This is the title of the web page
This is the title of the web page

ಬಿಜೆಪಿಗೆ ತಕ್ಕ ಪಾಠ ಕಲಿಸಿಲು ಕಾಂಗ್ರೆಸ್ ಗೆ ಬೆಂಬಲಿಸಿ: ರಾಜ್ಯ ಸಂಚಾಲಕ ಕೇಶವಮೂರ್ತಿ ಮನವಿ

ಬಿಜೆಪಿಗೆ ತಕ್ಕ ಪಾಠ ಕಲಿಸಿಲು ಕಾಂಗ್ರೆಸ್ ಗೆ ಬೆಂಬಲಿಸಿ: ರಾಜ್ಯ ಸಂಚಾಲಕ ಕೇಶವಮೂರ್ತಿ ಮನವಿ

 

ಬೆಳಗಾವಿ: 5 ವರ್ಷಗಳಿಂದ ನಿರಂತರವಾಗಿ ಬಿಜೆಪಿ ಸರ್ಕಾರದಿಂದ ನಮ್ಮ ಸಮಾಜಗಳ ಹೋರಾಟಕ್ಕೆ ಬೆಲೆ ಸಿಕ್ಕಿಲ್ಲ ಈಗ ಅಧಿಕಾರ ಬಂದ ಮೇಲೆ ನ್ಯಾಯ ಒದಗಿಸುವ ಭರವಸೆ ನೀಡಿದ್ದಾರೆ. ಹೀಗಾಗಿ ರಾಜ್ಯಾದ್ಯಂತ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸೋಣ ಎಂದು ಪರಿಶಿಷ್ಟ ಜಾತಿಗಳ ಒಳಮೀಸಲಾತಿ ಜಾರಿ ಹೋರಾಟ ಸಮಿತಿ ರಾಜ್ಯ ಸಂಚಾಲಕರಾದ್ ಕೇಶವಮೂರ್ತಿ ಕರೆ ನೀಡಿದರು.

ಸಾಹಿತ್ಯ ಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಬೆಳಗಾವಿ ದಕ್ಷಿಣ ಭಾರತದಲ್ಲಿ ಪರಿಶಿಷ್ಟ ಜಾತಿಗಳ ಒಳ ಮೀಸಲಾತಿ ಹೋರಾಟವು ನಿರಂತರವಾಗಿ ಹೋರಾಟ ಮಾಡುತ್ತಿದ್ದು ಅದರ ಪ್ರಯುಕ್ತ ನ್ಯಾಯಮೂರ್ತಿ ಉಷಾ ಮೇರಾ ಸಮಿತಿಯು ಪರಿಶಿಷ್ಟ ಜಾತಿಗಳ ಒಳ ಮೀಸಲಾತಿ ವರ್ಗಿಕರಣ ಮಾಡುವದಕ್ಕೆ ಆಯಾ ರಾಜ್ಯಗಳಿಂದ ವರ್ಗಿಕರಣ ಮಾಡಿಸಲು ಸಂಸತನಲ್ಲಿ ಅನುಮೋದನೆ ಪಡೆದುಕೊಳ್ಳುವ ಜಾರಿ ಮಾಡಬಹುದೆಂದು ಕೇಂದ್ರ ಸರ್ಕಾರಕ್ಕೆ ಸಿಫಾರಸ್ಸು ಮಾಡಿತ್ತು ಅದನ್ನು ಬಗಹರಿಸಲು ಕ್ರಮ ತಗೆದುಕೊಳ್ಳಲು ಕಾಂಗ್ರೆಸ್ ಭರವಸೆ ನೀಡಿದ್ದು ಅದಕ್ಕಾಗಿ ಪರಿಶಿಷ್ಟ ಜಾತಿಗಳ ಒಳ ಮೀಸಲಾತಿ ಜಾರಿ ಹೋರಾಟ ಸಮಿತಿ ಕಾಂಗ್ರೆಸ್ ಬೆಂಬಲಿಸಬೇಕೆಂದು ಜನಾಂಗಕ್ಕೆ ಮನವಿ ಮಾಡುತ್ತೇವೆ ಮತ್ತು ಮಾದಿಗ ದಂಡೋರದ್ ರಾಷ್ಟ್ರೀಯ ಅಧ್ಯಕ್ಷರಾದ್ ಬಂದ್ ಕೃಷ್ಣ ಮಾದಿಗ ಬಿಜೆಪಿ ಬೆಂಬಲ ಹೇಳಿಕೆ ನೀಡಿರುವುದು ಖಂಡನೀಯ, ಸಮುದಾಯದವರು ಬಿಜೆಪಿಯನ್ನು ಬೆಂಬಲಿಸಬಾರದೆಂದು ಎಂದು ಕರೆ ಕೊಟ್ಟರು.

ಕರ್ನಾಟಕ ಮಾದಿಗ ಸಂಘಟನೆಗಳ ಒಕ್ಕೂಟವು ಮಾದಿಗ ಸಮುದಾಯದ ಮತದಾರರಲ್ಲಿ ಮನವಿ ಮಾಡಿಕೊಳ್ಳುವದನೆಂದರೆ ಒಳ ಮೀಸಲಾತಿಯನ್ನು ಜಾರಿ ಮಾಡದೆ ಉನ್ನತ ಶಿಕ್ಷಣದಲ್ಲಿ ಮೀಸಲಾತಿಯನ್ನು ರದ್ದುಪಡಿಸಿ ಖಾಸಗಿಕರಣದಲ್ಲಿ ಮೀಸಲಾತಿಯನ್ನು ಜಾರಿ ಮಾಡದೇ ಸಂವಿಧಾನವನ್ನು ಬದಲು ಮಾಡಲು ಹೊರಟಿರುವ ಬಿಜೆಪಿ ಪಕ್ಷಕ್ಕೆ ಮತ ಹಾಕದೆ ತಕ್ಕ ಪಠ ಕಲಿಸಿ ಬೇಕಾಗಿದೆ ಎಂದು ಆಗ್ರಹಿಸಿದರು. ಪತ್ರಿಕಾಗೋಷ್ಟಿಯಲ್ಲಿ ಬೆಳಗಾವಿ ಜಿಲ್ಲಾಧ್ಯಕ್ಷ ಗೋಪಿ ಬಳ್ಳಾರಿ, ಬಸವರಾಜ್ ಅರವೊಳಿ, ಯಲ್ಲಪ್ಪ ಹುಡಲಿ, ಶಂಕರ್ ದೊಡಮನಿ, ಪೆದ್ದನ್ನ ಅನಾಯಪುರ, ಸಂದೀಪ ಕುಲಕರ್ಣಿ ಸೇರಿದಂತೆ ಅನೇಕರು ಇದ್ದರು.