ಹುಬ್ಬಳ್ಳಿ: “ಶಕ್ತಿ” ಯೋಜನೆಯಲ್ಲಿ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಬಸ್ಸುಗಳಲ್ಲಿ ಜೂನ್ ತಿಂಗಳಲ್ಲಿ ಒಟ್ಟು 2.55 ಕೋಟಿ ಮಹಿಳೆಯರು ಪ್ರಯಾಣ ಮಾಡಿದ್ದಾರೆ. ಪ್ರಯಾಣದ ಟಿಕೆಟ್ ಮೌಲ್ಯ ರೂ. 64.93 ಕೋಟಿ ಗಳಾಗಿದೆ.
ಮಹಿಳಾ ಸಬಲೀಕರಣದ ನಿಟ್ಟಿನಲ್ಲಿ ಆರಂಭಿಸಲಾಗಿರುವ ಕರ್ನಾಟಕದ ಮಹಿಳೆಯರಿಗೆ ಸರ್ಕಾರಿ ಬಸ್ಸಿನಲ್ಲಿ ರಾಜ್ಯದೊಳಗೆ ಉಚಿತ ಪ್ರಯಾಣದ “ಶಕ್ತಿ” ಯೋಜನೆಗೆ ನಿರೀಕ್ಷೆಗೂ ಮೀರಿ ಭಾರಿ ಸ್ಪಂದನೆ ವ್ಯಕ್ತವಾಗಿದೆ. ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ವ್ಯಾಪ್ತಿಯ ಧಾರವಾಡ, ಬೆಳಗಾವಿ, ಬಾಗಲಕೋಟೆ, ಗದಗ, ಹಾವೇರಿ ಹಾಗೂ ಉತ್ತರ ಕನ್ನಡ ಆರು ಜಿಲ್ಲೆಗಳ 9 ಸಾರಿಗೆ ವಿಭಾಗಗಳ ಬಸ್ಸುಗಳಲ್ಲಿ ಜೂನ್ 11ರಿಂದ 30 ರವರೆಗೆ 20 ದಿನಗಳ ಅವಧಿಯಲ್ಲಿ ಒಟ್ಟು 2,55,04,851 ಮಹಿಳೆಯರು ಪ್ರಯಾಣ ಮಾಡಿದ್ದಾರೆ. ಪ್ರಯಾಣದ ಟಿಕೆಟ್ ಮೌಲ್ಯ ರೂ. 64,93,44,818 ಗಳಾಗಿದೆ.
*ವಿಭಾಗವಾರು ಮಹಿಳೆಯರು ಹಾಗೂ ಪ್ರಯಾಣದ ಟಿಕೆಟ್ ಮೌಲ್ಯ(ಲಕ್ಷ ಗಳಲ್ಲಿ)*
ವಿಭಾಗ ಮಹಿಳೆಯರು /ಟಿಕೆಟ್ ಮೌಲ್ಯ
ಹು-ಧಾ ನಗರ ಸಾರಿಗೆ 33.49 / 423.73
ಹುಬ್ಬಳ್ಳಿಯಲ್ಲಿ ಗ್ರಾಮಾಂತರ 17.70 / 617.74
ಧಾರವಾಡ 20.92 / 533.02
ಬೆಳಗಾವಿ 39.23 / 786.90
ಚಿಕ್ಕೋಡಿ 32.55 /819.03
ಬಾಗಲಕೋಟೆ 30.84 / 982.78
ಗದಗ 26.76 / 766.80
ಹಾವೇರಿ 28.91 / 757.60
ಉತ್ತರ ಕನ್ನಡ 23.52 / 617.08
ಶಕ್ತಿ ಯೋಜನೆ ಜಾರಿಯಾದ ನಂತರ ಮಹಿಳಾ ಪ್ರಯಾಣಿಕರ ಜೊತೆಗೆ ಪುರುಷ ಪ್ರಯಾಣಿಕರ ಸಂಖ್ಯೆಯಲ್ಲೂ ಹೆಚ್ಚಳವಾಗಿದ್ದು ಒಟ್ಟಾರೆ ಪ್ರಯಾಣಿಕರ ಸಂಖ್ಯೆಯಲ್ಲಿ ಏರಿಕೆಯಾಗಿದೆ.
ಶಕ್ತಿ ಯೋಜನೆ ಜಾರಿಗೆ ಮೊದಲು ಜೂನ್ 1ರಿಂದ10 ರವರೆಗೆ ಮಹಿಳೆಯರು ಹಾಗೂ ಪುರುಷರು ಸೇರಿದಂತೆ ಒಟ್ಟು 174.84 ಲಕ್ಷ ಜನರು ಪ್ರಯಾಣ ಮಾಡಿದ್ದರು. ಪ್ರತಿದಿನ ಸರಾಸರಿ17.48 ಲಕ್ಷ ಗಳಾಗಿತ್ತು. ಯೋಜನೆ ಜಾರಿಯಾದ ನಂತರ ಜೂನ್11ರಿಂದ 30 ರವರೆಗೆ 20 ದಿನಗಳ ಅವಧಿಯಲ್ಲಿ 2.55 ಕೋಟಿ ಮಹಿಳೆಯರು ಹಾಗೂ 2.18 ಕೋಟಿ ಪುರುಷರು ಸೇರಿದಂತೆ ಒಟ್ಟು 4.74 ಕೋಟಿ ಜನರು ಪ್ರಯಾಣ ಮಾಡಿದ್ದಾರೆ. ಪ್ರತಿದಿನ ಪ್ರಯಾಣ ಮಾಡಿದ ಸರಾಸರಿ ಒಟ್ಟು ಪ್ರಯಾಣಿಕರ ಸಂಖ್ಯೆ 23.68 ಲಕ್ಷಕ್ಕೆ ಏರಿಕೆಯಾಗಿದೆ. ಯೋಜನೆ ಜಾರಿಗೆ ಮೊದಲು ಒಟ್ಟು ಪ್ರಯಾಣಿಕರಲ್ಲಿ ಮಹಿಳೆಯರ ಪ್ರಮಾಣ ಶೇಕಡಾ 40 ರಿಂದ 45 ರಷ್ಟು ಎಂದು ಅಂದಾಜಿಸಲಾಗಿತ್ತು .ಈಗ ಅದು ಶೇಕಡಾ 55 ರಿಂದ 60ಕ್ಕೆ ಏರಿಕೆಯಾಗಿದೆ.