ಬೆಳಗಾವಿ : ಬೆಳಗಾವಿಯ ಸುವರ್ಣ ಸೌಧದಲ್ಲಿ ನಡೆಯುತ್ತಿರುವ ಚಳಿಗಾಲದ ಅಧಿವೇಶನದ ಸಂದರ್ಭದಲ್ಲಿ ಬೆಳಗಾವಿ ಜಿಲ್ಲೆಯ ಗುತ್ತಿಗೆದಾರರು ಎದುರಿಸುತ್ತಿರುವ ಸಮಸ್ಯೆಗಳ ಕುರಿತು ಸರ್ಕಾರದ ಗಮನ ಸೆಳೆಯುವ ದೃಷ್ಟಿಯಿಂದ ಗುರುವಾರ ದಿನಾಂಕ 14/12/2023 ರಂದು ಸುವರ್ಣ ಗಾರ್ಡನ್ ಟೆಂಟ್ ನಂ 3 ರಲ್ಲಿ ಬೆಳಿಗ್ಗೆ 10 ಗಂಟೆಯಿಂದ ಸಾಯಂಕಾಲ 4 ಗಂಟೆ ವರೆಗೆ ಒಂದು ದಿನದ ಮುಷ್ಕರ ಹಮ್ಮಿಕೊಳ್ಳಲಾಗಿದೆ.
ಗುತ್ತಿಗೆದಾರರ ಸಂಘದ ರಾಜ್ಯಾಧ್ಯಕ್ಷ ಡಿ ಕೆಂಪಣ್ಣ ನೇತೃತ್ವದಲ್ಲಿ ಮುಷ್ಕರ ನಡೆಯಲಿದೆ.
ಈ ಮುಷ್ಕರದಲ್ಲಿ ರಾಜ್ಯ ಸಂಂಘದ ಪದಾಧಿಕಾರಿಗಳು ಉಪಸ್ಥಿತರಿರುವರು.
ಕಾರಣ ಗುತ್ತಿಗೆದಾರ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಮುಷ್ಕರದಲ್ಲಿ ಭಾಗವಹಿಸಿ ಗುತ್ತಿಗೆದಾರ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ದೃಷ್ಟಿಯಿಂದ ಮುಷ್ಕರವನ್ನು ಯಶಸ್ವಿಗೊಳಿಸ ಬೇಕೆಂದು ಹಿರಿಯ ಜಿಲ್ಲಾ ಗೌರವದ್ಯಕ್ಷ ಬಸವರಾಜ ಮಟಗಾರ ಪತ್ರಿಕಾ ಪ್ರಕಟಣೆಯ ಲ್ಲಿ ವಿನಂತಿಸಿದ್ದಾರೆ
ಡಿ 14 ರಂದು ಸುವರ್ಣ ಗಾರ್ಡನ್ ಟೆಂಟ್ ನಂ 3 ರಲ್ಲಿ ಗುತ್ತಿಗೆದಾರರ ಸಂಘದ ರಾಜ್ಯಾಧ್ಯಕ್ಷ ಡಿ ಕೆಂಪಣ್ಣ ನೇತೃತ್ವದಲ್ಲಿ ಮುಷ್ಕರ
