತನ್ನ ವೈಯಕ್ತಿಕ ಕೆಲಸ ನಿಮಿತ್ತ ಸ್ವಗ್ರಾಮದಿಂದ ಮಹಾಲಿಂಗಪೂರಕ್ಕೆ ತೆರಳುತ್ತಿದ ವೇಳೆ ವಾಹನಕ್ಕಾಗಿ ಕಾಯುತ್ತಿದ್ದ ಮಹಿಳೆ ಬೈಕ್ ಮೇಲೆ ಮಹಾಲಿಂಗಪೂರಕ್ಕೆ ಕರೆದುಕೊಂಡು ಹೋಗುವಂತೆ ಹೇಳಿದರಿಂದ ಬೈಕ್ ಹತ್ತಿಸಿಕೊಂಡು ಹೋಗುತ್ತಿರುವ ವೇಳೆಯಲ್ಲಿ ನಡೆದ ಘಟನೆ ಎಂದು ತಿಳಿದು ಬಂದಿದೆ. ಘಟಪ್ರಭಾ ನದಿಗೆ ತಡಗೋಡೆ ಇಲ್ಲದ ಕಾರಣ ಸೇತುವೆ ಮೇಲೆ ಬೈಕ್ ಸ್ಕಿಡ್ ಆಗಿ ನೀರಿಗೆ ಸಿಲುಕಿ ನೀರು ಪಾಲಾಗಿದ್ದಾರೆ.

ಸ್ಥಳಕ್ಕೆ ಭೇಟಿ ನೀಡಿದ ಮೂಡಲಗಿ ತಹಶೀಲ್ದಾರ್ ಶಿವಾನಂದ ಬಬಲಿ ಭೇಟಿ ನೀಡಿದರು. ಕತ್ತಲಾದ ಹಿನ್ನೆಲೆ ಕರ‍್ಯಾಚರಣೆ ಸ್ಥಗಿತಗೊಳಿಸಿ ಕರ‍್ಯಾಚರಣೆಗೆ ಸೋಮವಾರ ತಡ ರಾತ್ರಿ ಎಸ್.ಡಿ.ಆರ್. ಎಫ್ ತಂಡ ಸ್ಥಳಕ್ಕೆ ಆಗಮಿಸುತ್ತಿದ್ದು, ಮುಂಜಾನೆ ಕರ‍್ಯಾಚರಣೆ ಕೈಗೊಳ್ಳಲಿದ್ದಾರೆ ಎಂದು ಕುಲಗೂಡು ಪೊಲೀಸ್ ಠಾಣೆಯ ಪಿಎಸ್ಐ ಗೋವಿಂದಗೌಡ ಪಾಟೀಲ್ ತಿಳಿಸಿದ್ದಾರೆ.