ಕೈ ತೊರೆದು ಮತ್ತೆ ಕಮಲ ಹಿಡಿದ ಶೆಟ್ಟರ: ಬೆಳಗಾವಿಗೆ ಬರತ್ತಾರಾ? ಏನಿದು ರಾಜ ರಾಜಕಾರಣ!

ಕೈ ತೊರೆದು ಮತ್ತೆ ಕಮಲ ಹಿಡಿದ ಶೆಟ್ಟರ: ಬೆಳಗಾವಿಗೆ ಬರತ್ತಾರಾ? ಏನಿದು ರಾಜ ರಾಜಕಾರಣ!

 

ದೆಹಲಿ: ರಾಜಕಾರಣದಲ್ಲಿ ದೊಡ್ಡ ಬೆಳವಣಿಗೆಯೊಂದು ನಡೆದಿದ್ದು, ದೆಹಲಿಯಲ್ಲಿ ಗೃಹ ಸಚಿವ ಅಮಿತ್ ಶಾ ಅವರನ್ನು ಮಾಜಿ ಸಿಎಂ ಜಗದೀಶ್ ಶೆಟ್ಟರ್ ಭೇಟಿಯಾಗಿದ್ದು, ಮತ್ತೆ ಬಿಜೆಪಿ ಸೇರ್ಪಡೆಯಾಗಿದ್ದಾರೆ.

ದೆಹಲಿಯಲ್ಲಿ ಜಗದೀಶ್ ಶೆಟ್ಟರ್ ಜೊತೆಗೆ ಮಹತ್ವದ ಸಭೆ ನಡೆಸಿರುವ ಅಮಿತ್ ಶಾ ಬಿಜೆಪಿ ಮರು ಸೇರ್ಪಡೆ ಕುರಿತಂತೆ ಚರ್ಚೆ ನಡೆಸಿ ,ಬಿಎಸ್ ಯಡಿಯೂರಪ್ಪ ನೇತೃತ್ವದಲ್ಲಿ ಬಿಜೆಪಿಗೆ ಸೇರ್ಪಡೆಯಾಗಿ. ಮೋದಿಯವರನ್ನು ಮೂರನೆಯ ಬಾರಿಗೆ ಪ್ರಧಾನಿ ಮಾಡೋಣ ಎಂದು ಹೇಳಿದರು.