ಬೆಳಗಾವಿ: ಗೋಕಾಕನಲ್ಲಿ ಕಾನೂನು ಸುವವ್ಯಸ್ಥೆ ಹಾಳಾಗಿದೆ. ಇಲ್ಲಿ ಒಂದು ರೀತಿಯ ಭಯದ ವಾತಾವರಣ ನಿರ್ಮಾಣ ಮಾಡಿದ್ದಾರೆ. ಪ್ರಜೆಗಳನ್ನು ಭಯದಲ್ಲಿ ಇಟ್ಟುಕೊಳ್ಳುವವರು ರಾಜಕಾರಣದಲ್ಲಿ ಇರಬಾರದು. ಇಂತಹ ಕೀಳುಮಟ್ಟದ ವ್ಯಕ್ತಿ ರಾಜಕಾರಣದಲ್ಲಿ ಇರೋದಕ್ಕೆ ನಾಲಾಯಕ್ ಎಂದು ರಮೇಶ ಜಾರಕಿಹೊಳಿ ವಿರುದ್ದ ಹರಿಹಾಯ್ದರು.
ಮಾದ್ಯಮಗಳೊಂದಿಗೆ ಮಾತನಾಡಿದ ಅವರು, ಮುಖ್ಯವಾಗಿ ಪ್ರಜಾಪ್ರಭುತ್ವದಲ್ಲಿ ಪ್ರಜೆಗಳೇ ದೊರೆಗಳು ಎಂದ ಅವರು, ಅಧಿಕಾರದ ಆಸೆಗಾಗಿ ಸಮ್ಮಿಶ್ರ ಸರ್ಕಾರವನ್ನು ಕೆಡವಿದರು, ಆದರೆ ಅವರ ಮಂತ್ರಿಗಿರಿ ಯಾತಕ್ಕಾಗಿ ಹೋಯ್ತು ಅನ್ನೋದು ನಿಮಗೆ ಗೊತ್ತಿದೆ ತಾನೆ ಎಂದು ರಮೇಶಗೆ ತಿವಿದರು.
ಬಿಜೆಪಿ ಸರ್ಕಾರ ಜನವಿರೋಧಿ ಸರ್ಕಾರ, ಇಂತಹ ಭ್ರಷ್ಟ ಬಿಜೆಪಿ ಸರ್ಕಾರವನ್ನು ಕಿತ್ತೆಸದು, ಕಾಂಗ್ರೆಸ್ ಸರ್ಕಾರವನ್ನು ಅಧಿಕಾರಕ್ಕೆ ತರಲು ಪ್ರತಿಯೊಬ್ಬರು ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಬೇಕು ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದರು.