ಬೆಳಗಾವಿ: ಬಿಜೆಪಿ ಅಭ್ಯರ್ಥಿಯಾಗಿ ಹುಕ್ಕೇರಿ ಮತಕ್ಷೇತ್ರ ದಿಂದ ಕಣಕ್ಕೆ ಇಳಿಯಬೇಕು ಎಂದು ಆಸೆ ಇತ್ತು, ಪಕ್ಷಕ್ಕಾಗಿ 20 ವರ್ಷ ದುಡಿದ್ದೆನೆ ಬಿಜೆಪಿ ಹೈಕಮಾಂಡ್ ನಿರ್ಧಾರದಿಂದ ನೋವಾಗಿದೆ. ಕತ್ತಿ ಕುಟುಂಬದ ಕಿರುಕುಳಕ್ಕೆ ಬೇಸತ್ತು ರಾಜೀನಾಮೆ ನೀಡುತ್ತಿದ್ದೇನೆ ಎಂದು ಮಾಜಿ ಸಚಿವ ಶಶಿಕಾಂತ್ ನಾಯ್ಕ್ ತಿಳಿಸಿದ್ದಾರೆ.
ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಜಿಲ್ಲೆಯಲ್ಲಿ ಬಿಜೆಪಿಯನ್ನು ಹಳ್ಳಿಮಟ್ಟದಿಂದ ಬೆಳೆಸಲು ಬಾಬಾಗೌಡ ಪಾಟೀಲ್ ಜೊತೆ ಕೆಲಸ ಮಾಡಿದ್ದೇನೆ. ಕೇವಲ ಒಂದು ಸಲ ಮಾತ್ರ ನನಗೆ ಹುಕ್ಕೇರಿ ಮತಕ್ಷೇತ್ರದಿಂದ ಸ್ಪರ್ಧಿಸಲು ಅವಕಾಶ ಕೊಟ್ಟಿದೆ. ಆ ವೇಳೆ ದಿ.ಉಮೇಶ್ ಕತ್ತಿವಿರುದ್ಧ ಗೆದ್ದು ಮಂತ್ರಿ ಕೂಡ ಆಗಿದ್ದೆ. 243 ಕೋಟಿ ರೂಪಾಯಿ ಹಣ ಬಿಡುಗಡೆ ಸುವರ್ಣ ವಿಧಾನಸೌಧ ನಿರ್ಮಾಣ ಮಾಡಿದ್ದೇನೆ. ಅನೇಕ ನೀರಾವರಿ ಯೋಜನೆ ಸೌಲಭ್ಯ ಮಾಡಿದ್ದೇನೆ ಎಂದರು.
ನನಗೆ ಟಿಕೆಟ್ ಸಿಗೋ ನಿರೀಕ್ಷೆ ಇತ್ತು. ಆದರೆ ಹುಕ್ಕೇರಿ ಕ್ಷೇತ್ರದ ಟಿಕೆಟ್ ನಿಖಿಲ್ ಕತ್ತಿಗೆ ನೀಡಲಾಗಿದೆ. ಕುಟುಂಬದ ರಾಜಕಾರಣವನ್ನು ಬಿಜೆಪಿ ವಿರೋಧ ಮಾಡುತ್ತದೆ ಅಂತಾರೆ. ಆದರೆ ಒಂದೇ ಮನೆಯಲ್ಲಿ ಇಬ್ಬರಿಗೆ ಟಿಕೆಟ್ ಸಿಕ್ಕಿರುವುದು ವಿಪರ್ಯಾಸ. ಒಂದೇ ಮನೆಯಲ್ಲಿ ಎರಡು ಟಿಕೆಟ್ ಕೊಟ್ಟಿದ್ದಕ್ಕೆ ಶಶಿಕಾಂತ್ ನಾಯ್ಕ್ ಅಸಮಾಧಾನ ವ್ಯಕ್ತಪಡಿಸಿದರು.