” ಸವದಿಯನ್ನ ಸೋಲಿಸು ಅಥಣಿ ವಾಸ್ತವ್ಯ ಹೂಡಿದ್ದಾರಂತೆ, ನಮ್ಮ ಮನೆಯಲ್ಲಿಯೇ ಅರ್ಧ ಮನೆ ಬಿಟ್ಟುಕೊಡ್ತೀನಿ ತಾಕತ್ತಿದ್ದರೆ ಸೋಲಿಸಲಿ ನೋಡೊಣ”
ಗೋಕಾಕ್‌ಗೆ ಬರಬೇಕಾದ್ರೆ ಪಾಸ್‌ಪೋರ್ಟ್ ತಗೊಂಡು ಬರಬೇಕಾ. ನನಗೂ ಕೆಲವರು ಕೇಳಿದ್ರು ಸವದಿ
ಗೋಕಾಕದಲ್ಲಿ ಬಹಳಷ್ಟು ಬದಲಾವಣೆ ಕಾಣಬೇಕಿದೆ. ಹೀಗಾಗಿ ಮತದಾರರು ನಿರ್ಧಾರ ಮಾಡಿದ್ದಾರೆ ಕಡಾಡಿಯವರಿಗೆ ಮತ ನೀಡಿ ಬಹುಮತ ಅಂತರದಿಂದ ಗೋಕಾಕ ಜನರು ಗೆಲ್ಲಿಸುತ್ತಾರೆ.: ಸಿದ್ದರಾಮಯ್ಯ
ಗೋಕಾಕ: ” ಸವದಿಯನ್ನ ಸೋಲಿಸು ಅಥಣಿ ವಾಸ್ತವ್ಯ ಹೂಡಿದ್ದಾರಂತೆ, ನಮ್ಮ ಮನೆಯಲ್ಲಿಯೇ ಅರ್ಧ ಮನೆ ಬಿಟ್ಟುಕೊಡ್ತೀನಿ ತಾಕತ್ತಿದ್ದರೆ ಸೋಲಿಸಲಿ ನೋಡೊಣ” ಎಂದು ರಮೇಶ ಜಾರಕಿಹೊಳಿಗೆ ಅಥಣಿ ಕಾಂಗ್ರೆಸ್ ಅಭ್ಯರ್ಥಿ ಲಕ್ಷ್ಮಣ ಸವದಿ ಸವಾಲೆಸೆದರು.
ನಗರದಲ್ಲಿ ಆಯೋಜಿಸಿದ್ದ ಗೋಕಾಕ ವಿಧಾನಸಭಾ ಮತಕ್ಷೇತ್ರದ ಪ್ರಜಾಧ್ವನಿ ಸಮಾವೇಶದಲ್ಲಿ ಮಾತನಾಡಿದ ಅವರು,
ಗೋಕಾಕ್‌ಗೆ ಬರಬೇಕಾದ್ರೆ ಪಾಸ್‌ಪೋರ್ಟ್ ತಗೊಂಡು ಬರಬೇಕಾ. ನನಗೂ ಕೆಲವರು ಕೇಳಿದ್ರು ಸವದಿ ಎಂದು ಅವರು, ಗೋಕಾಕ ಕ್ಷೇತ್ರದಲ್ಲಿ ಹೇಳುವವರು ಕೇಳುವವರು ಇಲ್ಲದಂತಾಗಿದೆ. ಹೀಗಾಗಿ ಅಥಣಿಯಲ್ಲಿ, ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ ಓಡಾಡುತ್ತಿದ್ದಾರೆ ಮತದಾರರು ಅರ್ಥ ಮಾಡಿಕೊಳ್ಳಬೇಕು ಎಂದು ಕುಟುಕಿದರು.
ಗೋಕಾಕದಲ್ಲಿ ಬಹಳಷ್ಟು ಬದಲಾವಣೆ ಕಾಣಬೇಕಿದೆ. ಹೀಗಾಗಿ ಮತದಾರರು ನಿರ್ಧಾರ ಮಾಡಿ ಕಡಾಡಿಯವರಿಗೆ ಮತ ನೀಡಿ ಬಹುಮತ ಅಂತರದಿಂದ ಗೆಲ್ಲಿಸಿ, ಕಾಂಗ್ರೆಸ್‌ನ್ನು ಅಧಿಕಾರಕ್ಕೆ ತರಬೇಕು ಎಂದು ಮನವಿ ಮಾಡಿಕೊಂಡರು.
ಶಾಸಕಿ ಲಕ್ಷ್ಮಿ ಹೆಬ್ಬಾಳಕರ್ ಮಾತನಾಡಿ, ಬಿಜೆಪಿ ಸರ್ಕಾರದ ಅವಧಿಯಲ್ಲಿ ಯಾರು ನೆಮ್ಮದಿ ಜೀವನ ನಡೆಸುತ್ತಿಲ್ಲ. ಹೀಗಾಗಿ ನಿಮ್ಮ ನೆಮ್ಮದಿ ಜೀವನ ನಡೆಸಲು ಕಾಂಗ್ರೆಸ್ ಸರ್ಕಾರವನ್ನು ಅಧಿಕಾರಕ್ಕೆ ತರಬೇಕೆಂದು ಕರೆ ನೀಡಿದರು.
ಡಾ. ಮಹಾಂತೇಶ್ ಕಡಾಡಿ ಅವರನ್ನು ಹೆಚ್ಚಿನ ಸಂಖ್ಯೆಯಲ್ಲಿ ಮತ ನೀಡಿ ಗೆಲ್ಲಿಸಿ, ಅವರು ಗೆದ್ದರೆ ನಿಮ್ಮ ಗೋಕಾಕ ಮತಕ್ಷೇತ್ರವನ್ನು ಮಾದರಿ ಕ್ಷೇತ್ರವಾಗಿ ನಿರ್ಮಾಣ ಮಾಡುತ್ತಾರೆ ಎಂದು ಭರವಸೆ ನೀಡಿದರು.
ಕಾಂಗ್ರೆಸ್ ಮುಖಂಡ ಅಶೋಕ ಪೂಜಾರಿ ಮಾತನಾಡಿ, ಎಲ್ಲಾ ಸಮಾಜದ ಪ್ರಗತಿಗೆ ಹಗಲಿರುಳು ಶ್ರಮಿಸಿದ್ದ ಸರ್ಕಾರ ಎಂದರೆ ಅದು ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಎಂದು ತಿಳಿಸಿದರು.
ನನ್ನ ಹೋರಾಟದ ಹಾದಿಗೆ ಸತೀಶ್ ಜಾರಕಿಹೊಳಿ ಅವರು ಬೆಂಬಲ ನೀಡಿದ್ದಾರೆ. ಮುಂದೆಯೂ ಗೋಕಾಕ ಕ್ಷೇತ್ರದಲ್ಲಿ ಬದಲಾವಣೆ ಆಗಬೇಕಾದರೆ ಸತೀಶ್ ಜಾರಕಿಹೊಲಿಯವರು, ಲಕ್ಷ್ಮೀ ಹೆಬ್ಬಾಳಕರ್ ಅವರು ನಮ್ಮ ಬೆಂಬಲಕ್ಕೆ ನಿಲ್ಲಬೇಕೆಂದರು.
ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಮಹಾಂತೇಶ ಕಡಾಡಿ, ಕಾಂಗ್ರೆಸ್ ಮುಖಂಡರಾದ ಅಶೋಕ ಪೂಜಾರಿ, ಬೆಳಗಾವಿ ಜಿಲ್ಲಾ ಕಾಂಗ್ರೆಸ್ ಗ್ರಾಮೀಣ ಅಧ್ಯಕ್ಷ ವಿನಯ ನಾವಲಗಟ್ಟಿ, ದಸ್ತಗೀರ್ ಪೈಲ್ವಾನ್, ಬಸನಗೌಡ ಹೊಳೆಯಾಚಿ, ಎಂ.ಕೆ.ಪೂಜಾರಿ, ಇಮ್ರಾನ್ ತಪಕೀರ್, ಭಗವಂತ ಹಳ್ಳಿ, ಮುನ್ನಾ ಖತೀಬ್, ಪ್ರಕಾಶ ಬಾಗೋಜಿ, ವಿವೇಕ ಜತ್ತಿ, ಸಿದ್ಧಲಿಂಗ ದಳವಾಯಿ, ರಮೇಶ ಪಟಗುಂದಿ, ಚಂದ್ರಶೇಖರ್ ಕೊಣ್ಣೂರ, ಸಂಜೀವ್ ಪೂಜಾರಿ, ಜಾಕೀರ್, ಪ್ರಕಾಶ, ಕಲ್ಪನಾ ಜೋಶಿ, ಪ್ರೇಮಾ ಚಿಕ್ಕೋಡಿ ಸೇರಿದಂತೆ ಅನೇಕ ಮುಖಂಡರು ಇದ್ದರು.