This is the title of the web page
This is the title of the web page

ಕೆಲವು ಟಿವಿ ಚಾನೆಲ್ ಗಳು ನನ್ನ ಹೇಳಿಕೆಯನ್ನು  ತಿರುಚಲಾಗಿದೆ, ಮಾಧ್ಯಮಗಳ ವಿರುದ್ಧ ವಿಧಾನ ಪರಿಷತ್’ನಲ್ಲಿ ಹಕ್ಕುಚ್ಯುತಿ ಮಂಡಿಸುತ್ತೇನೆ: ಬಿಕೆ ಹರಿಪ್ರಸಾದ್

ಕೆಲವು ಟಿವಿ ಚಾನೆಲ್ ಗಳು ನನ್ನ ಹೇಳಿಕೆಯನ್ನು  ತಿರುಚಲಾಗಿದೆ, ಮಾಧ್ಯಮಗಳ ವಿರುದ್ಧ ವಿಧಾನ ಪರಿಷತ್’ನಲ್ಲಿ ಹಕ್ಕುಚ್ಯುತಿ ಮಂಡಿಸುತ್ತೇನೆ: ಬಿಕೆ ಹರಿಪ್ರಸಾದ್

 

ಬೆಂಗಳೂರು: ಕೆಲವು ಟಿವಿ ಚಾನೆಲ್ ಗಳು ನನ್ನ  ಹೇಳಿಕೆಯನ್ನು ತಿರುಚಲಾಗಿದ್ದು, ಮಾಧ್ಯಮಗಳ ವಿರುದ್ಧ ಹಕ್ಕುಚ್ಯುತಿ ಮಂಡಿಸುತ್ತೇನೆಂದು ಕಾಂಗ್ರೆಸ್​ ಎಂಎಲ್​ಸಿ ಬಿಕೆ ಹರಿಪ್ರಸಾದ್ ಅವರು ಗುರುವಾರ ಹೇಳಿದ್ದಾರೆ.

ವಿಧಾನ ಪರಿಷತ್’ನಲ್ಲಿ ಮಾತನಾಡಿದ ಅವರು, ವಿಧಾನ ಪರಿಷತ್ ನಲ್ಲಿ ನಿನ್ನೆ ನಡೆದ ವಿಚಾರದಲ್ಲಿ ಕೆಲವು ಟಿವಿ ಚಾನೆಲ್ ಗಳು ಹೇಳಿಕೆ ಹಾಗೂ ಮಾಧ್ಯಮಗಳು ತಿರುಚಿ ಸುದ್ದಿ ಪ್ರಸಾರ ಮಾಡುತ್ತಿವೆ. ಇದು ಪರಿಷತ್ ಹಕ್ಕುಚ್ಯುತಿ ದಕ್ಕೆ ಆಗಲಿದೆ. ಹಾಗಾಗಿ ಸಭಾಧ್ಯಕ್ಷರಿಗೆ ಮನವಿ ಮಾಡಿದ್ದು, ಇಂದು ಕೆಲ ಮಾಧ್ಯಮಗಳ ಮೇಲೆ ಹಕ್ಕುಚ್ಯುತಿ ಮಂಡನೆ ಮಾಡುತ್ತೇನೆಂದು ಹೇಳಿದರು.

ತಿರುಚಿದ ಸುದ್ದಿಯನ್ನು ಬಿಜೆಪಿಯವರು ತಮ್ಮ ಪ್ರಚಾರಕ್ಕೆ ಬಳಸುತ್ತಿದ್ದಾರೆ. ಬಿಜೆಪಿಯ ಕೆಟ್ಟ ತಂತ್ರಗಳಿಗೆ ಕಡಿವಾಣ ಹಾಕಬೇಕಿದೆ. ನಾನು ನಿನ್ನೆ ಉತ್ತರ ನೀಡುವಾಗ, ಪಾಕಿಸ್ತಾನ ಬಿಜೆಪಿಗೆ ಶತ್ರು ರಾಷ್ಟ್ರ ಆಗಿರಬಹುದು. ಆದರೆ, ನೆರೆ ರಾಷ್ಟ್ರ ಎಂದು ಹೇಳಿದ್ದೆ. ಅದನ್ನು ಮಾಧ್ಯಮಗಳಲ್ಲಿ ಬೇರೆ ರೀತಿಯಲ್ಲಿ ಬಿಂಬಿಸುತ್ತಿದ್ದಾರೆ, ಇದರ ವಿರುದ್ದ ನಾನು ಹಕ್ಕುಚ್ಯುತಿ ಮಂಡಿಸುತ್ತೇನೆ ಎಂದು ತಿಳಿಸಿದರು.

ಪರಿಷತ್ತಿನಲ್ಲಿ ನಿನ್ನೆ ಮಾತನಾಡಿದ್ದ ಹರಿಪ್ರಸಾದ್ ಅವರು, ಪಾಕಿಸ್ತಾನ ನಮ್ಮ ಶತ್ರು ರಾಷ್ಟ್ರವಲ್ಲ, ನೆರೆಯ ರಾಷ್ಟ್ರ. ಬಿಜೆಪಿಯವರಿಗೆ ಪಾಕಿಸ್ತಾನ ಮತ್ತು ಮುಸ್ಲಿಂ ಎಂಬ ಎರಡು ವಿಷಯಗಳನ್ನು ಬಿಟ್ಟು ಬೇರೆ ಏನು ಮಾತನಾಡುವುದಕ್ಕೆ ಬರುವುದಿಲ್ಲ. ದೇಶದ ಶೇ.5ರಷ್ಟು ಜನರು ಪ್ರತಿದಿನ 46 ರೂಪಾಯಿಯಲ್ಲಿ ಜೀವನ ನಡೆಸುತ್ತಿರೋದರ ಬಗ್ಗೆ ಯಾರು ಮಾತನಾಡಲ್ಲ ಯಾಕೆ ಚೀನಾ ನಾಲ್ಕೂವರೆ ಸಾವಿರ ಸೆಕ್ವೇರ್ ಮೀಟರ್ ಭೂಮಿಯನ್ನು ಅತಿಕ್ರಮಣ ಮಾಡಿಕೊಂಡಿದೆ. ಇಂತಹ ವಿಷಯಗಳ ಬಗ್ಗೆ ಮಾತನಾಡದ ಇವರು ಶತ್ರು ರಾಷ್ಟ್ರದ ಜೊತೆಗೆ ನಮ್ಮ ಸಂಬಂಧದ ಬಗ್ಗೆ ಮಾತನಾಡುತ್ತಾರೆ. ಇವರ ಪ್ರಕಾರ ಶತ್ರು ರಾಷ್ಟ್ರ ಅಂದ್ರೆ ಪಾಕಿಸ್ತಾನ. ಅದು ನಮಗೆ ಶತ್ರು ರಾಷ್ಟ್ರ ಅಲ್ಲ. ನಮ್ಮ ಪಕ್ಕದಲ್ಲಿರೋ ರಾಷ್ಟ್ರ ಎಂದು ಹೇಳಿದ್ದರು.