ಜಿ. ಪರಮೇಶ್ವರ್​ ಮೇಲೆ ಕಲ್ಲೆಸೆತ ಪ್ರಕರಣ: 2 ಆಯಾಮದಲ್ಲಿ ತನಿಖೆ ಶುರು

ಜಿ. ಪರಮೇಶ್ವರ್​ ಮೇಲೆ ಕಲ್ಲೆಸೆತ ಪ್ರಕರಣ: 2 ಆಯಾಮದಲ್ಲಿ ತನಿಖೆ ಶುರು

 

ತುಮಕೂರು: ಮಾಜಿ ಉಪ ಮುಖ್ಯಮಂತ್ರಿ ಜಿ. ಪರಮೇಶ್ವರ್​ ಮೇಲೆ ಕೊರಟಗೆರೆ ಕ್ಷೇತ್ರದಲ್ಲಿ ಕಲ್ಲು ತೂರಾಟ ನಡೆದ ಪ್ರಕರಣ ಇದೀಗ ಸಾಕಷ್ಟು ಅನುಮಾಗಳಿಗೆ ಎಡೆಮಾಡಿಕೊಟ್ಟಿದೆ. ಹೀಗಾಗಿ ಪೊಲೀಸರು ಎರಡು ಆಯಾಮಗಳಲ್ಲಿ ತನಿಖೆ ನಡೆಸುತ್ತಿದ್ದಾರೆ.

ವಿರೋಧಿಗಳಿಗೆ ಮಾಜಿ ಡಿಸಿಎಂ ಟಾರ್ಗೆಟ್ ಆದ್ರಾ? ಅನ್ನೋ ಪ್ರಶ್ನೆ ಉದ್ಭವವಾಗಿದೆ. ಪರಂ ಅವರಿಗೆ ಒಂದಲ್ಲ ಎರಡು ಬಾರಿ ಕಲ್ಲು ಎಸೆತವಾಗಿದೆ. ಮೊದಲ ಬಾರಿ ನಡೆದ ದಾಳಿಯಲ್ಲಿ ಅದೃಷ್ಟವಶಾತ್ ಪರಂ ಪಾರಾಗಿದ್ದರು. ಎರಡನೇ ಬಾರಿ ನಡೆದ ದಾಳಿಯಲ್ಲಿ‌ ಪರಂಗೆ ಕಲ್ಲೇಟು ಬಿದ್ದಿದೆ. ಪರಂ ಅವರು ಗೆಲ್ಲುವುದು ಖಚಿತ, ಹೀಗಾಗಿ ಕಲ್ಲು ಎಸೆತದಲ್ಲಿ ವಿರೋಧಿಗಳ ಕೈವಾಡ ಇದೆ ಎಂದು ಪರಂ ಆಪ್ತರು ಆರೋಪ ಮಾಡಿದ್ದಾರೆ.

ಕೂಡಲೇ ಬಂಧಿಸಿ ಇಷ್ಟೇ ಅಲ್ಲದೆ, ಪರಂ ಆಪ್ತರು ಪೊಲೀಸ್ ಇಲಾಖೆ ಮೇಲೆ‌ ಗೂಬೆ ಕೂರಿಸಿದ್ದಾರೆ. ಒಬ್ಬ ಮಾಜಿ ಡಿಸಿಎಂಗೆ ಭದ್ರತೆಯಿಲ್ಲ ಅಂದರೆ, ನಮ್ಮಂತಗ ಸಾಮಾನ್ಯರ ಗತಿ ಏನು ಎಂದು ಪ್ರಶ್ನೆ ಮಾಡಿದ್ದಾರೆ. ಆರೋಪಿಗಳನ್ನು ಕೂಡಲೇ ಬಂಧಿಸಿ, ಇಲ್ಲದಿದ್ದರೆ, ಪ್ರತಿಭಟನೆ ಮಾಡುವುದಾಗಿ ಎಚ್ಚರಿಕೆ ನೀಡಿದ್ದಾರೆ.